ಶ್ರೀಕೃಷ್ಣಮಠದಲ್ಲಿ ತೆಪ್ಪೋತ್ಸವ ಸಹಿತ ಲಕ್ಷದೀಪೋತ್ಸವ ಕಾರ್ಯಕ್ರಮ

ಉಡುಪಿ: ಶ್ರೀಕೃಷ್ಣಮಠದಲ್ಲಿ ತೆಪ್ಪೋತ್ಸವ ಸಹಿತ ಲಕ್ಷದೀಪೋತ್ಸವ ನೆರವೇರಿತು. ಅಷ್ಟಮಠಾಧೀಶರು ಲಕ್ಷದೀಪೋತ್ಸವದ ಪ್ರಯುಕ್ತ ಅಟ್ಟಣಿಗೆಗಳಲ್ಲಿ ತಿಪಿಲೆಗಳನ್ನು ಜೋಡಿಸಿದರು. ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು,ಪಲಿಮಾರು ಮಠಾಧೀಶರಾದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು,ಪೇಜಾವರ ಮಠಾಧೀಶರಾದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು,ಕಾಣಿಯೂರು ಮಠಾಧೀಶರಾದ ಶ್ರೀವಿದ್ಯಾವಲ್ಲಭತೀರ್ಥ ಪಾದರು, ಅದಮಾರು ಕಿರಿಯ ಮಠಾಧೀಶರಾದ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಹಾಗೂ ಪಲಿಮಾರು ಕಿರಿಯ ಮಠಾಧೀಶರಾದ ಶ್ರೀವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಕ್ಷೀರಾಬ್ದಿ ಪೂಜೆ ನೆರವೇರಿಸಿ ಲಕ್ಷದೀಪೋತ್ಸವದಲ್ಲಿ ಭಾಗವಹಿಸಿದರು. ಕುಮಾರಿ ಹರಿಣೀ ಚೆನ್ನೈ ಇವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.

ತನ್ನ 30 ವರ್ಷಗಳ ಪ್ರತಿಜ್ಞೆ ಪೂರ್ಣಗೊಳಿಸಿದ ಪ್ರಧಾನಿ ಮೋದಿ: ಇದೇ ಮೊದಲ ಬಾರಿಗೆ ಅಯೋಧ್ಯೆಯ ಲಕ್ಷದೀಪೋತ್ಸವದಲ್ಲಿ ಭಾಗಿ

ಅಯೋಧ್ಯಾ: 1990 ಸೆಪ್ಟೆಂಬರ್ 25 ರಂದು ಸೋಮನಾಥ-ಅಯೋಧ್ಯೆ ರಾಮ ರಥಯಾತ್ರೆ ಪ್ರಾರಂಭವಾಯಿತು. ಆಗ ಗುಜರಾತ್ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿದ್ದ ನರೇಂದ್ರ ಮೋದಿ ಅವರು ಗುಜರಾತ್ ನಿಂದ ಹೊರಡುವ ಯಾತ್ರೆಯ ಸಾರಥಿಯಾಗಿದ್ದರು. ಈ ಏಕತಾ ಯಾತ್ರೆಯು ಕಾಶ್ಮೀರದ ಲಾಲ್ ಚೌಕ್‌ನಲ್ಲಿ 26 ಜನವರಿ 1992 ರಂದು ನರೇಂದ್ರ ಮೋದಿ ಅವರು ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ಮುಕ್ತಾಯಗೊಂಡಿತು. ಇದಕ್ಕೂ ಕೆಲ ದಿನಗಳ ಮುನ್ನ ಜನವರಿ 14 ರಂದು, ಅಯೋಧ್ಯೆ ರಾಮಜನ್ಮಭೂಮಿಯಲ್ಲಿ ಭಗವಾನ್ ಶ್ರೀರಾಮನ ಆಶೀರ್ವಾದವನ್ನು ಕೋರಿದ ಬಳಿಕ ಮೋದಿಯವರು […]