ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜು: ಮನು ಹಂದಾಡಿಯವರಿಂದ ನಗೆ ಹಬ್ಬ ಕಾರ್ಯಕ್ರಮ

ಕುಂದಾಪುರ : ಶ್ರೀ ವೆಂಕಟರಮಣ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಂದ, ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಮಾತೃಭಾಷೆಯನ್ನು ಉಳಿಸಿ ಬೆಳೆಸಬಹುದು ಎನ್ನುವುದನ್ನು ತೋರಿಸಿಕೊಟ್ಟ ಮನು ಹಂದಾಡಿಯವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮನು ಹಂದಾಡಿಯವರಿಂದ ವಿದ್ಯಾರ್ಥಿಗಳಿಗಾಗಿ ‘ನಗೆ ಹಬ್ಬ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕುಂದಾಪ್ರ ಕನ್ನಡದ ಕಂಪನ್ನು ಪಸರಿಸುತ್ತಾ ಸಮಾಜದಲ್ಲಿರುವ ಶಿಕ್ಷಣವಂತ, ಅಕ್ಷರವಂತ, ವಿದ್ಯಾವಂತರ ನಡುವೆ ಇರುವ ವ್ಯತ್ಯಾಸವನ್ನು ತಿಳಿಸುವುದರ ಮೂಲಕ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಮೌಲ್ಯಗಳನ್ನು […]
ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಗಣಕಯಂತ್ರ ಪ್ರಯೋಗಾಲಯ ಉದ್ಘಾಟನೆ

ಕುಂದಾಪುರ: ಜೂನ್12 ರಂದು ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಗಣಕಯಂತ್ರ ಪ್ರಯೋಗಾಲಯದ ಉದ್ಘಾಟನಾ ಸಮಾರಂಭವು ಜರುಗಿತು. ಕರ್ನಾಟಕ ಬ್ಯಾಂಕ್ ನ ಸಿ.ಇ.ಒ. ಮಹಾಬಲೇಶ್ವರ್ ಪ್ರಯೋಗಾಲಯವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಕಷ್ಟಪಟ್ಟು ಓದಬಾರದು ಆದರೆ ಇಷ್ಟಪಟ್ಟು ಓದಬೇಕು. ಜೊತೆಗೆ ಕೆಲಸ ಕಾರ್ಯದಲ್ಲಿ ಚಾತುರ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಮುಖ್ಯ ಅತಿಥಿಯಾಗಿ ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಭಾಗವಹಿಸಿದ್ದರು. ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷ ಹಾಗೂ ಬೈಂದೂರು ಕ್ಷೇತ್ರದ ಶಾಸಕ ಬಿ.ಎಮ್. ಸುಕುಮಾರ್ ಶೆಟ್ಟಿ […]
ಕಟ್ಟೆ ಭೋಜಣ್ಣ ಆತ್ಮಹತ್ಯೆ ಪ್ರಕರಣ: ಆಪಾದಿತ ಗಣೇಶ್ ಶೆಟ್ಟಿ ಜಾಮೀನ್ ಅರ್ಜಿ ತಿರಸ್ಕೃತ

ಕುಂದಾಪುರ: ಇಲ್ಲಿನ ಉದ್ಯಮಿ ಕಟ್ಟೆ ಭೋಜಣ್ಣ ಆತ್ಮಹತ್ಯೆ ಪ್ರಕರಣದಲ್ಲಿ ಆಪಾದಿತನೆಂದು ಬಂಧಿಸಲ್ಪಟ್ಟ ಮೊಳಹಳ್ಳಿ ಗಣೇಶ್ ಶೆಟ್ಟಿಯ ಜಾಮೀನು ಅರ್ಜಿಯನ್ನು ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಂಗಳವಾರ ತಿರಸ್ಕರಿಸಿದೆ. ಬಹುಕೋಟಿ ವ್ಯವಹಾರಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದ್ದು, ಆರೋಪಿತ ವ್ಯಕ್ತಿಯು ಕಟ್ಟೆ ಭೋಜಣ್ಣವರ ಜೊತೆ ಹಣಕಾಸು ವ್ಯವಹಾರ ಹೊಂದಿದ್ದನೆನ್ನಲಾಗಿದೆ. ಮೃತ ವ್ಯಕ್ತಿಯು ತಮ್ಮ ಡೆತ್ ನೋಟಿನಲ್ಲಿ ಒಟ್ಟು ಒಂಭತ್ತು ರೂಪಾಯಿ ಕೋಟಿಗಳಷ್ಟು ಸಾಲ ಬಾಕಿ ಇರುವ ಬಗ್ಗೆ ಬರೆದುಕೊಂಡಿದ್ದರು ಮತ್ತು ಈ ಕಾರಣಕ್ಕಾಗಿಯೆ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದರು. […]
ಕುಂದಾಪುರ: ಉದ್ಯಮಿ ಕಟ್ಟೆ ಭೋಜಣ್ಣನ ಆತ್ಯಹತ್ಯೆಗೆ ಆಭರಣ ವ್ಯಾಪಾರಿ ಮತ್ತು ಬ್ರೋಕರ್ ಕಾರಣ? ಡೆತ್ ನೋಟ್ ನಲ್ಲಿ ಬಯಲಾಯ್ತು ಸತ್ಯ

ಕುಂದಾಪುರ: ಗುರುವಾರದಂದು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಕುಂದಾಪುರದ ಖ್ಯಾತ ಉದ್ಯಮಿ, ಕಟ್ಟೆ ಭೋಜಣ್ಣ ಅವರ ಡೆತ್ ನೋಟ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇಬ್ಬರು ಉದ್ಯಮಿಗಳಾದ ಗೋಲ್ಡ್ ಜ್ಯುವೆಲರ್ಸ್‌ನ ಗಣೇಶ್ ಶೆಟ್ಟಿ ಮತ್ತು ಬ್ರೋಕರ್ ಹಂಗಳೂರು ಇಸ್ಮಾಯಿಲ್ ಅವರ ಹೆಸರನ್ನು ತಮ್ಮ ಡೆತ್ ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಮೊಳಹಳ್ಳಿ ಗಣೇಶ್ ಶೆಟ್ಟಿ ಎಂಬುವವರ ಮನೆಯ ಸಿಟ್‌ಔಟ್‌ನಲ್ಲಿ ಕುಳಿತು ತನ್ನ ರಿವಾಲ್ವರ್ ಬಳಸಿ ಆತ್ಮಹತ್ಯೆ ಮಾಡುತ್ತೇನೆಂದು ತಿಳಿಸುವ ಮುನ್ನ, ನಗದು ಹಾಗೂ ಚಿನ್ನ ವಾಪಸ್ ನೀಡದ ಕಾರಣ ಎದುರಿಸುತ್ತಿರುವ ಸಮಸ್ಯೆಗಳ […]
ಕೋಟೇಶ್ವರ: ಚಿನ್ಮಯಿ ಆಸ್ಪತ್ರೆ ಮಾಲೀಕ ಕಟ್ಟೆ ಗೋಪಾಲಕೃಷ್ಣ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

ಕೋಟೇಶ್ವರ: ಖ್ಯಾತ ಉದ್ಯಮಿ, ಚಿನ್ಮಯಿ ಆಸ್ಪತ್ರೆ ಮಾಲೀಕ ಕಟ್ಟೆ ಗೋಪಾಲಕೃಷ್ಣ (ಭೋಜಣ್ಣ) ಅವರು ಗುರುವಾರ ಬೆಳಿಗ್ಗೆ ತಮ್ಮ ಸ್ವಂತ ರಿವಾಲ್ವರ್ ನಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು. ಇಲ್ಲಿನ ಕೋಟೇಶ್ವರ ಸಮೀಪದ ಪುರಾಣಿಕ ರಸ್ತೆಯ ಕುದುರೆಬೆಟ್ಟುವಿನಲ್ಲಿರುವ ಮೊಳಹಳ್ಳಿ ಗಣೇಶ್ ಶೆಟ್ಟಿ ಎಂಬುವರ ಮನೆಯ ಸಿಟೌಟ್ ನಲ್ಲಿ ಕಟ್ಟೆ ಭೋಜಣ್ಣ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬಹುಕೋಟಿ ಉದ್ಯಮಿಯಾಗಿರುವ ಕಟ್ಟೆ ಭೋಜಣ್ಣ, ಗಂಗೊಳ್ಳಿ, ತಲ್ಲೂರು, ಬೈಂದೂರು ಸೇರಿದಂತೆ ಬೆಂಗಳೂರಿನಲ್ಲೂ ಹೋಟೆಲ್, ಬಟ್ಟೆ ಅಂಗಡಿ ಮೊದಲಾದ ಉದ್ಯಮಗಳನ್ನು […]