ಕುಂದಾಪುರ: ಕೋವಿಡ್ ನಿಯಮ ಉಲ್ಲಂಘಿಸಿ ಮೆಹಂದಿ ಕಾರ್ಯಕ್ರಮ ಆಯೋಜನೆ; ಎಂಟು ಮಂದಿಯ ವಿರುದ್ಧ ಕೇಸ್ ದಾಖಲು
ಕುಂದಾಪುರ: ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಮದುವೆ ಮೆಹಂದಿ ಕಾರ್ಯಕ್ರಮ ಆಯೋಜಿಸಿದ ಘಟನೆ ಕುಂದಾಪುರ ತಾಲೂಕಿನ ಕರ್ಕುಂಜೆ ಗ್ರಾಮದ ಅಸೋಡಿ ಎಂಬಲ್ಲಿ ಮೇ 21ರಂದು ಸಂಜೆ ನಡೆದಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಂಟು ಮಂದಿಯ ಪ್ರಕರಣ ದಾಖಲಾಗಿದೆ. ಕಮ್ರಾಡಿ ನಿವಾಸಿ ಭುಜಂಗ ಶೆಟ್ಟಿ ಎಂಬವರ ಮನೆಯಲ್ಲಿ ಮೆಹಂದಿ ಕಾರ್ಯಕ್ರಮ ನಡೆದಿತ್ತು. ಸುಮಾರು ಏಳು ಮಂದಿ ಮಾಸ್ಕ್ ಧರಿಸದೇ ಸುರಕ್ಷಿತ ಅಂತರ ಕಾಪಾಡದೇ ಕೋವಿಡ್ ನಿಯಮ ಉಲ್ಲಂಘಿಸಿ ಭಾಗವಹಿಸಿದ್ದಾರೆ ಎನ್ನಲಾದ ವೀಡಿಯೊ ವೈರಲ್ ಆಗಿದೆ. ಈ ಆಧಾರದಲ್ಲಿ ಮನೆ ಮಾಲೀಕ […]