ಕುಂದಾಪುರ: ವಿದ್ಯುತ್ ತಗುಲಿ ಹತ್ತನೇ ತರಗತಿಯ ವಿದ್ಯಾರ್ಥಿ ಮೃತ್ಯು
ಕುಂದಾಪುರ: ವಿದ್ಯುತ್ ತಗುಲಿ ಹತ್ತನೇ ತರಗತಿಯ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ಕುಂದಾಪುರದ ಉಪ್ಪಿನಕುದ್ರು ಗ್ರಾಮದ ಲಲಿತಾ ದುರ್ಗಾಪರಮೇಶ್ವರಿ ದೇವಸ್ಥಾನದ ಸಮೀಪ ಶನಿವಾರ ರಾತ್ರಿ ನಡೆದಿದೆ. ಮೃತ ಬಾಲಕನನ್ನು ಉಪ್ಪಿನಕುದ್ರು ಗ್ರಾಮದ ಗಂಗಾಧರ ಆಚಾರ್ ಅವರ ಮಗ ಧನುಷ್ (16) ಎಂದು ಗುರುತಿಸಲಾಗಿದೆ. ಈತ ಹತ್ತನೇ ತರಗತಿಯ ವಿದ್ಯಾರ್ಥಿ. ಧನುಷ್ ಅ .17ರ ಶನಿವಾರ 8 ಗಂಟೆಗೆ ಮನೆ ಸಮೀಪದ ಶ್ರೀ ಲಲಿತಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವಕ್ಕೆ ತೆರಳಿದ್ದನು. 9. 30ರ ಸುಮಾರಿಗೆ ದೇವಸ್ಥಾನದ ಕಂಪೌಂಡ್ ಗೆ […]