ರಾಜ್ಯದಲ್ಲೆ ಅತಿ ಹೆಚ್ಚು ಆದಾಯ ಹೊಂದಿರುವ ದೇವಸ್ಥಾನ ಕುಕ್ಕೆ ಸುಬ್ರಮಣ್ಯ: 146.01 ಕೋಟಿ ರೂ. ಆದಾಯ

ಬೆಳ್ತಂಗಡಿ: ಕುಕ್ಕೆ ಸುಬ್ರಹ್ಮಣ್ಯ ದೇವಾಲಯವು 2023-24ನೇ ಆರ್ಥಿಕ ವರ್ಷದಲ್ಲಿ 146.01 ಕೋಟಿ ರೂ. ಆದಾಯ ಗಳಿಸಿದೆ ಎಂದು ದತ್ತಿ ಇಲಾಖೆಯ ಆಯುಕ್ತರು ತಿಳಿಸಿದ್ದಾರೆ. ಈ ಮೂಲಕ ಸತತ 13ನೇ ವರ್ಷ ಆದಾಯದಲ್ಲಿ ರಾಜ್ಯದ ಮೊದಲ ದೇವಸ್ಥಾನವಾಗಿದೆ. ಕಳೆದ ವರ್ಷ ದೇವಳವು 123 ಕೋಟಿ ಆದಾಯ ಗಳಿಸಿತ್ತು. ರಾಜ್ಯ ಧರ್ಮದಾಯ ದತ್ತಿ ಇಲಾಖೆ ವ್ಯಾಪ್ತಿಯ ಕೊಲ್ಲೂರು ಮೂಕಾಂಬಿಕಾ ದೇವಳ 68.23 ಕೋಟಿ, ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನ 30.73 ಕೋಟಿ, ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನ 25.80 ಕೋಟಿ, ಮಂದಾರ್ತಿ […]

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ; ಧಾರ್ಮಿಕ ಕಾರ್ಯಕ್ರಮಗಳು

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ವಾರ್ಷಿಕ ದಿನದ ಅಂಗವಾಗಿ ಶನಿವಾರ 108 ಸಿಯಾಳ ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ರಾತ್ರಿ ದೇವಳದಲ್ಲಿ ದೇವರ ಉತ್ಸವ, ಕಾಶಿಕಟ್ಟೆವರೆಗೆ ದೇವರ ಚಿಕ್ಕ ರಥೋತ್ಸವ (ಪಂಚಮಿ) ನಡೆಯಿತು. ಕ್ಷೇತ್ರದ ಪ್ರಭಾರ ತಂತ್ರಿ ಸೀತಾರಾಮ ಎಡಪಡಿತ್ತಾಯ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ದೇವಳದ ನೈವೇದ್ಯ ಕೊಠಡಿಯ ದುರಸ್ತಿ ಕಾರ್ಯ ಪೂರ್ಣಗೊಂಡಿದ್ದು, ಲೋಕಾರ್ಪಣೆಗೊಳಿಸಲಾಯಿತು. ಬ್ರಹ್ಮಕಲಶೋತ್ಸವ ದಿನದ ಅಂಗವಾಗಿ ಕ್ಷೇತ್ರಕ್ಕೆ ಭಕ್ತರೊಬ್ಬರು 5 ಲಕ್ಷರೂ ವೆಚ್ಚದಲ್ಲಿ ಹೂವಿನ ಅಲಂಕಾರ ಮಾಡಿಸಿದ್ದರು. ವ್ಯವಸ್ಥಾಪನಾ […]

ಜಗತ್ಪ್ರಸಿದ್ದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಂಭ್ರಮದ ಚಂಪಾ ಷಷ್ಠಿ ಮಹೋತ್ಸವ

ಮಂಗಳೂರು: ಐತಿಹಾಸಿಕ ಮಾನ್ಯತೆಯಿರುವ ಕಾರ್ನಿಕದ ನಾಗ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾ ಷಷ್ಠಿ ಮಹೋತ್ಸವವು ಸಂಭ್ರಮ-ಸಡಗರದಿಂದ ಜರುಗಿತು. ಮಂಗಳವಾರದಂದು ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿಯ ಬ್ರಹ್ಮರಥೋತ್ಸವ ಅದ್ಧೂರಿಯಾಗಿ ನೆರವೇರಿತು. ಕುಕ್ಕೆ ಸುಬ್ರಹ್ಮಣ್ಯ ದೇವರು ರಥದಲ್ಲಿ ಕುಳಿತು ರಥಬೀದಿಯಲ್ಲಿ ಸಂಚರಿಸಿ ಭಕ್ತರಿಗೆ ದರ್ಶನವನ್ನಿತ್ತರು.ವೃಶ್ಚಿಕ ಲಗ್ನದಲ್ಲಿ ದೇವರ ವಿಗ್ರಹಗಳ ಬ್ರಹ್ಮರಥಾರೋಹಣ ನಡೆಯಿತು. ಉಮಾಮಹೇಶ್ವರ ರಥೋತ್ಸವದ ಬಳಿಕ ಚಂಪಾಷಷ್ಠಿ ಮಹಾರಥೋತ್ಸವ ನಡೆಯಿತು. ಸೋಮವಾರ ರಾತ್ರಿ ಪಂಚಮಿ ರಥೋತ್ಸವ ನಡೆಯಿತು. ಸುಮಾರು 163 ಭಕ್ತರು ಎಡೆಸ್ನಾನ ಸೇವೆ ನೆರವೇರಿಸಿದರು. ಗೋವಿಗೆ ನೈವೇದ್ಯ ಅರ್ಪಿಸಿದ […]

ನ.27 ರಿಂದ 30 ರವರೆಗೆ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ಮಹೋತ್ಸವ

ಕಡಬ: ದೇಶ-ವಿದೇಶಗಳಲ್ಲಿ ಪ್ರಸಿದ್ದಿ ಪಡೆದ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನ.27 ರಿಂದ 30 ರವರೆಗೆ ಸಂಭ್ರಮದ ಚಂಪಾಷಷ್ಠಿ ಮಹೋತ್ಸವ-2022 ಜರುಗಲಿದೆ. ಉತ್ಸವದ ವಿವರಗಳು: ನ.27 ಆದಿತ್ಯವಾರದಂದು ರಾತ್ರಿ ಹೂವಿನ ತೇರಿನ ಉತ್ಸವ, ನ.28 ಸೋಮವಾರದಂದು ರಾತ್ರಿ ಪಂಚಮಿ ರಥೋತ್ಸವ ಮತ್ತು ತೈಲ್ಯಾಭ್ಯಂಜನ, ನ.29 ಮಂಗಳವಾರದಂದು ಚಂಪಾಷಷ್ಠಿ ಮಹಾರಥೋತ್ಸವ, ನ.30 ಬುಧವಾರದಂದು ಅವಭೃತೋತ್ಸವ ಮತ್ತು ನೌಕಾವಿಹಾರ ನಡೆಯಲಿದೆ. ನ. 27 ಮತ್ತು 28 ರಂದು ರಾತ್ರಿ ಹೊತ್ತಿನ ಪ್ರಾರ್ಥನೆ ಸೇವೆ ಹಾಗೂ ನ.29 ರಂದು ಮಧ್ಯಾಹ್ನ […]