ಸರಕಾರಿ ಯೋಜನೆಗಳ ವಿಫಲತೆಗೆ ಜನರ ಮಾಹಿತಿ ಕೊರತಯೂ ಕಾರಣ: ಕುದಿ ಶ್ರೀನಿವಾಸ ಭಟ್
ಉಡುಪಿ: ಕೃಷಿಕರು ತಮ್ಮ ಜಮೀನನ್ನು ಪಾಳು ಬಿಡಬಾರದು, ಸರಕಾರ ನೀಡುತ್ತಿರುವ ಹಲವಾರು ಕೃಷಿ ಸೌಲಭ್ಯಗಳನ್ನು ತಿಳಿದುಕೊಳ್ಳಬೇಕು. ಜಿಲ್ಲೆಯಲ್ಲಿ ಸರಕಾರಿ ಯೋಜನೆಗಳ ವಿಫಲತೆಗೆ ಅಧಿಕಾರಿಗಳು, ಜನಪ್ರತಿನಿಧಿಳು ಮಾತ್ರವಲ್ಲದೇ ಜನರಲ್ಲಿರುವ ಮಾಹಿತಿ ಕೊರತೆ ಕೂಡಾ ಕಾರಣವಾಗಿದೆ ಎಂದು ಸಾಧನಶೀಲ ಕೃಷಿಕ ರಾಷ್ಟ್ರ ಪ್ರಶಸ್ತಿ ವಿಜೇತ ಕೃಷಿಕ ಕುದಿ ಶ್ರೀನಿವಾಸ ಭಟ್ ಹೇಳಿದರು. ಅವರು ಶನಿವಾರ ಉಡುಪಿ ಜಿಲ್ಲಾ ಕೃಷಿಕ ಸಂಘ ಉಡುಪಿ ರೆಸಿಡೆನ್ಸಿ ಹೋಟೆಲ್ ರೂಫ್ ಟಾಪ್ ಸಭಾಂಗಣದಲ್ಲಿ ಆಯೋಜಿಸಿದ್ದ ಕೃಷಿ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಸರಕಾರದ ಯೋಜನೆಗಳನ್ನು ಬಳಸಿಕೊಂಡು […]
ಕೃಷಿ ಇಲಾಖೆಯಲ್ಲಿ ವಿವಿಧ ಹುದ್ದೆ: ಟೆಂಡರ್ ಆಹ್ವಾನ
ಉಡುಪಿ, ಜುಲೈ 17: ಉಡುಪಿ ಜಿಲ್ಲೆಯ ಕೃಷಿ ಇಲಾಖೆಯ ಆತ್ಮ ಹಾಗೂ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಅಗತ್ಯವಿರುವ ಸಹಾಯಕ ತಾಂತ್ರಿಕ ವ್ಯವಸ್ಥಾಪಕರ 5 ಹುದ್ದೆ, ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕರ 3 ಹುದ್ದೆ, ಉಪ ಯೋಜನಾ ನಿರ್ದೇಶಕರ 1 ಹುದ್ದೆ, ಕಂಪ್ಯೂಟರ್ ಪ್ರೋಗ್ರಾಮರ್ 1 ಹುದ್ದೆ, ಜಿಲ್ಲಾ ಸಲಹೆಗಾರ 1 ಹುದ್ದೆ ಹಾಗೂ ತಾಂತ್ರಿಕ ಸಹಾಯಕರ 2 ಹುದ್ದೆಯ ಸೇವೆಯನ್ನು ಪಡೆಯುವ ಬಗ್ಗೆ ಸೇವೆಯನ್ನು ಖಾಸಗಿ ಸಂಸ್ಥೆಗಳಿಂದ ಹೊರಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕವಾಗಿ ಪಡೆದುಕೊಳ್ಳಲು ಇಚ್ಛೆಯುಳ್ಳ ಸಂಸ್ಥೆಗಳಿಂದ […]
ಮಣಿಪಾಲ: ರಾಜಾಪುರ ಸಾರಸ್ವತ ಮಹಿಳೆಯರಿಂದ ‘ಯವಾ ನೇಜಿ ಲಾವ್ಯ’
ಉಡುಪಿ: ಮಣಿಪಾಲದ ರಾಜಾಪುರ ಸಾರಸ್ವತ ಮಹಿಳಾ ವೇದಿಕೆಯ ವತಿಯಿಂದ ಕಾರ್ಕಳ ತಾಲೂಕಿನ ಹೆರ್ಮುಂಡೆ ಗ್ರಾಮದ ಕಲಾಯಿಗುತ್ತು ಎಂಬಲ್ಲಿ ಯವಾ ನೇಜಿ ಲಾವ್ಯ (ಬನ್ನಿ ನೇಜಿ ನಡೋಣ) ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ವೇದಿಕೆಯ ಅಧ್ಯಕ್ಷೆ ಮೋಹಿನಿ ಎನ್.ನಾಯಕ್ ಅವರ ನೇತೃತ್ವದಲ್ಲಿ ವೇದಿಕೆಯ ಸದಸ್ಯರೆಲ್ಲರೂ ಸೇರಿ ಸುರಿಯುವ ಮಳೆಯಲ್ಲಿಯೇ ಪಾಡ್ದನ ಹಾಡಿ, ಗದ್ದೆಯಲ್ಲಿ ನೇಜಿ (ಬತ್ತದ ಸಸಿ)ಗಳನ್ನು ನೆಟ್ಟು ತಮ್ಮ ಹಿರಿಯರ ಶ್ರಮ ಸಂಸ್ಕೃತಿಯನ್ನು ಗೌರವಿಸಿದರು. ಇದೇ ಸಂದರ್ಭದಲ್ಲಿ ಗದ್ದೆಯಲ್ಲಿ ಆಟೋಟ ಸ್ಪರ್ಧೆಗಳನ್ನು ನಡೆಸಲಾಯಿತು. ಮಧ್ಯಾಹ್ನ ಕಲಾಯಿಗುತ್ತಿನ ಮನೆಯವರಿಂದ ಗ್ರಾಮೀಣ […]
ಬಂಟಕಲ್ಲು ಕೆಸರುಗದ್ದೆ ಕ್ರೀಡೋತ್ಸವ ಉದ್ಘಾಟನೆ, ನಮ್ಮ ದೇಶದಲ್ಲಿ ಕೃಷಿ ಸಂಸ್ಕೃತಿಯೇ ಪ್ರಧಾನ: ಗಣಪತಿ ನಾಯಕ್
ಉಡುಪಿ: ನಮ್ಮ ಪೂರ್ವಿಕರ ಶ್ರಮದಾಯಕ ಜೀವನದಲ್ಲಿ ಕೃಷಿ ಸಂಸ್ಕ್ರತಿಯೇ ಪ್ರಧಾನವಾಗಿದ್ದು, ಈ ತಳಹದಿಯಲ್ಲಿ ಧಾರ್ಮಿಕ ವೈದಿಕ ಪರಂಪರೆ ಬೆಳೆದು ಬಂದಿದೆ. ಅವಿಭಕ್ತ ಕುಟುಂಬದಲ್ಲಿ ಮಕ್ಕಳಿಗೆ ನೋಡಿಕಲಿಯುವ ಅವಕಾಶವಿತ್ತು. ಈಗಿನ ಮಕ್ಕಳಿಗೆ ಈ ಅವಕಾಶವಿಲ್ಲ. ನವಪೀಳಿಗೆಯಲ್ಲಿ ಕೃಷಿ ಪರಂಪರೆಯನ್ನು ಪರಿಚಯಿಸುವಲ್ಲಿ ಕೆಸರುಗದ್ದೆ ಕ್ರೀಡೋತ್ಸವಗಳು ಪ್ರೇರಕ ಎಂದು ಶ್ರೀಕ್ಷೇತ್ರ ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ದೇವಳದ ಆಡಲಿತ ಮೊಕ್ತೇಸರ ಗುರ್ನೆಬೆಟ್ಟು ಗಣಪತಿ ನಾಯಕ್ ಹೇಳಿದರು. ಅವರು ಭಾನುವಾರ ಬಂಟಕಲ್ಲು ರಾಜಾಪುರ ಸಾರಸ್ವತ ಯುವವೃಂದ, ಶ್ರೀದುರ್ಗಾ ಮಹಿಳಾ ವೃಂದದ ಜಂಟಿ ಆಶ್ರಯದಲ್ಲಿ ಸಡಂಬೈಲು ಅನಂತರಾಮ […]
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ: ಪ್ರಯೋಜನ ಪಡೆಯಿರಿ
ಉಡುಪಿ, ಜೂನ್ 21: ಭಾರತ ಸರ್ಕಾರವು ರೈತರ ಆದಾಯ ವೃದ್ಧಿಸಲು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಎಂಬ ಹೊಸ ಯೋಜನೆಯನ್ನು ಘೋಷಿಸಿದ್ದು, ಸದ್ರಿ ಯೋಜನೆಯಡಿ ಭೂ-ಒಡತನ ಹೊಂದಿರುವ ಪ್ರತಿ ರೈತ ಕುಟುಂಬಕ್ಕೆ 3 ಕಂತುಗಳಲ್ಲಿ ವಾರ್ಷಿಕವಾಗಿ ಒಟ್ಟು ರೂ. 6000/-ಗಳನ್ನು ನೀಡಲು ಉದ್ದೇಶಿಸಿದ್ದು, ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರ, ಬಾಪೂಜಿ ಸೇವಾ ಕೇಂದ್ರ (ಗ್ರಾಮ ಪಂಚಾಯತ್), ಅಟಲ್‍ಜಿ ಜನ ಸ್ನೇಹಿ ಕೇಂದ್ರ, ನಾಡಾ ಕಛೇರಿ, ಗ್ರಾಮ ಲೆಕ್ಕಾಧಿಕಾರಿಗಳ ಕಛೇರಿಗೆ ತೆರಳಿ ಸ್ವಯಂ ಘೋಷಣೆ ಅನುಬಂಧದಲ್ಲಿ […]