ಫೆ.23: ಕೃಷಿಕ ಸಂಘದ ಆಶ್ರಯದಲ್ಲಿ 24ನೇ ‘ರೈತ ಸಮಾವೇಶ–2020’

ಉಡುಪಿ: ಉಡುಪಿ ಜಿಲ್ಲಾ ಕೃಷಿಕ ಸಂಘದ ಆಶ್ರಯದಲ್ಲಿ 24ನೇ ‘ರೈತ ಸಮಾವೇಶ–2020’ ಕುಂಜಿಬೆಟ್ಟು ಶಾರದಾ ಮಂಟಪದಲ್ಲಿ ಫೆ. 23ರಂದು ನಡೆಯಲಿದೆ ಎಂದು ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸಮಾವೇಶದಲ್ಲಿ ಕೃಷಿ ಮಾಹಿತಿ ಶಿಬಿರ ಹಾಗೂ ಆಧುನಿಕ ಕೃಷಿಗೆ ಸಂಬಂಧಿಸಿದ ಯಂತ್ರೋಪಕರಣ, ಸಲಕರಣೆ, ವಿವಿಧ ತಳಿಯ ಬೀಜಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಮುಜರಾಯಿ ಮತ್ತು ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಬೆಳಿಗ್ಗೆ 10ಗಂಟೆಗೆ ಸಮಾವೇಶವನ್ನು ಉದ್ಘಾಟಿಸುವರು ಎಂದರು. ಕರ್ಣಾಟಕ […]