ಶ್ರೀಕೃಷ್ಣ ಜನ್ಮಾಷ್ಟಮಿ ಸಮಾರೋಪ ಸಮಾರಂಭ; ಸ್ಪರ್ಧಿಗಳಿಗೆ ಬಹುಮಾನ ವಿತರಣೆ

ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿ ಅಷ್ಟದಿನೋತ್ಸವದ ಸಮಾರೋಪ ಸಮಾರಂಭವು ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ನಡೆಯಿತು. ಪರ್ಯಾಯ ಶ್ರೀ‌ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರತೀರ್ಥ ಸ್ವಾಮೀಜಿ ಮಾತನಾಡಿ, ಶ್ರೀಕೃಷ್ಣನನ್ನು ಪ್ರತಿಷ್ಠಾಪಿಸಿದ ಆಚಾರ್ಯ ಮಧ್ವರು ಮತ್ತು ಶ್ರೀವಾದಿರಾಜತೀರ್ಥರು ಹಾಕಿಕೊಟ್ಟ ಪರಂಪರೆಯನ್ನು ಮುಂದುವರೆಸಿಕೊಂಡು ದೇವರ ಪೂಜೆಯನ್ನು ವಿವಿಧ ಮುಖಗಳಲ್ಲಿ ಮಾಡುವುದಷ್ಟೇ ನಮ್ಮ ಕೆಲಸ. ಅದನ್ನೂ ಶ್ರೀಕೃಷ್ಣನೇ ಮಾಡಿಸುತ್ತಿದ್ದಾನೆ ಎಂದರು. ಕಾಣಿಯೂರು ಮಠಾಧೀಶರಾದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು ಹಾಗೂ ಶೀರೂರು ಮಠಾಧೀಶರಾದ ಶ್ರೀವೇದವರ್ಧನ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು. ಬೆಂಗಳೂರಿನ ವಿದ್ವಾನ್ ಬ್ರಹ್ಮಣ್ಯ ಆಚಾರ್ಯ ‘ದಾಸರು ಕಂಡಂತೆ ಶ್ರೀಕೃಷ್ಣ’ಕುರಿತು […]

ಈ ಬಾರಿಯೂ ವಿನೂತನ ವೇಷದೊಂದಿಗೆ ಜನರ ಮುಂದೆ ಬರಲಿದ್ದಾರೆ ರವಿ ಕಟಪಾಡಿ: ಎರಡು ವರ್ಷದ ಮಗುವಿನ ಚಿಕಿತ್ಸೆಗೆ ನಿಧಿ ಸಂಗ್ರಹ ಉದ್ದೇಶ

ಉಡುಪಿ: ಜಿಲ್ಲೆಯಾದ್ಯಂತ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವದ ಭರದ ಸಿದ್ಧತೆ ನಡೆದಿದೆ. ಪೊಡವಿಗೊಡೆಯನ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಲು ಎಲ್ಲರೂ ಸಿದ್ದರಾಗುತ್ತಿದ್ದಾರೆ. ಉಡುಪಿಯ ಶ್ರೀಕೃಷ್ಣ ಜನ್ಮಾಷ್ಟಮಿಯ ವಿಶೇಷ ಆಕರ್ಷಣೆ ರಂಗು ಬಿರಂಗಿ ವೇಷ ಭೂಷಣಗಳು ಮತ್ತು ಭರ್ಜರಿ ಹುಲಿ ಕುಣಿತಗಳು. ಶ್ರೀಕೃಷ್ಣ ಜನ್ಮಾಷ್ಟಮಿಯ ವೇಷ ಎಂದಾಗ ನೆನಪಾಗುವವರೆ ರವಿ ಕಟಪಾಡಿ. ಈ ಬಾರಿ ರವಿ ಯಾವ ವೇಷ ಧರಿಸಲಿದ್ದಾರೆ ಎನ್ನುವ ಕುತೂಹಲ ಎಲ್ಲರಿಗೂ ಇದ್ದೇ ಇರುತ್ತದೆ. ಈ ಬಾರಿ ಸಮಾಜ ಸೇವಕ ರವಿ ಕಟಪಾಡಿ ವಿಶಿಷ್ಟ ವೇಷಭೂಷಣ ತೊಡಲಿದ್ದಾರೆ. ಇಂಗ್ಲಿಷ್ […]

ಶ್ರೀಕೃಷ್ಣ ಮಠ: ಶ್ರೀ ಕೃಷ್ಣಾಷ್ಟಮಿ ಸ್ಪರ್ಧೆಗಳು ಮತ್ತು ನಿಯಮಗಳು

ಶ್ರೀ ಕೃಷ್ಣಾಷ್ಟಮಿ ಸ್ಪರ್ಧೆಗಳು ಮತ್ತು ನಿಯಮಗಳು 1. ಸ್ಪರ್ಧಾಳುಗಳು ಆಯಾ ವಿಭಾಗಕ್ಕೆ ತಮ್ಮ ಹೆಸರನ್ನು ಬಡಗುಮಾಳಿಗೆ ಕಛೇರಿಯಲ್ಲಿ ಅಥವಾ ಸೂಚಿತ ಮೊಬೈಲ್ ನಂಬರ್ ಗೆ ಸ್ಪರ್ಧಾ ದಿನದ ಹಿಂದಿನ ದಿನ ಸಂಜೆ 6 ರೊಳಗೆ ನೊಂದಾಯಿಸಬೇಕು. 2. ತಮ್ಮ ವಯಸ್ಸಿನ ದೃಡೀಕರಣ ಪತ್ರವನ್ನು ಸಂಬಂಧಿತರು ಕೇಳಿದಾಗ ನೀಡಬೇಕು. 3. ಪ್ರತಿಯೊಂದು ವಿಭಾಗದಲ್ಲೂ ಮೂರು ಬಹುಮಾನಗಳಿವೆ. ವ್ಯಕ್ತಿಗತ ಸ್ಪರ್ಧೆಗೆ ಹುಲಿವೇಷ ಕುಣಿತ ಸ್ಪರ್ಧೆ ಜಾನಪದ ಕುಣಿತ ತಂಡ ಪ್ರಥಮ ದ್ವಿತೀಯ ತೃತೀಯ 4. ಯಾವುದೇ ವಿಭಾಗದಲ್ಲಿ ನಿಗದಿತ ಸ್ಪರ್ಧಾಳುಗಳು […]