ದಿ ಎಕನಾಮಿಕ್ ಟೈಮ್ಸ್ ವತಿಯಿಂದ ಕೆ.ಎಂ.ಸಿ ಮಣಿಪಾಲದ ಮೂಳೆ ಮತ್ತು ಕೀಲಿನ ವಿಭಾಗಕ್ಕೆ ಅತ್ಯುತ್ತಮ ಆಸ್ಪತ್ರೆ ಪ್ರಶಸ್ತಿ
ಮಣಿಪಾಲ: ದಿ ಎಕನಾಮಿಕ್ ಟೈಮ್ಸ್ ನಿಂದ ಕಸ್ತೂರ್ಬಾ ಆಸ್ಪತ್ರೆಗೆ ಮೂಳೆ ಮತ್ತು ಕೀಲಿನ ವಿಭಾಗ (ದಕ್ಷಿಣ) 2022 ವಿಭಾಗದಲ್ಲಿ ಅತ್ಯುತ್ತಮ ಆಸ್ಪತ್ರೆ ಪ್ರಶಸ್ತಿ ಲಭಿಸಿದೆ. ಎಕನಾಮಿಕ್ ಟೈಮ್ಸ್ 2 ನೇ ಆವೃತ್ತಿಯ ‘ಆರೋಗ್ಯ ಕ್ಷೇತ್ರದ ಪ್ರಶಸ್ತಿಯಲ್ಲಿ’ ವಿಶೇಷತೆ ಗುರುತಿಸುವುದು, ಅಂಗೀಕರಿಸುವುದು ಮತ್ತು ಆರೋಗ್ಯ ಕ್ಷೇತ್ರದ ಪ್ರತಿಯೊಂದು ವಿಭಾಗದಲ್ಲಿ ಅದ್ಭುತ ಕೊಡುಗೆ ನೀಡಿರುವ ಸಂಸ್ಥೆ ಹಾಗು ಸಾಧಕರ ಸಾಧನೆಯನ್ನು ಧೃಡೀಕರಿಸುವುದು ಸೇರಿದೆ. ಎಕನಾಮಿಕ್ ಟೈಮ್ಸ್ ನ ಈ ಪ್ರಶಸ್ತಿಯ ಮಾನದಂಡರೋಗನಿರ್ಣಯ ಮತ್ತು ಪರೀಕ್ಷೆಗಳಲ್ಲಿ ಗಮನಾರ್ಹವಾದ ಬದಲಾವಣೆಗಳನ್ನು ಒದಗಿಸುವುದರಿಂದ ಹಿಡಿದು, […]
ಪೆರಂಪಳ್ಳಿ: ಉಚಿತ ನೇತ್ರ ತಪಾಸಣಾ ಶಿಬಿರ
ಪೆರಂಪಳ್ಳಿ: ಯುವಕ ಮಂಡಲ ಪೆರಂಪಳ್ಳಿ, ನೇತ್ರ ವಿಭಾಗ ಕೆಎಂಸಿ ಮಣಿಪಾಲ ಹಾಗೂ ಐ-ನೀಡ್ಸ್ ಆಪ್ಟಿಕಲ್ಸ್ ಮಣಿಪಾಲ ಇವರ ಜಂಟಿ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಹಾಗೂ ಆಯುಷ್ಮಾನ್ ಭಾರತ್ ಕಾರ್ಡ್ ನೋಂದಣಿ ಕಾರ್ಯಕ್ರಮವು ಯುವಕ ಮಂಡಲದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಕೆಎಂಸಿಯ ನೇತ್ರ ತಜ್ಞ ಡಾ. ಆಶ್ರಿತ್ ಕಾಮತ್, ಡಾ ನೀಲಾಯಿ ರೆಡ್ಡಿ, ಐ-ನೀಡ್ಸ್ ಆಪ್ಟಿಕಲ್ಸ್ ನ ಗಜಾನನ ನಾಯಕ್, ಗ್ರಾಮ ವನ್ ಕೇಂದ್ರದ ಇಮ್ತಿಯಾಜ್, ಯುವಕ ಮಂಡಲದ ಅಧ್ಯಕ್ಷ ಡೆನಿಸ್ ಪ್ರಸನ್ನ, ಗೌರವಾಧ್ಯಕ್ಶ ಹರಿಕೃಷಣ […]
ಪ್ರಧಾನಿ ಮೋದಿ ಜನ್ಮದಿನದ ಪ್ರಯುಕ್ತ ಸ್ವಯಂ ಪ್ರೇರಿತ ರಕ್ತದಾನ ಶಿಬಿರ
ಉಡುಪಿ: ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನ ಪ್ರಯುಕ್ತ ಸೇವಾ ಪಾಕ್ಷಿಕ ಹಮ್ಮಿಕೊಂಡಿದ್ದು, ಇದರ ಅಂಗವಾಗಿ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಉಡುಪಿ ಜಿಲ್ಲೆ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಉಡುಪಿ ಹಾಗೂ ರಕ್ತನಿಧಿ ವಿಭಾಗ ಕೆಎಂಸಿ ಮಣಿಪಾಲಇವರ ಸಹಯೋಗದೊಂದಿಗೆ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಸೆಪ್ಟಂಬರ್ 18 ಆದಿತ್ಯವಾರದಂದು ಬೆಳಿಗ್ಗೆ 8.30 ರಿಂದ ಮಧ್ಯಾಹ್ನ 1.00 ರವರೆಗೆ ಕೆಎಂಸಿ ಮಣಿಪಾಲದ ರಕ್ತನಿಧಿ ವಿಭಾಗದಲ್ಲಿ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 10 ಗಂಟೆಗೆ ಸಭಾ ಕಾರ್ಯಕ್ರಮವಿದ್ದು ಹೆಚ್ಚಿನ ಮಾಹಿತಿಗಾಗಿ ವೀಣಾ ಎಸ್. ಶೆಟ್ಟಿ 9901037557, ರಶ್ಮಿತಾ ಬಿ. ಶೆಟ್ಟಿ 9110831417, ಪ್ರಮೀಳಾ ಹರೀಶ್ […]
ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ: ಮಕ್ಕಳ ಅಸ್ಥಿ ಮಜ್ಜೆ ಕಸಿಯ ಯಶಸ್ಸಿನ ಸಂಭ್ರಮಾಚರಣೆ ಕಾರ್ಯಕ್ರಮ
ಮಣಿಪಾಲ: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಣಿಪಾಲದ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರದ ಭಾಗವಾಗಿರುವ ಮಕ್ಕಳ ರಕ್ತಶಾಸ್ತ್ರ ಮತ್ತು ಅಂಕೋಲಜಿ ವಿಭಾಗವು ಮಕ್ಕಳ ಅಸ್ಥಿಮಜ್ಜೆ ಕಸಿ ಸೌಲಭ್ಯದ ಯಶಸ್ಸನ್ನು ಆಚರಿಸುವ ಕಾರ್ಯಕ್ರಮವನ್ನು ಆಗಸ್ಟ್ 3 ರಂದು ನಗರದ ಓಶಿಯನ್ ಪರ್ಲ್ ಹೋಟೆಲಿನಲ್ಲಿ ಆಯೋಜಿಸಲಾಗಿತ್ತು. ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಡೀನ್ ಡಾ. ಶರತ್ ಕುಮಾರ್ ರಾವ್ ಮಕ್ಕಳ ಅಸ್ಥಿಮಜ್ಜೆ ಕಸಿ ಕ್ಲಿನಿಕ್ ನ ಮಾಹಿತಿ ಕರಪತ್ರಗಳನ್ನು ಬಿಡುಗಡೆ ಮಾಡಿ ಮಾತನಾಡಿ ಅಸ್ಥಿಮಜ್ಜೆ ಕಸಿ ವಿವಿಧ ಬಗೆಯ […]
ಮೇ 29 ರಂದು ಬೈಲೂರಿನಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ
ಕಾರ್ಕಳ: ಹಿಂದೂ ಜಾಗರಣ ವೇದಿಕೆ ಬೈಲೂರು ವಲಯ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್(ರಿ.), ಉಡುಪಿ, ರಕ್ತನಿಧಿ, ಕೆ.ಎಂ.ಸಿ ಆಸ್ಪತ್ರೆ ಮಣಿಪಾಲ ಇವರ ಸಹಯೋಗದೊಂದಿಗೆ, ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಮೇ 29 ರವಿವಾರದಂದು ಬೆಳಿಗ್ಗೆ 8.30 ರಿಂದ ಮಧ್ಯಾಹ್ನ 1.00 ರವರೆಗೆ ಬೈಲೂರಿನ ಸರಕಾರಿ ಕಾಲೇಜಿನಲ್ಲಿ ಆಯೋಜಿಸಲಾಗಿದೆ. ದಾನಿಗಳು ಸ್ವಯಂ ಪ್ರೇರಣೆಯಿಂದ ರಕ್ತ ದಾನ ಮಾಡಿ ಜೀವ ಉಳಿಸಬೇಕಾಗಿ ಕೇಳಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸುರೇಶ್ ಸಾಲ್ಯಾನ್-9449281268, ದೀಪಕ್-7022918175, ರಕ್ತದ ಆಪತ್ಭಾಂಧವ ಸತೀಶ್ ಸಾಲ್ಯಾನ್-9986668476 ಮಾಣಿಪಾಲ್ ಇವರನ್ನು ಸಂಪರ್ಕಿಸಲು ಕೋರಲಾಗಿದೆ.