ಕೇರಳ: ಸೌದಿ ಅರೇಬಿಯಾಕ್ಕೆ ಪ್ರಯಾಣ ಬೆಳೆಸಿದ ಹಜ್ ಯಾತ್ರಾರ್ಥಿಗಳ ಮೊದಲನೆ ತಂಡ

ಕೇರಳ : ಸೌದಿ ಅರೇಬಿಯಾದ ಮದೀನಾಕ್ಕೆ ಹಜ್ ಯಾತ್ರಾರ್ಥಿಗಳ ಮೊದಲನೆ ಬ್ಯಾಚ್ ನ ಮೊದಲ ವಿಮಾನ ಶನಿವಾರ ಕೊಚ್ಚಿ ವಿಮಾನ ನಿಲ್ದಾಣದಿಂದ ನಿರ್ಗಮಿಸಿತು. ಕೇರಳದ ವಕ್ಫ್ ಮತ್ತು ಹಜ್ ಯಾತ್ರೆಯ ಸಚಿವರಾದ ವಿ ಅಬ್ದುರಹಿಮಾನ್ ಅವರು ಧ್ವಜಾರೋಹಣ ಮಾಡುವ ಮೂಲಕ ಮೊದಲನೆ ಬ್ಯಾಚ್ ಅನ್ನು ಬೀಳ್ಕೊಟ್ಟರು. ಸೌದಿ ಅರೇಬಿಯ ಏರ್‌ಲೈನ್ಸ್‌ನ ಎಸ್ ವಿ 5747 ವಿಮಾನದಲ್ಲಿ 377 ಪ್ರಯಾಣಿಕರು ಹಜ್ ಯಾತ್ರೆಗೆ ಹೊರಟಿದ್ದಾರೆ.  “ಭಾರತೀಯ ಹಜ್ ಯಾತ್ರಿಕರ ಮೊದಲ ಬ್ಯಾಚ್ ಇಂದು ಹೊರಟಿದೆ ಮತ್ತು ಕೊನೆಯ ವಿಮಾನ […]

ಕೇರಳದಲ್ಲಿ ಸಿಎಎ ಜಾರಿ ಇಲ್ಲ: ಮುಖ್ಯಮಂತ್ರಿ ಪಿಣರಾಯಿ ವಿಜಯನ್

ತಿರುವನಂತಪುರಂ: ರಾಜ್ಯದಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು (ಸಿಎಎ) ತಮ್ಮ ಸರ್ಕಾರ ಜಾರಿಗೆ ತರುವುದಿಲ್ಲ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗುರುವಾರ ಪ್ರತಿಪಾದಿಸಿದ್ದಾರೆ. ತಮ್ಮ ಸರ್ಕಾರದ ಮೊದಲ ವಾರ್ಷಿಕೋತ್ಸವದ ಆಚರಣೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, “ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಬಗ್ಗೆ ಸರ್ಕಾರವು ಸ್ಪಷ್ಟ ನಿಲುವನ್ನು ಹೊಂದಿದೆ. ಅದು ಹಾಗೆಯೆ ಮುಂದುವರಿಯಲಿದೆ” ಎಂದು ಹೇಳಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಗಳು ಕಾನೂನನ್ನು ಜಾರಿಗೊಳಿಸುವುದಾಗಿ ಆಗಾಗ್ಗೆ ಹೇಳುತ್ತಿದ್ದಾರೆ. ಈ ವಿಚಾರದಲ್ಲಿ ರಾಜ್ಯ ಸರ್ಕಾರ ಸ್ಪಷ್ಟ ನಿಲುವು ಹೊಂದಿದೆ. ಅದರಲ್ಲಿ […]

ಕೇರಳಕ್ಕೆ ಮುಂಚಿತವಾಗಿ ಆಗಮಿಸಿದ ಮಾನ್ಸೂನ್: ಜೂನ್ 2 ರೊಳಗೆ ಕರ್ನಾಟಕಕ್ಕೆ ಮುಂಗಾರು ಮಳೆಯ ಸಿಂಚನ

ಬೆಂಗಳೂರು: ನೈಋತ್ಯ ಮಾನ್ಸೂನ್ ನಿಗದಿತ ಸಮಯಕ್ಕಿಂತ ಮೂರು ದಿನಗಳ ಮುಂಚಿತವಾಗಿ ಭಾನುವಾರವೆ ಕೇರಳಕ್ಕೆ ಆಗಮಿಸಿದ್ದು, ಜೂನ್ 2 ರ ವೇಳೆಗೆ ಕರ್ನಾಟಕಕ್ಕೆ ಆಗಮಿಸುವ ನಿರೀಕ್ಷೆಯಿದೆ. ಇದು ನಾಲ್ಕು ತಿಂಗಳ ಅವಧಿಯ ಸಾಮಾನ್ಯ ಮಳೆಗಾಲದ ಮುನ್ಸೂಚನೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಕೇರಳ, ತಮಿಳುನಾಡು, ಉಪ-ಹಿಮಾಲಯ ಪಶ್ಚಿಮ ಬಂಗಾಳ ಮತ್ತು ಬಿಹಾರದಲ್ಲಿ ಭಾರೀ ಮಳೆ ಸಂಭವಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ಭಾನುವಾರ ಬೆಳಿಗ್ಗೆ 8.30 ಕ್ಕೆ ದಾಖಲಿಸಿದ ಮಾಹಿತಿಯು ತೋರಿಸಿದೆ. ಕೇರಳದ 14 ಹವಾಮಾನ ಕೇಂದ್ರಗಳಲ್ಲಿ […]

ಕೇರಳದಲ್ಲಿ ಟೊಮೇಟೊ ಜ್ವರ ಪತ್ತೆ: ಐದು ವರ್ಷ ಕೆಳಗಿನ ಮಕ್ಕಳಲ್ಲಿ ಹೆಚ್ಚಿದ ಸೋಂಕು

ಕೊಯಂಬತ್ತೂರು: ಕೇರಳದ ಹಲವಾರು ಭಾಗಗಳಲ್ಲಿ ಮತ್ತೊಂದು ವೈರಸ್ ಪತ್ತೆಯಾಗಿದೆ. ಟೊಮೆಟೊ ಜ್ವರ ಅಥವಾ ಟೊಮೆಟೋ ಫ್ಲೂ ಎಂದು ಗುರುತಿಸಲಾಗುವ ಈ ಅಪರೂಪದ ವೈರಲ್ ಕಾಯಿಲೆಯು ಮಕ್ಕಳಲ್ಲೇ ಹೆಚ್ಚಾಗಿ ಕಂಡುಬರುತ್ತದೆ. ರಾಜ್ಯದಲ್ಲಿ ಇದುವರೆಗೆ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ 80 ಕ್ಕೂ ಹೆಚ್ಚು ಮಕ್ಕಳಿಗೆ ಸೋಂಕು ತಗುಲಿಸಿದೆ ಎಂದು ಪಿಟಿಐ ವರದಿ ಮಾಡಿದೆ. ವರದಿಯ ಪ್ರಕಾರ, ಈ ಸಂಖ್ಯೆ ಮತ್ತಷ್ಟು ಏರುವ ಮುನ್ಸೂಚನೆಗಳಿವೆ. ರೋಗ ಲಕ್ಷಣಗಳು: # ಟೊಮೆಟೊ ಫ್ಲೂ ಪತ್ತೆ ಹಚ್ಚಲಾಗದ ಜ್ವರವಾಗಿದ್ದು, ಐದು ವರ್ಷಕ್ಕಿಂತ ಕಡಿಮೆ […]