ಕೇಂದ್ರ ಸಚಿವೆಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ ಸಮಾಧಿಗೆ ನಮನ ಸಲ್ಲಿಕೆ

ವರ್ಕಲ: ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಹಾಗೂ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆಯವರು ಸಾಮಾಜಿಕ ಹರಿಕಾರ ಬ್ರಹ್ಮಶ್ರೀ ನಾರಾಯಣ ಗುರುಗಳ ಸಮಾಧಿ ದಿನದಂದು ಕೇರಳದ ವರ್ಕಲದಲ್ಲಿನ ಶ್ರೀ ನಾರಾಯಣ ಗುರುಗಳ ಸಮಾಧಿಗೆ ಭೇಟಿ ನೀಡಿ ಗೌರವ ನಮನಗಳನ್ನು ಸಲ್ಲಿಸಿದ್ದಾರೆ.

ವೈದ್ಯಕೀಯ ಗುಣಗಳಿರುವ ‘ಸ್ವರ್ಗದ ಹಣ್ಣಿನ’ ಬೀಜಗಳಿಂದ ವರ್ಷಕ್ಕೆ 2 ಲಕ್ಷ ಸಂಪಾದಿಸುವ ಕೇರಳದ ರೈತನ ಯಶೋಗಾಥೆ!

ಎರ್ನಾಕುಲಂ: 2018 ರಲ್ಲಿ ಕೇರಳದ ವೈಕೋಮ್‌ನ ಕಾರ್ಯಕ್ರಮವೊಂದರಲ್ಲಿ ಹೊರಭಾಗದಲ್ಲಿ ಮುಳ್ಳುಗಳನ್ನು ಹೊಂದಿರುವ ಹೊಳೆಯುವ ಕೆಂಪು-ಕಿತ್ತಳೆ ಬಣ್ಣದಲ್ಲಿರುವ ಕಲ್ಲಂಗಡಿ ಗಾತ್ರದ ಹಣ್ಣು, ಜೊಜೊ ಪುನ್ನಕಲ್ ಅವರ ಗಮನವನ್ನು ಸೆಳೆಯಿತು. ಹಣ್ಣಿನ ಬಗ್ಗೆ ಕುತೂಹಲಗೊಂಡು ಕೆಲವು ಬೀಜಗಳನ್ನು ಸಂಗ್ರಹಿಸಿ ಅದನ್ನು ತಮ್ಮ ತೋಟದಲ್ಲಿ ಬೆಳೆದ ಜೊಜೋ ಅವರು ಇಂದು ಅದರ ಬೀಜ ಮಾತ್ರದಿಂದಲೇ ವರ್ಷಕ್ಕೆ 2 ಲಕ್ಷ ರೂ ಸಂಪಾದನೆ ಮಾಡುತ್ತಿದ್ದಾರೆ! ಎರ್ನಾಕುಲಂನ ಜೋಜೋ ಪುನ್ನಕಲ್ ಅವರು ಕಳೆದ ನಾಲ್ಕು ವರ್ಷಗಳಿಂದ ವಿಯೆಟ್ನಾಂನ ವಿಲಕ್ಷಣ ಮತ್ತು ಪೌಷ್ಟಿಕಾಂಶಗಳುಳ್ಳ ಗ್ಯಾಕ್ ಹಣ್ಣನ್ನು […]

ಕೇರಳದಲ್ಲಿಂದು ಸಂಭ್ರಮದ ಓಣಂ: ವಾಮನ-ಬಲಿಯ ನೆನಪಿನ ಕುರುಹು ಈ ಹಬ್ಬ

ಶ್ರಾವಣ ಮಾಸದ ಶ್ರವಣಾ ನಕ್ಷತ್ರದಂದು ಮಹಾವಿಷ್ಣು ವಾಮನರೂಪದಲ್ಲಿ ಅವತರಿಸಿ, ಇಂದ್ರ ಪದವಿಯಲ್ಲಿದ್ದ ಬಲಿ ಚಕ್ರವರ್ತಿಯ ವಿಶ್ವಜಿತ್ ಯಾಗದಲ್ಲಿ ಮೂರು ಹೆಜ್ಜೆ ಭೂದಾನ ಕೇಳಿ, ಬಲಿಯ ಅಹಂಕಾರದ ಅಂಧಕಾರವನ್ನು ಕಳೆದು ಜ್ಞಾನದ ದೀವಿಗೆಯನ್ನು ಬೆಳಗಿದ ದಿನದ ನೆನಪಿಗಾಗಿ ಕೇರಳದಲ್ಲಿ ಆಚರಿಸುವ ಹಬ್ಬವೆ ಓಣಂ. ಸಂಸ್ಕೃತದ ಶ್ರಾವಣ ಅಪಭ್ರಂಶವಾಗಿ ಓಣಂ ಎಂದಾಗಿದೆ. ಬಲಿಯನ್ನು ಭಾರತದಿಂದ ಹೊರಗೆ ಕಳುಹಿಸಿದ್ದರ ಕುರುಹಾಗಿ ಅಂದು ಬಲಿಯ ಕಡೆಯವರು ದೋಣಿಗಳ ಮೂಲಕ ಪಲಾಯನಗೊಂಡದ್ದನ್ನು ಈ ದಿನದಂದು ದೋಣಿ ಸ್ಪರ್ಧೆಗಳ ಮೂಲಕ ನೆನಪಿಸಿಕೊಳ್ಳಲಾಗುತ್ತದೆ. ಅವಿಭಜಿತ ದ.ಕ ಜಿಲ್ಲೆಯಲ್ಲಿ […]

ಕೇರಳದ ಕಣ್ಣೂರಿನಲ್ಲಿ ಭಾರತದ ಎರಡನೇ ಮಂಕಿಪಾಕ್ಸ್ ಪ್ರಕರಣ ದೃಢ: ದ.ಕ ದಲ್ಲಿ ಹೈ ಅಲರ್ಟ್

ಮಂಗಳೂರು: ದ.ಕ ಜಿಲ್ಲೆಗೆ ತಾಗಿಕೊಂಡಿರುವ ಕೇರಳದಲ್ಲಿ ಭಾರತದ ಎರಡನೇ ಮಂಕಿಪಾಕ್ಸ್ ಪ್ರಕರಣ ದೃಢಪಟ್ಟಿದ್ದು, ದ.ಕ ಜಿಲ್ಲೆಯಲ್ಲಿ ರೋಗ ಹರಡುವ ಆತಂಕ ಎದುರಾಗಿದೆ. ಮೇ 13 ರಂದು ದುಬೈನಿಂದ ಕೇರಳಕ್ಕೆ ಬಂದ 31 ವರ್ಷದ ಕಣ್ಣೂರು ಮೂಲದ ವ್ಯಕ್ತಿಯೊಬ್ಬರಿಗೆ ವೈರಲ್ ಕಾಯಿಲೆ ಇರುವುದು ದೃಢಪಟ್ಟಿದೆ. ಕಣ್ಣೂರಿನ ಪರಿಯಾರಂ ವೈದ್ಯಕೀಯ ಕಾಲೇಜಿಗೆ ದಾಖಲಾಗಿರುವ ವ್ಯಕ್ತಿಯ ಆರೋಗ್ಯ ಸ್ಥಿತಿ ತೃಪ್ತಿಕರವಾಗಿದೆ ಎಂದು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿಕೆ ನೀಡಿದ್ದಾರೆ. ರೋಗಿಯೊಂದಿಗೆ ನಿಕಟ ಸಂಪರ್ಕದಲ್ಲಿದ್ದವರ ಮೇಲೆ ನಿಗಾ ಇರಿಸಲಾಗಿದೆ. ವಿಮಾನ […]

ಪ್ರಾಣವನ್ನೂ ಲೆಕ್ಕಿಸದೆ ಮಚ್ಚಿನಿಂದ ಹಲ್ಲೆ ನಡೆಸಿದ ಆರೋಪಿಯ ಹೆಡೆ ಮುರಿ ಕಟ್ಟಿದ ಕೇರಳದ ಸಿಂಘಂ ಬಗ್ಗೆ ವ್ಯಾಪಕ ಮೆಚ್ಚುಗೆ

ತಿರುವನಂತಪುರಂ: ಇಲ್ಲಿನ ಆರೋಪಿಯೊಬ್ಬ ಪೋಲೀಸ್ ಸಬ್ ಇನ್ಸ್‌ಪೆಕ್ಟರ್ ಮೇಲೆ ತಲವಾರಿನಿಂದ ಹಲ್ಲೆ ಮಾಡುತ್ತಿದ್ದು, ಅದನ್ನು ಸಮರ್ಥವಾಗಿ ಎದುರಿಸಿ, ಆರೋಪಿಯನ್ನು ಹೆಡೆಮುರಿ ಕಟ್ಟಿ ಪೊಲೀಸ್ ಜೀಪಿನಲ್ಲಿ ತಳ್ಳುತ್ತಿರುವ ವಿಡಿಯೋ ದೃಶ್ಯವೊಂದು ವೈರಲ್ ಆಗಿದ್ದು, ವಿಡೀಯೋದಲ್ಲಿದ್ದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನ ಸಮಯೋಚಿತ ಕ್ರಮಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿತ್ತು. ಆರೋಪಿ ಮಚ್ಚಿನಿಂದ ಹಲ್ಲೆ ನಡೆಸುತ್ತಿದ್ದರೂ ಪ್ರಾಣವನ್ನೂ ಲೆಕ್ಕಿಸದೆ ಆತನ ಕೈಯಿಂದ ಮಚ್ಚು ಕಸಿದು, ಆತನನ್ನು ಬಂಧಿಸಿದ ಸಬ್ ಇನ್ಸ್‌ಪೆಕ್ಟರ್ ಅರುಣ್ ಕುಮಾರ್ ಕೇರಳ ಸಿಂಘಂ ಆಗಿ ಹೊರಹೊಮ್ಮಿದ್ದಾರೆ. ಕರ್ತವ್ಯದಲ್ಲಿದ್ದ ಪೊಲೀಸ್ […]