ಕೇರಳದಲ್ಲಿಂದು ಸಂಭ್ರಮದ ಓಣಂ: ವಾಮನ-ಬಲಿಯ ನೆನಪಿನ ಕುರುಹು ಈ ಹಬ್ಬ

ಶ್ರಾವಣ ಮಾಸದ ಶ್ರವಣಾ ನಕ್ಷತ್ರದಂದು ಮಹಾವಿಷ್ಣು ವಾಮನರೂಪದಲ್ಲಿ ಅವತರಿಸಿ, ಇಂದ್ರ ಪದವಿಯಲ್ಲಿದ್ದ ಬಲಿ ಚಕ್ರವರ್ತಿಯ ವಿಶ್ವಜಿತ್ ಯಾಗದಲ್ಲಿ ಮೂರು ಹೆಜ್ಜೆ ಭೂದಾನ ಕೇಳಿ, ಬಲಿಯ ಅಹಂಕಾರದ ಅಂಧಕಾರವನ್ನು ಕಳೆದು ಜ್ಞಾನದ ದೀವಿಗೆಯನ್ನು ಬೆಳಗಿದ ದಿನದ ನೆನಪಿಗಾಗಿ ಕೇರಳದಲ್ಲಿ ಆಚರಿಸುವ ಹಬ್ಬವೆ ಓಣಂ. ಸಂಸ್ಕೃತದ ಶ್ರಾವಣ ಅಪಭ್ರಂಶವಾಗಿ ಓಣಂ ಎಂದಾಗಿದೆ. ಬಲಿಯನ್ನು ಭಾರತದಿಂದ ಹೊರಗೆ ಕಳುಹಿಸಿದ್ದರ ಕುರುಹಾಗಿ ಅಂದು ಬಲಿಯ ಕಡೆಯವರು ದೋಣಿಗಳ ಮೂಲಕ ಪಲಾಯನಗೊಂಡದ್ದನ್ನು ಈ ದಿನದಂದು ದೋಣಿ ಸ್ಪರ್ಧೆಗಳ ಮೂಲಕ ನೆನಪಿಸಿಕೊಳ್ಳಲಾಗುತ್ತದೆ.

Onam 2021: History, Significance, Observance and Importance

ಅವಿಭಜಿತ ದ.ಕ ಜಿಲ್ಲೆಯಲ್ಲಿ ದೀಪಾವಳಿ ಹಬ್ಬದಂದು ಬಲಿ ಚಕ್ರವರ್ತಿ ಭೇಟಿ ನೀಡುತ್ತಾನೆಂದು ಮೂರು ದಿನಗಳವರೆಗೆ “ಪರ್ಬ” ಆಚರಿಸುವ ಸಂಪ್ರದಾಯದಂತೆಯೆ, ಕೇರಳದಲ್ಲಿಯೂ ಬಲಿ ಚಕ್ರವರ್ತಿ ತನ್ನ ಪ್ರಜೆಗಳನ್ನು ನೋಡಲು ಬರುತ್ತಾನೆ ಎನ್ನುವ ಪ್ರತೀತಿ ಇದೆ.

ಚಿಂಗಂ ತಿಂಗಳಲ್ಲಿ ಆಚರಿಸಲಾಗುವ ಓಣಂ ಅಥಮ್‌ನಿಂದ ಪ್ರಾರಂಭವಾಗುತ್ತದೆ ಮತ್ತು ಪೊನ್ನೋಣಂವರೆಗೆ 10 ದಿನಗಳವರೆಗೆ ನಡೆಯುತ್ತದೆ. ಕೇರಳದಲ್ಲಿ ಧರ್ಮ ಮತ್ತು ಜಾತಿಯನ್ನು ಲೆಕ್ಕಿಸದೆ ಎಲ್ಲರೂ ತಿರುವೋಣಂ ಆಚರಣೆಗಳನ್ನು ಆಚರಿಸುತ್ತಾರೆ. ಕಠಿಣ ಮಾಸ ಕರ್ಕಿಡಕಂ (ಕರ್ಕಾಟಕ) ತಿಂಗಳ ನಂತರ ಚಿಂಗಂ(ಶ್ರಾವಣ) ಮಾಸ ಬರುತ್ತದೆ. ಇದು ರೈತರಿಗೆ ಸಮೃದ್ಧಿಯ ಭರವಸೆಯನ್ನು ನೀಡುತ್ತದೆ. ಓಣಂ ಅನ್ನು ಸುಗ್ಗಿಯ ಹಬ್ಬವನ್ನಾಗಿಯೂ ಆಚರಿಸಲಾಗುತ್ತದೆ.

80 Best Onam festival ideas | onam festival, happy onam, onam wishes

ಹಬ್ಬವು ದೋಣಿ ಸ್ಪರ್ಧೆ, ಓಣಸಾಧ್ಯ, ಅಥಾಚಮಯಂ, ಪುಲಿಕಳಿ, ಕುಮ್ಮಟ್ಟಿಕಳಿ, ತುಂಬಿ ತುಳ್ಳಲ್ ಮತ್ತು ಓಣಂ ಸದ್ಯ, ಮುಂತಾದ ಕಲಾತ್ಮಕ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರದರ್ಶಿಸುತ್ತದೆ. ವಿಶ್ವದಾದ್ಯಂತದ ಕೇರಳೀಯರು ತಮ್ಮ ತಮ್ಮ ಮನೆಗಳಲ್ಲಿ ಸಂಭ್ರಮದಿಂದ ಓಣಂ ಹಬ್ಬವನ್ನಾಚರಿಸುತ್ತಾರೆ.