ರಾಜ್ಯದ ಪ್ರಥಮ ತೇಲುವ ಸೇತುವೆ ಶೀಘ್ರದಲ್ಲೇ ಪುನರಾರಂಭ: ತಜ್ಞರ ವರದಿ ಬಳಿಕ ಸಾರ್ವಜನಿಕರಿಗೆ ಮುಕ್ತ

ಮಲ್ಪೆ: ಈ ಹಿಂದೆ ಮಲ್ಪೆ ಬೀಚ್‌ನಲ್ಲಿ ಹೊಸ ತೇಲುವ ಸೇತುವೆಯನ್ನು ಸ್ಥಾಪಿಸಲಾಗಿದ್ದು, ಮಳೆಗಾಲದ ಹಿನ್ನೆಲೆಯಲ್ಲಿ ಸೇತುವೆಯನ್ನು ಕಳಚಿಡಲಾಗಿತ್ತು. ಇದೀಗ ತೇಲುವ ಸೇತುವೆಯನ್ನು ಮತ್ತೆ ಸ್ಥಾಪಿಸಿ ಶೀಘ್ರದಲ್ಲೇ ಸಾರ್ವಜನಿಕರಿಗೆ ಮುಕ್ತಮಾಡಲಾಗುವುದು ಎಂದು ವರದಿಯಾಗಿದೆ. ಸೌಲಭ್ಯವು ವೀಕ್ಷಣೆಯಲ್ಲಿದ್ದು, ತಜ್ಞರ ತಂಡವು ತೇಲುವ ಸೇತುವೆಯ ಸಾಮರ್ಥ್ಯ ಮತ್ತು ಕಾರ್ಯಕ್ಷಮತೆಯನ್ನು ಪರೀಕ್ಷಿಸಿ ದೃಢಪಡಿಸಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ. ಮಲ್ಪೆ ಬೀಚ್‌ನ ಗುತ್ತಿಗೆದಾರ ಸುದೇಶ್ ಶೆಟ್ಟಿ ಮಾತನಾಡಿ, ಹಿಂದಿನ ತಪ್ಪುಗಳಿಂದ ನಾವು ಪಾಠ ಕಲಿತಿದ್ದೇವೆ. ಸೇತುವೆಯನ್ನು ಹೇಗೆ ಸರಿಪಡಿಸುವುದು ಮತ್ತು ಕಳಚುವುದು […]

ವರಾಹರೂಪಂ ಹಾಡಿನ ಮೊದಲನೆ ತಡೆ ಪಾರು: ಹಾಡಿನ ಬಳಕೆಗೆ ಕೋಝಿಕ್ಕೋಡ್ ಜಿಲ್ಲಾ ನ್ಯಾಯಾಲಯ ಅನುಮತಿ

ತಿರುವನಂತಪುರ: ಕಾಂತಾರ ಚಿತ್ರದ ವರಾಹರೂಪಂ ಹಾಡಿನ ಕಾನೂನಾತ್ಮಕ ಸಂಘರ್ಷದಲ್ಲಿ ನಿರ್ಮಾಪಕರಾದ ಹೊಂಬಾಳೆ ಫಿಲಂಮ್ಸ್ ನ ಮೊದಲನೆ ತಡೆ ಪಾರಾಗಿದ್ದು, ಹಾಡಿನ ಬಳಕೆಗೆ ಅನುಮತಿ ದೊರೆತಿದೆ. ವರಾಹರೂಪಂ ಹಾಡನ್ನು ತನ್ನ ನವರಸಂ ಹಾಡಿನಿಂದ ಕೃತಿಚೌರ್ಯ ಮಾಡಲಾಗಿದೆ ಎಂದು ಕೇರಳದ ಸಂಗೀತ ಬ್ಯಾಂಡ್ ಥೈಕ್ಕುಡಂ ಬ್ರಿಡ್ಜ್ ಕೋರ್ಟಿನಲ್ಲಿ ದಾವೆ ಹೂಡಿದ್ದು ಇದನ್ನು ಕೋಝಿಕ್ಕೋಡ್ ಜಿಲ್ಲಾ ನ್ಯಾಯಾಲಯ ವಜಾಗೊಳಿಸಿದೆ. ಈ ವಿಚಾರವಾಗಿ ಈ ಹಾಡಿನ ಬರಹಗಾರ ಶಶಿರಾಜ್ ಕಾವೂರು, “ಇಂದು ಕೆಳ ನ್ಯಾಯಾಲಯವು ಎರಡೂ ಕಡೆಯವರ ವಾದ ಆಲಿಸಿದ ಬಳಿಕ ಥೈಕ್ಕುಡಂ […]

ಕಾಸರಗೋಡು: ಭಕ್ತರ ಪ್ರೀತಿಯ ಬಬಿಯಾ ಇನ್ನಿಲ್ಲ; ವಿಷ್ಣುಲೋಕದತ್ತ ಪಯಣಿಸಿದ ದೈವಿಕ ಮೊಸಳೆ

ಕಾಸರಗೋಡು: ಇಲ್ಲಿನ ಅನಂತಪುರಂನ ಅನಂತಪದ್ಮನಾಭಸ್ವಾಮಿ ದೇವಸ್ಥಾನದ ಕೊಳದಲ್ಲಿ ವಾಸವಾಗಿದ್ದ ಭಕ್ತರ ಪ್ರೀತಿಯ ಮೊಸಳೆ ಬಬಿಯಾ ಸಾವನ್ನಪ್ಪಿದೆ. ಸುಮಾರು 75 ವರ್ಷ ವಯಸ್ಸಿನ ಈ ಮೊಸಳೆ ನಿನ್ನೆ ರಾತ್ರಿ ಸಾವನ್ನಪ್ಪಿದೆ. ದಂತಕಥೆಗಳ ಪ್ರಕಾರ, 1945 ರಲ್ಲಿ, ಬ್ರಿಟಿಷ್ ಅಧಿಕಾರಿಯೊಬ್ಬರು ದೇವಾಲಯದಲ್ಲಿ ಮೊಸಳೆಯೊಂದಕ್ಕೆ ಗುಂಡು ಹಾರಿಸಿದ್ದ ಕೆಲವೇ ದಿನಗಳಲ್ಲಿ ಬಬಿಯಾ ದೇವಾಲಯದ ಕೊಳದಲ್ಲಿ ಕಾಣಿಸಿಕೊಂಡಿದ್ದಳು. ಬಬಿಯಾ ಸಂಪೂರ್ಣವಾಗಿ ಸಸ್ಯಾಹಾರಿಯಾಗಿದ್ದಳು. Babiya the crocodile lived in Ananthapadmanabha Swamy Lake Temple of kasargod is no more pic.twitter.com/mFF5bjN4SU […]

ಕೇಂದ್ರ ಸಚಿವೆಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ ಸಮಾಧಿಗೆ ನಮನ ಸಲ್ಲಿಕೆ

ವರ್ಕಲ: ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಹಾಗೂ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆಯವರು ಸಾಮಾಜಿಕ ಹರಿಕಾರ ಬ್ರಹ್ಮಶ್ರೀ ನಾರಾಯಣ ಗುರುಗಳ ಸಮಾಧಿ ದಿನದಂದು ಕೇರಳದ ವರ್ಕಲದಲ್ಲಿನ ಶ್ರೀ ನಾರಾಯಣ ಗುರುಗಳ ಸಮಾಧಿಗೆ ಭೇಟಿ ನೀಡಿ ಗೌರವ ನಮನಗಳನ್ನು ಸಲ್ಲಿಸಿದ್ದಾರೆ.

ವೈದ್ಯಕೀಯ ಗುಣಗಳಿರುವ ‘ಸ್ವರ್ಗದ ಹಣ್ಣಿನ’ ಬೀಜಗಳಿಂದ ವರ್ಷಕ್ಕೆ 2 ಲಕ್ಷ ಸಂಪಾದಿಸುವ ಕೇರಳದ ರೈತನ ಯಶೋಗಾಥೆ!

ಎರ್ನಾಕುಲಂ: 2018 ರಲ್ಲಿ ಕೇರಳದ ವೈಕೋಮ್‌ನ ಕಾರ್ಯಕ್ರಮವೊಂದರಲ್ಲಿ ಹೊರಭಾಗದಲ್ಲಿ ಮುಳ್ಳುಗಳನ್ನು ಹೊಂದಿರುವ ಹೊಳೆಯುವ ಕೆಂಪು-ಕಿತ್ತಳೆ ಬಣ್ಣದಲ್ಲಿರುವ ಕಲ್ಲಂಗಡಿ ಗಾತ್ರದ ಹಣ್ಣು, ಜೊಜೊ ಪುನ್ನಕಲ್ ಅವರ ಗಮನವನ್ನು ಸೆಳೆಯಿತು. ಹಣ್ಣಿನ ಬಗ್ಗೆ ಕುತೂಹಲಗೊಂಡು ಕೆಲವು ಬೀಜಗಳನ್ನು ಸಂಗ್ರಹಿಸಿ ಅದನ್ನು ತಮ್ಮ ತೋಟದಲ್ಲಿ ಬೆಳೆದ ಜೊಜೋ ಅವರು ಇಂದು ಅದರ ಬೀಜ ಮಾತ್ರದಿಂದಲೇ ವರ್ಷಕ್ಕೆ 2 ಲಕ್ಷ ರೂ ಸಂಪಾದನೆ ಮಾಡುತ್ತಿದ್ದಾರೆ! ಎರ್ನಾಕುಲಂನ ಜೋಜೋ ಪುನ್ನಕಲ್ ಅವರು ಕಳೆದ ನಾಲ್ಕು ವರ್ಷಗಳಿಂದ ವಿಯೆಟ್ನಾಂನ ವಿಲಕ್ಷಣ ಮತ್ತು ಪೌಷ್ಟಿಕಾಂಶಗಳುಳ್ಳ ಗ್ಯಾಕ್ ಹಣ್ಣನ್ನು […]