ಪ್ಲಾಸ್ಟಿಕ್ ಮಯವಾಯಿತು ದೇವಭೂಮಿ! ಕೇದಾರನಾಥದ ರಸ್ತೆಯುದ್ದಕ್ಕೂ ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಕಸದ ರಾಶಿಯ ಸ್ವಾಗತ!!
ಉತ್ತರಾಖಂಡ: ಹಿಂದೂಗಳ ಪವಿತ್ರ ಕ್ಷೇತ್ರ, ದೇವ ಭೂಮಿಯೆಂದೇ ಪ್ರಸಿದ್ದವಾದ ಉತ್ತರಾಖಂಡದಲ್ಲಿಂದು ಎಲ್ಲಿ ನೋಡಿದರಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಕಸದ ರಾಶಿ! ಕೇದಾರನಾಥನ ದರ್ಶನಕ್ಕಾಗಿ ಬರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಸ್ವಚ್ಛತೆಯನ್ನು ನಿರ್ವಹಣೆ ಮಾಡುವಲ್ಲಿ ನಾಗರಿಕರ ಮತ್ತು ಸ್ಥಳೀಯ ಆಡಳಿತದ ಅಸಡ್ಡೆ ಢಾಳಾಗಿ ಎದ್ದು ಕಾಣುತ್ತಿದೆ. ಚಾರ್ ಧಾಮ್ ಯಾತ್ರೆಗೆಂದು ಬರುವ ಭಕ್ತಾದಿಗಳಿಗೆ ಪ್ಲಾಸ್ಟಿಕ್ ಮತ್ತು ಕಸದ ರಾಶಿಯ ದರ್ಶನ ಭಾಗ್ಯವೂ ಲಭ್ಯವಾಗುತ್ತಿರುವುದು ಕೇದಾರನಾಥನ ದೌರ್ಭಾಗ್ಯವೇ ಸರಿ. ಈ ಬಗ್ಗೆ ಪ್ರತಿಕ್ರಿಯಿಸಿರುವ ಗರ್ವಾಲ್ ಕೇಂದ್ರೀಯ ವಿಶ್ವವಿದ್ಯಾಲಯ ಭೂಗೋಳಶಾಸ್ತ್ರ […]