ಕಟಪಾಡಿ ಕಂಬಳದಲ್ಲಿ ಪ್ರಥಮ ಸ್ಥಾನ ಪಡೆದ ಅಚ್ಚಡ ಸುಪ್ರಸಾದ ವಸಂತ ಶೆಟ್ಟಿಯವರ ಕೋಣ
ಕಟಪಾಡಿ: ಇತಿಹಾಸ ಪ್ರಸಿದ್ದ ಕಟಪಾಡಿ ಕಂಬಳದಲ್ಲಿ ಭಾಗವಹಿಸಿದ ಅಚ್ಚಡ ಸುಪ್ರಸಾದ ವಸಂತ ಶೆಟ್ಟಿಯವರ ಕೋಣವು ನೇಗಿಲ ಹಿರಿಯ ವಿಭಾಗದಲ್ಲಿ 84 ಜೋಡಿ ಕೋಣಗಳಲ್ಲಿ ಪ್ರಥಮ ಸ್ಥಾನ ಗಳಿಸಿದೆ. ಕೋಣವನ್ನು ರಾಜ್ಯ ಪ್ರಶಸ್ತಿ ವಿಜೇತ ಮಿಜಾರು ಅಶ್ವತ್ಥಪುರ ಶ್ರೀನಿವಾಸ್ ಗೌಡ ಓಡಿಸಿದ್ದು, ಈ ಸಂದರ್ಭದಲ್ಲಿ ಕಂಬಳ ಸಮಿತಿಯ ಎಲ್ಲಾ ಸದಸ್ಯರು ಭಾಗವಹಿಸಿದ್ದರು.
ಕಟಪಾಡಿ: ಆಕಸ್ಮಿಕ ಅಗ್ನಿಅವಘಡಕ್ಕೆ ಮನೆ ಭಸ್ಮ; 3 ಲಕ್ಷ ರೂ. ಗೂ ಅಧಿಕ ಹಾನಿ
ಉಡುಪಿ: ಇಲ್ಲಿನ ಕಟಪಾಡಿಯ ಮಟ್ಟು ದುಗ್ಗುಪಾಡಿಯಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಮನೆಯೊಂದು ಹೊತ್ತಿ ಉರಿದ ಘಟನೆ ವರದಿಯಾಗಿದೆ. ಇಲ್ಲಿನ ವನಜ ಎನ್.ಕೆ ಎಂಬವರ ಮನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಮನೆ ಹಾಗೂ ದನದ ಕೊಟ್ಟಿಗೆ ಭಸ್ಮವಾಗಿದೆ. ಮನೆಯ ರಿಪೇರಿಗಾಗಿ ಮತ್ತು ದೈವದ ಗುಡಿ ಕಟ್ಟಲು ತಂದಿರಿಸಲಾಗಿದ್ದ ಮರದ ದಾರಂದಗಳು, ಕಿಟಕಿಗಳು, ಬೈಹುಲ್ಲು ಹಾಗೂ ವಿದ್ಯುತ್ ಸಲಕರಣೆಗಳು ಅಗ್ನಿಗೆ ಆಹುತಿಯಾಗಿವೆ. ಸ್ಥಳೀಯ ನಿವಾಸಿಗಳು ಮತ್ತು ಜಿಲ್ಲಾ ಅಗ್ನಿಶಾಮಕ ದಳವು ಬೆಂಕಿಯನ್ನು ನಂದಿಸಿ ಹೆಚ್ಚಿನ ಅವಘಡವಾಗುವುದನ್ನು ತಪ್ಪಿಸಿದ್ದಾರೆ. ಅಗ್ನಿ […]
ತ್ರಿಶಾ ವಿದ್ಯಾ ಕಾಲೇಜಿನಲ್ಲಿ ಏಡ್ಸ್ ಕುರಿತು ಜಾಗೃತಿ ಕಾರ್ಯಕ್ರಮ
ಕಟಪಾಡಿ: ಇಲ್ಲಿನ ತ್ರಿಶಾ ವಿದ್ಯಾ ಕಾಲೇಜಿನಲ್ಲಿ ವಿಶ್ವ ಏಡ್ಸ್ ದಿನದ ಅಂಗವಾಗಿ ಏಡ್ಸ್ ಕುರಿತು ಜಾಗೃತಿ ಕಾರ್ಯಕ್ರಮವನ್ನು ಡಿ.1ರಂದು ಹಮ್ಮಿಕೊಳ್ಳಲಾಯಿತು. ಸರಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸಲಹೆಗಾರ್ತಿ ಶ್ರೀಮತಿ ರೋಶಿನಿ ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಎಚ್ಐವಿ ಹಾಗೂ ಏಡ್ಸ್ ನಡುವಿನ ವ್ಯತ್ಯಾಸಗಳನ್ನು, ರೋಗದ ಲಕ್ಷಣಗಳನ್ನು, ರೋಗ ಹರಡುವ ವಿಧಾನ ಹಾಗೂ ಅದನ್ನು ತಡೆಗಟ್ಟುವ ಬಗ್ಗೆ ಮಾಹಿತಿ ನೀಡಿದರು. ಅಲ್ಲದೆ ನಾವು ರೋಗದ ವಿರುದ್ಧ ಹೋರಾಡಬೇಕೆ ಹೊರತು ರೋಗಿಯ ವಿರುದ್ಧ ಅಲ್ಲ ಎಂದು ಕರೆ ನೀಡಿದರು. […]
ಕಟಪಾಡಿ: ಬೈಕ್ ಗೆ ಲಾರಿ ಢಿಕ್ಕಿ; ಸಹಸವಾರ ಮೃತ್ಯುವಶ
ಕಟಪಾಡಿ: ಸ್ಕೂಟರ್‌ಗೆ ಲಾರಿ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸಹಸವಾರ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66 ರ ಕಟಪಾಡಿ ಜಂಕ್ಷನ್ ನಲ್ಲಿ ಶುಕ್ರವಾರ ನಡೆದಿದೆ. ಮೃತರನ್ನು ಉದ್ಯಾವರ ಬೊಳ್ಜೆಯ ಮೂಲದ ಸುಶಿಕ್ಷಿತ್ (20) ಎಂದು ಗುರುತಿಸಲಾಗಿದೆ. ಸುಶಿಕ್ಷಿತ್ ತನ್ನ ಗೆಳೆಯ ಜಯದೀಪ್ ಜೊತೆಗೆ ಕೆಟರೀಂಗ್ ಕೆಲಸಕ್ಕಾಗಿ ಬೈಕಿನಲ್ಲಿ ಹೋಗುತ್ತಿದ್ದ ವೇಳೆ ಬೈಕ್ ಲಾರಿಗೆ ಡಿಕ್ಕಿ ಹೊಡೆದಿದೆ. ಇದರಿಂದ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಸುಶಿಕ್ಷಿತ್ ನನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಅಫಘಾತದಿಂದ […]
ಕರಾಟೆ ಸ್ಪರ್ಧೆಯಲ್ಲಿ ಆರೂರು ಮೊರಾರ್ಜಿ ದೇಸಾಯಿ ವಸತಿ ಶಾಲಾ ವಿದ್ಯಾರ್ಥಿಗಳ ಸಾಧನೆ
ಉಡುಪಿ: ಕಟಪಾಡಿಯಲ್ಲಿ ಇತ್ತೀಚೆಗೆ ನಡೆದ ನ್ಯಾಷನಲ್ ಲೆವೆಲ್ ಕರಾಟೆ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ಆರೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳಾದ ಅಕಿಲೇಶ್ ದೇವಾಡಿಗ ಕುಮಿಟಿಯಲ್ಲಿ ಪ್ರಥಮ ಕಟದಲ್ಲಿ ತೃತೀಯ, ಪೃಥ್ವಿರಾಜ್ ಕುಮಿಟಿಯಲ್ಲಿ ಪ್ರಥಮ, ಸಂದೇಶ್ ಕುಮಿಟಿಯಲ್ಲಿ ದ್ವಿತೀಯ ಕಟದಲ್ಲಿ ತೃತೀಯ, ಶ್ರೀಕಾಂತ್ ಕುಮಿಟಿಯಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದು ಶಾಲೆಯ ಪ್ರಾಂಶುಪಾಲರು ಹಾಗೂ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿರುತ್ತಾರೆ. ಇವರು ಕರಾಟೆ ಶಿಕ್ಷಕ ಅಶೋಕ್ ಕುಮಾರ್ ನಡೂರು ಮಾರ್ಗದರ್ಶನದಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದಿರುತ್ತಾರೆ.