ಕನ್ನಡ ರಾಜ್ಯೋತ್ಸವ : ಠಾಗೋರ್ ಕಡಲ ತೀರದಲ್ಲಿ ಹಾರಾಡಿದ ನೂರಾರು ಹಳದಿ, ಕೆಂಪು ಗಾಳಿಪಟಗಳು
ಕಾರವಾರ: ಮೈಸೂರು ರಾಜ್ಯಕ್ಕೆ ‘ಕರ್ನಾಟಕ’ ಎಂದು ನಾಮಕರಣಗೊಂಡು 50 ವರ್ಷಗಳು ಪೂರ್ಣಗೊಂಡಿವೆ.ಈ ಸಂಭ್ರಮವನ್ನು ವಿಶೇಷವಾಗಿ ಆಚರಿಸಲು ರಾಜ್ಯ ಸರ್ಕಾರ ಪ್ರತಿ ಜಿಲ್ಲಾಡಳಿತಕ್ಕೂ ಸೂಚನೆ ನೀಡಿದೆ. ಉತ್ತರ ಕನ್ನಡ ಜಿಲ್ಲಾಡಳಿತದ ವತಿಯಿಂದ ಪ್ರಸಿದ್ಧ ರವೀಂದ್ರನಾಥ ಠಾಗೋರ್ ಕಡಲ ತೀರದಲ್ಲಿ ಕೆಂಪು ಮತ್ತು ಹಳದಿ ಬಣ್ಣದ ನೂರಾರು ಗಾಳಿಪಟಗಳನ್ನು ಇಂದು ಬೆಳಿಗ್ಗೆ ಹಾರಿಸಲಾಯಿತು. ಈ ಮೂಲಕ ವಿಶೇಷವಾಗಿ ಕನ್ನಡ ರಾಜ್ಯೋತ್ಸವ ಆಚರಣೆ ನಡೆಯಿತು. ಮೈಸೂರು ರಾಜ್ಯಕ್ಕೆ ‘ಕರ್ನಾಟಕ’ ಎಂದು ಮರುನಾಮಕರಣ ಮಾಡಿ 50 ವರ್ಷ ಪೂರ್ಣಗೊಂಡಿದ್ದು, ಕಡಲನಗರಿ ಕಾರವಾರದಲ್ಲಿ ನೂರಾರು […]