ಕೊಕರ್ಣೆ: ಗ್ರಾ.ಪಂವ್ಯಾಪ್ತಿಯ 3 ರಿಂದ 10 ನೇ ವಾರ್ಡ್ ಗಳ ಚುನಾವಣಾ ಪೂರ್ವಭಾವಿ ಸಭೆ

ಕೊಕ್ಕರ್ಣೆ: ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಯುಕ್ತ ಉಡುಪಿ ವಿಧಾನಸಭಾ ಕ್ಷೇತ್ರದ ಚುನಾವಣಾ ಪೂರ್ವಭಾವಿ ಸಭೆ ಇಂದು ಕೊಕ್ಕರ್ಣೆ ಗ್ರಾ.ಪಂ ವ್ಯಾಪ್ತಿಯ ಕಾಂಗ್ರೆಸ್ ಮುಖಂಡ ವೆಂಕಟೇಶ್ ಸುವರ್ಣ ಇವರ ಮನೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ಪ್ರಸಾದ್ ರಾಜ್ ಕಾಂಚನ್, ತಾ.ಪಂ. ಸದಸ್ಯೆ ಡಾ.ಅನಿತಾ ಶೆಟ್ಟಿ, ಗ್ರಾ.ಪಂ ಸದಸ್ಯ ನರಸಿಂಹ ಪೂಜಾರಿ, ಜಿ.ಪಂ. ಸದಸ್ಯ ಸುಧಾಕರ ಶೆಟ್ಟಿ ಮೇರ್ಮಾಡಿ, ಆನಂದ ಮರಕಾಲ ಮೊದಲಾದವರು ಉಪಸ್ಥಿತರಿದ್ದರು.

ಅಭಿಮಾನಿಗಳು, ಪಕ್ಷ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದ ಬೆಳ್ತಂಗಡಿ ಅಭ್ಯರ್ಥಿ ಹರೀಶ್ ಪೂಂಜಾ

ಬೆಳ್ತಂಗಡಿ: ಎರಡನೇ ಬಾರಿಗೆ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಅಪೂರ್ವ ಕ್ಷಣಗಳಿಗೆ ಸಾಕ್ಷಿಯಾದೆ. ಈ ಕ್ಷಣಗಳು ನಿಜಕ್ಕೂ ಅವಿಸ್ಮರಣೀಯವಾದುದು. ಬೆಳ್ತಂಗಡಿಗೆ ಬೆಳ್ತಂಗಡಿಯೇ ಸಂಭ್ರಮಿಸಿದ ದಿನವಿದು. ನವ ಬೆಳ್ತಂಗಡಿ ನಿರ್ಮಾಣದ ಕನಸು ಹೊತ್ತು ಮೊದಲ ಬಾರಿಗೆ 2018 ರಲ್ಲಿ ನಾಮಪತ್ರ ಸಲ್ಲಿಸಿದ್ದೆ. ಇಂದು 2023 ರಲ್ಲಿ ನವ ಬೆಳ್ತಂಗಡಿಯನ್ನು ಹೊಸ ಪರ್ವಕ್ಕೆ ಕೊಂಡೊಯ್ಯುವ ಸಂಕಲ್ಪದೊಂದಿಗೆ ನಾಮಪತ್ರ ಸಲ್ಲಿಸಿದ್ದೇನೆ. ಇದು ಕೇವಲ ನಾಮಪತ್ರ ಸಲ್ಲಿಕೆಯ ದಿನವಲ್ಲ, ವಿಜಯ ಸಂಕಲ್ಪದ ದಿನ. ಮೇ 13 ರಂದು ಮತ್ತೊಮ್ಮೆ ಸಂಭ್ರಮಿಸುವ ಸಂಕಲ್ಪದೊಂದಿಗೆ ಮರಳಿದ್ದೇವೆ, […]

ಚುನಾವಣಾ ಕರ್ತವ್ಯಕ್ಕೆ ಗೈರು: ಅಧಿಕಾರಿ ಅಮಾನತು

ಉಡುಪಿ: ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ 120 ಉಡುಪಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಮಟಪಾಡಿ, ಹಂದಾಡಿ, ಕುಮ್ರಗೋಡು ಮತ್ತು ವಾರಂಬಳ್ಳಿ ಮತಗಟ್ಟೆಗಳಿಗೆ ಜಿಲ್ಲಾ ಚುನಾವಣಾಧಿಕಾರಿಯವರು, ಸೆಕ್ಟರ್ ಅಧಿಕಾರಿಯಾಗಿ ಕೆ.ಪಿ. ದಯಾನಂದ ಜವಳಿ ಪ್ರವರ್ದನಾಧಿಕಾರಿ, ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಪಂಚಾಯತ್ ಉಡುಪಿ ಇವರನ್ನು ನೇಮಕ ಮಾಡಿ ಅದೇಶಿಸಲಾಗಿತ್ತು. ಸದ್ರಿ ಕೆ.ಪಿ. ದಯಾಂನದ್ ಅವರು ಚುನಾವಣಾ ಕರ್ತವ್ಯಕ್ಕೆ ಹಾಜರಾದಗೇ ನಿರ್ಲಕ್ಷ್ಯ ವಹಿಸಿ ದುರ್ನಡತೆ ತೋರಿರುತ್ತಾರೆ. ಈ ಬಗ್ಗೆ ಕಾರಣ ಕೇಳಿ ನೋಟೀಸ್ ನೀಡಿದ್ದರೂ ಸಹ ಯಾವುದೇ […]

ಭಾರತೀಯ ಜನತಾ ಪಕ್ಷದ ಅಂತಿಮ ಪಟ್ಟಿ ಬಿಡುಗಡೆ: ಜಗದೀಶ್ ಶೆಟ್ಟರ್ ವಿರುದ್ದ ಮಹೇಶ್ ತೆಂಗಿನಕಾಯಿ

ಬೆಂಗಳೂರು: ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷ 10 ಅಭ್ಯರ್ಥಿಗಳ ಮೂರನೇ ಮತ್ತು ಕೊನೆಯ ಪಟ್ಟಿಯನ್ನು ಸೋಮವಾರ ಬಿಡುಗಡೆ ಮಾಡಿದೆ. ಮೇ 10 ರಂದು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಎರಡನೇ ಪಟ್ಟಿಯಲ್ಲಿ 23 ಅಭ್ಯರ್ಥಿಗಳು ಮತ್ತು ಮೊದಲ ಪಟ್ಟಿಯಲ್ಲಿ 189 ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಪಕ್ಷವು ತನ್ನ ಅನುಭವಿ ನಾಯಕ ಅರವಿಂದ ಲಿಂಬಾವಳಿಯನ್ನು ಮಹದೇವಪುರ ಕ್ಷೇತ್ರದಿಂದ ಕೈಬಿಟ್ಟಿದ್ದು ಈ ಸ್ಥಾನದಲ್ಲಿ ಅವರ ಪತ್ನಿ ಮಂಜುಳಾ ಅರವಿಂದ್ ಲಿಂಬಾವಳಿಯನ್ನು ಕಣಕ್ಕಿಳಿಸಿದೆ. ಮಾಜಿ ಮುಖ್ಯಮಂತ್ರಿ ಜಗದೀಶ […]

ದಿ. ಗೋಪಾಲ್ ಭಂಡಾರಿಯವರ ಕಛೇರಿಗೆ ಭೇಟಿ ನೀಡಿದ ಮುನಿಯಾಲು ಉದಯ್ ಕುಮಾರ್ ಶೆಟ್ಟಿ

ಕಾರ್ಕಳ: ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವು ಬಲಪ್ರದರ್ಶನಕ್ಕೆ ತಾಲೀಮು ಆರಂಭಿಸಿದ್ದು ಕಾಂಗ್ರೆಸ್ ಅಭ್ಯರ್ಥಿ ಮುನಿಯಾಲು ಉದಯ ಕುಮಾರ್ ಶೆಟ್ಟಿ ಕೆಪಿಸಿಸಿ ನೀಡಿರುವ ಬಿ ಫಾರಂ ಪಡೆದುಕೊಂಡು ಮುನ್ನೂರಕ್ಕೂ ಹೆಚ್ಚು ವಾಹನ ಜಾಥದ ಮೂಲಕ ಮುಂಡ್ಕೂರಿನಿಂದ ಬೆಳ್ಮಣ್, ನಿಟ್ಟೆ, ಕಾರ್ಕಳ, ಮಾರಿಗುಡಿ, ಗೊಮ್ಮಟ ಬೆಟ್ಟ ಮೂಲಕ ಸಾಗಿ ಕಾರ್ಕಳದ ತಾಲೂಕು ಕಛೇರಿ ಬಳಿ ಇರುವ ತಮ್ಮ ಕಚೇರಿಗೆ ತಲುಪಿದರು. ಬಳಿಕ ದಿ. ಗೋಪಾಲ್ ಭಂಡಾರಿಯವರ ಕಛೇರಿಗೆ ಭೇಟಿ ನೀಡಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಭಾವುಕರಾದರು. ಈ ಸಂದರ್ಭದಲ್ಲಿ ಮಾತನಾಡಿದ […]