ಉಡುಪಿ ಸೀರೆ ಪುನಶ್ಚೇತನಗೈದ ಕದಿಕೆ ಟ್ರಸ್ಟ್ ಗೆ ನಬಾರ್ಡ್ ನಿಂದ ಸಿಕ್ಕಿತು ರಾಷ್ಟ್ರಮಟ್ಟದ ಹೆಗ್ಗಳಿಕೆ

ಕಾರ್ಕಳ: ಕಳೆದ ಮೂರುವರೆ ವರ್ಷಗಳಿಂದ ಅಳಿವಿನಂಚಿನಲ್ಲಿದ್ದ ಉಡುಪಿ ಸೀರೆ ನೇಕಾರಿಕೆ ಪುನಶ್ಚೇತನಕ್ಕೆ ಶ್ರಮಿಸುತ್ತಿರುವ ಕದಿಕೆ ಟ್ರಸ್ಟ್ ಈ ಸಲದ ನಬಾರ್ಡ್ ಮುಂಬೈ ಮುಖ್ಯ ಕಚೇರಿಯಿಂದ ಕೈಮಗ್ಗ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಸಂಸ್ಥೆಗಳಲ್ಲಿ ಒಂದು ಎಂಬುದಾಗಿ ರಾಷ್ಟ್ರ ಮಟ್ಟದಲ್ಲಿ ಆಯ್ಕೆ ಆಗಿದೆ. ಆಗಸ್ಟ್ 6 ರಂದು ನಡೆದ ಈ ಆನ್ಲೈನ್ ಕಾರ್ಯಕ್ರಮದಲ್ಲಿ ಕೊಡಲಾದ ಈ ಪ್ರಶಸ್ತಿಯನ್ನು ಆ.16 ರಂದು ಕಿನ್ನಿಗೋಳಿಯ ತಾಳಿಪಾಡಿ ನೇಕಾರ ಸಂಘದಲ್ಲಿ ನಡೆದ ರಾಷ್ಟ್ರೀಯ ಕೈಮಗ್ಗ ಸಪ್ತಾಹ ಆಚರಣೆಯ ಸಂದರ್ಭದಲ್ಲಿ ದ ಕ ಜಿಲ್ಲಾಧಿಕಾರಿ […]

‘ಸಿಜಿಕೆ-2020 ರ ಪ್ರಶಸ್ತಿಗೆ ಕಲಾವಿದ ಚಂದ್ರನಾಥ ಬಜಗೋಳಿ ಆಯ್ಕೆ

ಕಾರ್ಕಳ: ಮುದ್ರಾಡಿ ನಮ ತುಳುವೆರ್ ಕಲಾ ಸಂಘಟನೆ, ಸಂಸ ಥಿಯೇಟರ್, ಅವಿರತ ಪುಸ್ತಕ ಬೆಂಗಳೂರು ಆರ್ಟ್ ಫೌಂಡೇಶನ್ ನೀಡುವ ಸಿಜಿಕೆ 2020ರ ಪ್ರಶಸ್ತಿಗೆ ಕಲಾವಿದ, ರಂಗ ನಿರ್ದೇಶಕ, ಕಾರ್ಕಳದ ಚಂದ್ರನಾಥ ಬಜಗೋಳಿ ಅವರು ಆಯ್ಕೆಯಾಗಿರುತ್ತಾರೆ ಎಂದು ಸಂಸ್ಥೆಯ ಅಧ್ಯಕ್ಷರಾದ ಸುಕುಮಾರ್ ಮೋಹನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಚಂದ್ರನಾಥ ಬಜಗೋಳಿ ಕಳೆದ 24 ವರ್ಷಗಳಿಂದ ಚಿತ್ರಕಲೆ ಮತ್ತು ರಂಗಭೂಮಿಯ ಚಟುವಟಿಕೆಗಳಲ್ಲಿ ನಿರಂತರ ಸೇವೆ ಮಾಡುತ್ತಾ ಬಂದಿದ್ದು, ಐದು ದೊಡ್ಡ ನಾಟಕಗಳು ಹಾಗೂ 17 ಸಣ್ಣ ನಾಟಕಗಳನ್ನು ರಚಿಸಿದ್ದಾರೆ. ಹಿರಿಯ ಸಾಹಿತಿಗಳಾದ […]

ಉಡುಪಿ ಜಿಲ್ಲೆಗೆ ಬಿಗ್ ಶಾಕ್ ! ಕಾರ್ಕಳದ ಪೊಲೀಸರಿಗೆ ಬಂತು ಕೊರೋನಾ,ಇಬ್ಬರಿಗೆ ಕೊರೋನಾ ಸೋಂಕು ದೃಢ:

ಉಡುಪಿ:  ಚೆಕ್ ಪೋಸ್ಟ್ ಗಳಲ್ಲಿ ಕಾರ್ಯನಿರ್ವಹಿಸಿದ್ದ ಉಡುಪಿ ಜಿಲ್ಲೆಯ ಕಾರ್ಕಳ ಮತ್ತು ಅಜೆಕಾರಿನ ತಲಾ ಓರ್ವ ಪೊಲೀಸರಿಗೆ ಕೋವಿಡ್-19 ಸೋಂಕು ದೃಢವಾಗಿದ್ದು  ಈ ಸುದ್ದಿಗೆ ಉಡುಪಿ ಜಿಲ್ಲೆ ತತ್ತರಿಸಿದರೆ. ಕಳೆದ ಕೆಲವು ದಿನಗಳಿಂದ ಉಡುಪಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು ಇದೀಗ ಪೊಲೀಸರಿಗೂ ಸೋಂಕು ತಗಲುವ ಮೂಲಕ ಕೊರೋನಾ ತನ್ನ ಕಬಂಧಬಾಹು ಮತ್ತಷ್ಟು ವಿಸ್ತರಿಸಿದೆ. ಎರಡೂ ಕಡೆಯ ಒಟ್ಟು ಪೊಲೀಸ್ ಠಾಣೆಗಳನ್ನು ಸೀಲ್ ಡೌನ್ ಮಾಡುವ  ಸಾಧ್ಯತೆ ಇದ್ದು ಕಾರ್ಕಳ ವ್ಯಾಪ್ತಿಯ ಜನರು ಕಂಗಾಲಾಗಿದ್ದಾರೆ. ಎಎಸ್ ಐಗೂ […]

ಅಮೆರಿಕ ಅಧಿವೇಶನಕ್ಕೆ ಕಿರಣ್ ಕುಮಾರ್ ಆಯ್ಕೆ

ಉಡುಪಿ: ಎಲ್ ಐಸಿ ಉಡುಪಿ ವಿಭಾಗದ ಕಿರಣ್ ಕುಮಾರ್ ಬಿ ಕಾರ್ಕಳ ಇವರು 2006ರಿಂದ ದಾಖಲೆ 13 ಬಾರಿ MDRT ಆಗಿ ಆಯ್ಕೆಯಾಗಿ ಇದೀಗ, ಅಮೆರಿಕದ ಲಾಸ್ ಎಜೆಲೀಸ್ ನಲ್ಲಿ ನಡೆಯುವ ಅಧಿವೇಶನಕ್ಕೆ ಆಯ್ಕೆಯಾಗಿದ್ದಾರೆ. ಪ್ರಸ್ತುತ ಅವರು Cm Club, Galaxy club, MDRT( USA) ಆಗಿದ್ದೂ, ಉಡುಪಿ ವಿಭಾಗ LIC ಯಲ್ಲಿ ಪ್ರಸಿದ್ದಿ ಪಡೆದ್ದಿದ್ದಾರೆ.

ಕಾರ್ಕಳ: ಮಾಳದಲ್ಲಿ ಅಳಿವಿನಂಚಿನಲ್ಲಿರುವ ಮಲಬಾರ್ ಮರ ಕಪ್ಪೆ ಪತ್ತೆ

ಚಿತ್ರ: ಮನು ಬಿ.ನಕ್ಕತ್ತಾಯ ಉಡುಪಿ: ಅಳಿವಿನಂಚಿನಲ್ಲಿರುವ ‘ಮಲಬಾರ್ ಟ್ರೀ ಟೋಡ್’ (ಮಲಬಾರ್ ಮರ ಕಪ್ಪೆ) ಪ್ರಬೇಧವು ಕಾರ್ಕಳ ತಾಲೂಕಿನ ಮಾಳ ಗ್ರಾಮದ ಮಣ್ಣ ಪಾಪು ಮನೆ ಪರಿಸರದಲ್ಲಿ ಪತ್ತೆಯಾಗಿದ್ದು, ಈ ಮೂಲಕ ಮಾಳ ಅರಣ್ಯ ಪ್ರದೇಶವು ಕಪ್ಪೆಗಳಿಗೆ ಸೂಕ್ತವಾದ ಆವಾಸ ಸ್ಥಾನ ಎಂಬುದಾಗಿ ತಿಳಿದುಬಂದಿದೆ. 2003-04ರ ವರೆಗೆ ಅತ್ಯಂತ ಅಪರೂಪ ಎನಿಸಿದ್ದ ‘ಮಲಬಾರ್ ಟ್ರೀ ಟೋಡ್’ ಕಪ್ಪೆ ಪ್ರಬೇಧವು ಗೋವಾ, ಕೇರಳ, ಮಹಾರಾಷ್ಟ್ರ ರಾಜ್ಯದ ಪಶ್ಚಿಮ ಘಟ್ಟಗಳ ಎರಡು ಮೂರು ಕಡೆಗಳಲ್ಲಿ ಮಾತ್ರ ಕಂಡು ಬಂದಿತ್ತು. ಕಪ್ಪೆ […]