ಉಡುಪಿ ಜಿಲ್ಲೆಗೆ ಬಿಗ್ ಶಾಕ್ ! ಕಾರ್ಕಳದ ಪೊಲೀಸರಿಗೆ ಬಂತು ಕೊರೋನಾ,ಇಬ್ಬರಿಗೆ ಕೊರೋನಾ ಸೋಂಕು ದೃಢ:

ಉಡುಪಿ:  ಚೆಕ್ ಪೋಸ್ಟ್ ಗಳಲ್ಲಿ ಕಾರ್ಯನಿರ್ವಹಿಸಿದ್ದ ಉಡುಪಿ ಜಿಲ್ಲೆಯ ಕಾರ್ಕಳ ಮತ್ತು ಅಜೆಕಾರಿನ ತಲಾ ಓರ್ವ ಪೊಲೀಸರಿಗೆ ಕೋವಿಡ್-19 ಸೋಂಕು ದೃಢವಾಗಿದ್ದು  ಈ ಸುದ್ದಿಗೆ ಉಡುಪಿ ಜಿಲ್ಲೆ ತತ್ತರಿಸಿದರೆ. ಕಳೆದ ಕೆಲವು ದಿನಗಳಿಂದ ಉಡುಪಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು ಇದೀಗ ಪೊಲೀಸರಿಗೂ ಸೋಂಕು ತಗಲುವ ಮೂಲಕ ಕೊರೋನಾ ತನ್ನ ಕಬಂಧಬಾಹು ಮತ್ತಷ್ಟು ವಿಸ್ತರಿಸಿದೆ. ಎರಡೂ ಕಡೆಯ ಒಟ್ಟು ಪೊಲೀಸ್ ಠಾಣೆಗಳನ್ನು ಸೀಲ್ ಡೌನ್ ಮಾಡುವ  ಸಾಧ್ಯತೆ ಇದ್ದು ಕಾರ್ಕಳ ವ್ಯಾಪ್ತಿಯ ಜನರು ಕಂಗಾಲಾಗಿದ್ದಾರೆ.

ಎಎಸ್ ಐಗೂ ಸೋಂಕು?

ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಪೇದೆ ಮತ್ತು ಅಜೆಕಾರು ಠಾಣೆಯ ಎಎಸ್ ಐ ಗೆ ಸೋಂಕು ದೃಢಪಟ್ಟಿದೆ ಎನ್ನಲಾಗಿದೆ. ಕಾರ್ಕಳದ ಕಾನ್ ಸ್ಟೇಬಲ್  ಪತ್ನಿ ಎಪ್ರಿಲ್ ತಿಂಗಳಲ್ಲಿ ಬಂಟ್ವಾಳ ಆಸ್ಪತ್ರೆಯಲ್ಲಿ ದಾಖಲಾಗಿದ್ದರು ಎನ್ನಲಾಗಿದೆ.  ಪ್ರಾಥಮಿಕ ಸಂಪರ್ಕಕ್ಕೆ ಬಂದ ಎಲ್ಲಾ ಪೊಲೀಸ್ ಸಿಬ್ಬಂದಿಯನ್ನು ಪರೀಕ್ಷೆ ನಡೆಸಿ ಕ್ವಾರಂಟೈನ್ ಗೆ ವ್ಯವಸ್ಥೆ ಮಾಡಲಾಗುತ್ತಿದೆ. ಪೋಲಿಸ್ ಠಾಣೆ ಸೀಲ್ ಡೌನ್ ಬಗ್ಗೆ ಇನ್ನಷ್ಟೇ ಮಾಹಿತಿ ಬರಬೇಕಿದೆ. ಲಾಕ್ ಡೌನ್ ಸಮಯದಲ್ಲಿ ಹಗಲು ರಾಥ್ರಿ ಎಂದು ಕೆಲಸ ಮಾಡುತ್ತಿದ್ದ ಪೊಲೀಸರಿಗೂ ಇದೀಗ ಕೊರೋನಾ ಸೊಂಕು ತಗಲಿರುವುದು ಆತಂಕ ಮೂಡಿಸಿದೆ.