ಬಸ್ಸಲ್ಲಿ ಸಿಕ್ಕ ಆ ಅಪರಿಚಿತ ಅಜ್ಜಿ ಬದುಕಿಗೆ ಸ್ಪೂರ್ತಿಯಾದರು: ಪ್ರತೀಕ್ಷಾ ಬರೆದ ಬರಹ
ಪ್ರತೀಕ್ಷಾ, ಬಿಎ ಪತ್ರಿಕೋದ್ಯಮ ವಿಭಾಗ ಎಂಪಿಎಂ ಕಾಲೇಜು ಕಾರ್ಕಳ ಅಜ್ಜಿ ಅಂದರೆ ಎಲ್ಲರಿಗೂ ತುಂಬಾ ಇಷ್ಟ. ಅಜ್ಜಿ ಜೊತೆಗಿರುವುದು, ಕಥೆ ಕೇಳುವುದು, ಆಟ ಆಡುವಾಡೋದು ಎಂದರೆ ಸಾಮಾನ್ಯವಾಗಿ ಎಲ್ಲಾ ಮೊಮ್ಮಕ್ಕಳಿಗೂ ತುಂಬಾನೇ ಇಷ್ಟ. ಅಜ್ಜಿ ನೀಡುವ ಪ್ರೀತಿ ನಮಗೆ ಗೊತ್ತು. ಆದರೆ ನಂಗೊಮ್ಮೆ ಸಿಕ್ಕಿದ ಅಪರಿಚಿತ ಅಜ್ಜಿಯು ನೆನೆಪು ಈಗಲೂ ಆಗಾಗ ನನಗೆ ಕಾಡುತ್ತಿರುತ್ತದೆ. ಪ್ರತಿಯೊಬ್ಬರ ಜೀವನದಲ್ಲೂ ಆಕಸ್ಮಿಕವಾಗಿ ವ್ಯಕ್ತಿಗಳು ಎದುರಾಗುತ್ತಾರೆ, ಹಾಗೆ ಎದುರಾದಾಗ ನಗುಮೊಗದಿಂದಲೇ ಆ ವ್ಯಕ್ತಿಗಳು ಕಾಡಿ ನಮ್ಮ ಜೊತೆಗೆ ಮಾತಾಡಿ ಹೇಗೋ ಪರಿಚಯವಾಗಿಬಿಡುತ್ತಾರೆ. […]