ಉಡುಪಿ: ವ್ಯಕ್ತಿ ನಾಪತ್ತೆ

ಉಡುಪಿ: ಮಂಗಳೂರು ಒಜಿಲಕೇರಿಯ ನಿವಾಸಿ ರಾಧಾಕೃಷ್ಣ ಸಾಮಗ (50) ಎಂಬ ವ್ಯಕ್ತಿಯು ಮೇ 1 ರಂದು ಕಡೇಕಾರು ಗ್ರಾಮದ ಕನ್ನರಪಾಡಿಯಲ್ಲಿ ಸಂಧಿಕರ ಮದುವೆಗೆಂದು ಹೋದವರು ವಾಪಸು ಬಾರದೇ ನಾಪತ್ತೆಯಾಗಿರುತ್ತಾರೆ. 5 ಅಡಿ 2 ಇಂಚು ಎತ್ತರ, ಎಣ್ಣೆ ಕಪ್ಪು ಮೈಬಣ್ಣ ಹೊಂದಿದ್ದು, ಕನ್ನಡ ಹಾಗೂ ತುಳು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಹೆಚ್ಚಿನ ಮಾಹಿತಿ ದೊರೆತಲ್ಲಿ ಮಲ್ಪೆ ಠಾಣೆ ದೂ.ಸಂ: 0820-2537999, ಪಿಎಸ್‌ಐ ಮೊ.ನಂ: 9480805447 ಅಥವಾ ಉಡುಪಿ ವೃತ್ತ ನಿರೀಕ್ಷಕರ ಮೊ.ನಂ: 9480805430 ಅನ್ನು ಸಂಪರ್ಕಿಸಬಹುದಾಗಿದೆ […]

ಜ್ಞಾನಸುಧಾದ 37 ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದಲ್ಲಿ ಮೊದಲ ಹತ್ತು ರ‍್ಯಾಂಕ್; ವಿಜ್ಞಾನ ವಿಭಾಗದ ಸಮ್ಯಕ್ ಪ್ರಭು ಹಾಗೂ ವಾಣಿಜ್ಯ ವಿಭಾಗದ ಚೈತ್ರ ಕಾಮತ್ ರಾಜ್ಯಮಟ್ಟದಲ್ಲಿ 4ನೇ ರ‍್ಯಾಂಕ್

ಉಡುಪಿ : ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿ ಪ್ರಕಟಿಸಿದ 2023-24ನೇ ಸಾಲಿನ ದ್ವೀತೀಯ ಪಿಯುಸಿ ಪರೀಕ್ಷೆ -1ರ ಫಲಿತಾಶದಲ್ಲಿ ಜ್ಞಾನಸುಧಾದ ವಿದ್ಯಾರ್ಥಿಗಳು ರಾಜ್ಯಕ್ಕೆ 10ರೊಳಗಿನ 37 ರ‍್ಯಾಂಕ್ ಪಡೆದಿದ್ದು, ವಿಜ್ಞಾನ ವಿಭಾಗದಲ್ಲಿ ಸಮ್ಯಕ್ ಆರ್ ಪ್ರಭು (595/600) ಹಾಗೂ ವಾಣಿಜ್ಯ ವಿಭಾಗದಲ್ಲಿ ಚೈತ್ರ ಕಾಮತ್(594/600) ಅಂಕ ಗಳಿಸಿ ರಾಜ್ಯಕ್ಕೆ 4ನೇ ಸ್ಥಾನ ಗಳಿಸಿ ಉತ್ತಮ ಸಾಧನೆ ಮಾಡಿರುತ್ತಾರೆ. ವಿಜ್ಞಾನ ವಿಭಾಗ: ವಿಜ್ಞಾನ ವಿಭಾಗದಲ್ಲಿ ಪರೀಕ್ಷೆ ಬರೆದ ಒಟ್ಟು 689 ವಿದ್ಯಾರ್ಥಿಗಳಲ್ಲಿ 663 ವಿದ್ಯಾರ್ಥಿಗಳು […]

ಕಾರ್ಕಳ: ಮಾ.24 ರಂದು “ನಮಗಾಗಿ ಮೋದಿ” ರಾಷ್ಟ್ರ ಜಾಗೃತಿ ಸಮಾವೇಶ

ಕಾರ್ಕಳ: ಅಭಿನವ ಭಾರತ ಕಾರ್ಕಳ ಅರ್ಪಿಸುವ “ನಮಗಾಗಿ ಮೋದಿ” ರಾಷ್ಟ್ರ ಜಾಗೃತಿ ಸಮಾವೇಶವು ಹೋಟೆಲ್ ಬಾಲಾಜಿ ಇನ್ ಬಂಡಿ ಮಠ ಇಲ್ಲಿ ಮಾ. 24 ರಂದು ಸಂಜೆ 4 ಗಂಟೆಗೆ ನಡೆಯಲಿದ್ದು, ಹಿರಿಯ ಉದ್ಯಮಿ ಪ್ರಭಾಕರ ಕಾಮತ್ ಬೋಳ ಅಧ್ಯಕ್ಷತೆ ವಹಿಸಲಿದ್ದಾರೆ. ಯುವ ರಾಜಕೀಯ ವಿಶ್ಲೇಷಕ ಸುರಭಿ ಹೊದಿಗೆರೆ, ನಿವೃತ್ತ ವಾಯುಸೇನಾಧಿಕಾರಿ ವಿಂಗ್ ಕಮಾಂಡರ್ ಬಿ.ಎಸ್. ಸುದರ್ಶನ್, ಹಿರಿಯ ನ್ಯಾವಾದಿ ಎಂ.ಕೆ ವಿಜಯಕುಮಾರ್, ಪತ್ರಕರ್ತ ಸಂತೋಷ್ ತಮ್ಮಯ್ಯ ಭಾಗವಹಿಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮ ಸನಾತನ ನಾಟ್ಯಾಲಯ ಮಂಗಳೂರು ಇವರಿಂದ […]

ಕಾರ್ಕಳ: ಹೊಟೇಲ್‌ ಕಟ್ಟಡದಲ್ಲಿ ಅಗ್ನಿ ಅವಘಡ; 1.20 ಲಕ್ಷ ರೂ ನಷ್ಟ

ಕಾರ್ಕಳ: ಕಸಬಾ ಗ್ರಾಮದ ಕರಿಯಕಲ್ಲು ಜಂಕ್ಷನ್‌ ಬಳಿ ನಿರ್ಮಲ ರಾವ್‌ ಮಾಲಕತ್ವದ ಹೊಟೇಲ್‌ ಕಟ್ಟಡಕ್ಕೆ ಬೆಂಕಿ ತಗಲಿ ಅಪಾರ ಹಾನಿ ಸಂಭವಿಸಿದ ಘಟನೆ ಮಾ.3ರಂದು ಬೆಳಗಿನ ಜಾವ 4 ಗಂಟೆಗೆ ಸಂಭವಿಸಿದೆ. ಘಟನೆಯಿಂದ ಫ್ರಿಡ್ಜ್, ಗ್ರೈಂಡರ್, ಮಿಕ್ಸಿ, ಅಡುಗೆ ಪಾತ್ರೆ, ದಿನಸಿ ಸಾಮಗ್ರಿ, ವಿದ್ಯುತ್‌ ಸಂಪರ್ಕ ಇತ್ಯಾದಿ ಸುಟ್ಟು ಹೋಗಿವೆ. ಕಟ್ಟಡದ ಮೇಲ್ಛಾವಣಿ ಭಾಗಶಃ ಸುಟ್ಟು ಹೋಗಿದೆ. ಸ್ಥಳೀಯರ ಸಹಕಾರದಿಂದ ಅಗ್ನಿಶಾಮಕದಳದವರು ಬೆಂಕಿಯನ್ನು ನಂದಿಸಿದ್ದಾರೆ. ಘಟನೆಯಲ್ಲಿ ಸುಮಾರು 1.20 ಲಕ್ಷ ರೂ ನಷ್ಟ ಅಂದಾಜಿಸಲಾಗಿದೆ.

ಗ್ಯಾರಂಟಿ ಯೋಜನೆಗಳ ಜೊತೆ ಅಭಿವೃದ್ದಿಯೂ ನಡೆಯಬೇಕು: ಸುನಿಲ್ ಕುಮಾರ್

ಹೆಬ್ರಿ: ಸರ್ಕಾರದ ಜನಪ್ರಿಯ ಗ್ಯಾರಂಟಿ ಯೋಜನೆಗಳಿಂದ ಜನರ ಬದುಕು ಸದೃಢವಾಗುತ್ತಿದೆ. ಅರ್ಹರೆಲ್ಲರಿಗೂ ಯೋಜನೆಗಳ ಲಾಭ ತಲುಪಬೇಕು, ಈ ನಿಟ್ಟಿನಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಬೇಕು. ಬಡವರಿಗೆ ಗ್ಯಾರಂಟಿ ಯೋಜನೆಯು ಶಕ್ತಿ ನೀಡಿದೆ. ಗ್ಯಾರಂಟಿ ಯೋಜನೆಗಳು ಮಾತ್ರ ಸರ್ಕಾರದ ಸಾಧನೆಯಾಗಬಾರದು, ಅಭಿವೃದ್ಧಿ ಕಾರ್ಯಗಳು ಕೂಡ ನಡೆಯಬೇಕು. ಅಭಿವೃದ್ಧಿಗೆ ಅನುದಾನ ನೀಡಬೇಕು ಎಂದು ಕಾರ್ಕಳ ಶಾಸಕ ಸುನಿಲ್‌ ಕುಮಾರ್‌ ಹೇಳಿದರು. ಹೆಬ್ರಿ ತಾಲ್ಲೂಕು ಆಡಳಿತದ ವತಿಯಿಂದ ಸಮಾಜ ಮಂದಿರದಲ್ಲಿ ಗುರುವಾರ ನಡೆದ ಹೆಬ್ರಿ ಹೋಬಳಿ ಮಟ್ಟದ ಸರ್ಕಾರದ ಗ್ಯಾರಂಟಿ ಯೋಜನೆಗಳ ಸಮರ್ಪಕ […]