ವರಾಹರೂಪಂ ಹಾಡಿನ ಮೊದಲನೆ ತಡೆ ಪಾರು: ಹಾಡಿನ ಬಳಕೆಗೆ ಕೋಝಿಕ್ಕೋಡ್ ಜಿಲ್ಲಾ ನ್ಯಾಯಾಲಯ ಅನುಮತಿ
ತಿರುವನಂತಪುರ: ಕಾಂತಾರ ಚಿತ್ರದ ವರಾಹರೂಪಂ ಹಾಡಿನ ಕಾನೂನಾತ್ಮಕ ಸಂಘರ್ಷದಲ್ಲಿ ನಿರ್ಮಾಪಕರಾದ ಹೊಂಬಾಳೆ ಫಿಲಂಮ್ಸ್ ನ ಮೊದಲನೆ ತಡೆ ಪಾರಾಗಿದ್ದು, ಹಾಡಿನ ಬಳಕೆಗೆ ಅನುಮತಿ ದೊರೆತಿದೆ. ವರಾಹರೂಪಂ ಹಾಡನ್ನು ತನ್ನ ನವರಸಂ ಹಾಡಿನಿಂದ ಕೃತಿಚೌರ್ಯ ಮಾಡಲಾಗಿದೆ ಎಂದು ಕೇರಳದ ಸಂಗೀತ ಬ್ಯಾಂಡ್ ಥೈಕ್ಕುಡಂ ಬ್ರಿಡ್ಜ್ ಕೋರ್ಟಿನಲ್ಲಿ ದಾವೆ ಹೂಡಿದ್ದು ಇದನ್ನು ಕೋಝಿಕ್ಕೋಡ್ ಜಿಲ್ಲಾ ನ್ಯಾಯಾಲಯ ವಜಾಗೊಳಿಸಿದೆ. ಈ ವಿಚಾರವಾಗಿ ಈ ಹಾಡಿನ ಬರಹಗಾರ ಶಶಿರಾಜ್ ಕಾವೂರು, “ಇಂದು ಕೆಳ ನ್ಯಾಯಾಲಯವು ಎರಡೂ ಕಡೆಯವರ ವಾದ ಆಲಿಸಿದ ಬಳಿಕ ಥೈಕ್ಕುಡಂ […]
ರಿಷಭ್ ಶೆಟ್ಟಿಯವರನ್ನು ಭೇಟಿಯಾದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್: ಚಿತ್ರ ನಿರ್ಮಾಣಕ್ಕೆ ಸರ್ಕಾರದ ಬೆಂಬಲದ ಬಗ್ಗೆ ಚರ್ಚೆ
ಪಣಜಿ: ಭಾರತದ 53ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗಿಯಾಗಲು ರಿಷಭ್ ಶೆಟ್ಟಿ ಗೋವಾಕ್ಕೆ ತೆರಳಿದ್ದ ಸಂದರ್ಭದಲ್ಲಿ ಅವರು ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಅವರನ್ನು ಭೇಟಿಯಾಗಿದ್ದಾರೆ. ರಿಷಭ್ ಅವರನ್ನು ಭೇಟಿಯಾದ ಬಳಿಕ ಸಾವಂತ್ ಟ್ವೀಟ್ ಮಾಡಿ, “ನಟ, ಬರಹಗಾರ, ಚಲನಚಿತ್ರ ನಿರ್ಮಾಪಕ ರಿಷಭ್ ಶೆಟ್ಟಿ ಅವರನ್ನು ಮಹಾಲಕ್ಷ್ಮಿ, ಪಣಜಿಯಲ್ಲಿ ಭೇಟಿ ಮಾಡಿ ಸಂವಾದ ನಡೆಸಿದೆ. ಅವರ ಕಾಂತಾರ ಚಿತ್ರ ಜನಮನ್ನಣೆ ಗಳಿಸಿದೆ. ವಿವಿಧ ವಿಷಯಗಳ ಕುರಿತು ಚರ್ಚಿಸಿದೆ ಮತ್ತು ಗೋವಾದಲ್ಲಿ ಚಲನಚಿತ್ರ ನಿರ್ಮಾಣಕ್ಕೆ ಗೋವಾ ಸರ್ಕಾರದ ಬೆಂಬಲವನ್ನು ಪುನರುಚ್ಚರಿಸಿದೆ” […]
ಶಿರ್ವದಲ್ಲೊಬ್ಬ ತದ್ರೂಪಿ ರಿಷಭ್ ಶೆಟ್ಟಿ: ಕಾಂತಾರದ ಶಿವ ಪಾತ್ರಧಾರಿ ರಿಷಭ್ ರೀತಿ ಕಾಣುವ ವ್ಯಕ್ತಿಗೆ ಬೇಸ್ತು ಬಿದ್ದ ಜನ!
ಶಿರ್ವ: ಉಡುಪಿಯ ಶಿರ್ವದ ಪಂಜಿಮಾರಿನಲ್ಲೊಬ್ಬ ಹೆಚ್ಚುಕಡಿಮೆ ಕಾಂತಾರದ ಶಿವ ಪಾತ್ರಧಾರಿಯಾದ ರಿಷಭ್ ಶೆಟ್ಟರಂತೆಯೆ ಕಾಣುವ ವ್ಯಕ್ತಿಯೊಬ್ಬರಿದ್ದಾರೆ. ದೂರದಿಂದ ನೋಡಿದಾಗ ರಿಷಭ್ ಶೆಟ್ರೇ ಬಂದರೇನೋ ಅನ್ನಿಸಿಬಿಡುತ್ತದೆ. ಆದರೆ ಹತ್ತಿರಹೋಗಿ ನೋಡಿದಾಗ ಇದು ರಿಷಭ್ ಶೆಟ್ರಲ್ಲ ಬದಲಿಗೆ ಅವರ ತದ್ರೂಪಿ ಎನ್ನುವುದು ಗೊತ್ತಾಗಿ ಜನ ಬೇಸ್ತು ಬೀಳುತ್ತಿದ್ದಾರೆ! ಶಿರ್ವದ ಪಂಜಿಮಾರಿನ ನಿವಾಸಿ ಪ್ರದೀಪ್ ಆಚಾರ್ಯ ಇವರೇ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡುತ್ತಿರುವ ಜ್ಯೂನಿಯರ್ ರಿಷಭ್ ಶೆಟ್ಟಿ. ಪ್ರಸ್ತುತ ಇವರು ಮೊಬೈಲ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರು ಕಾಂತಾರದ ಶಿವ ಪಾತ್ರದಲ್ಲಿ […]
ನಾಳೆ ಅಮೆಜಾನ್ ಪ್ರೈಮ್ ವೀಡಿಯೋನಲ್ಲಿ ಕಾಂತಾರ ಬಿಡುಗಡೆ
ಜಗತ್ತಿನಾದ್ಯಂತ ಸದ್ದು ಮಾಡಿ ಗಲ್ಲಾ ಪೆಟ್ಟಿಗೆಯನ್ನು ಕೊಳ್ಳೆ ಹೊಡೆದ ಕಾಂತಾರ ಚಿತ್ರ ಅಮೆಜಾನ್ ಪ್ರೈಮ್ ವೀಡಿಯೋ ನಲ್ಲಿ ನಾಳೆ ಬಿಡುಗಡೆ ಹೊಂದುತ್ತಿದೆ. ಚಿತ್ರದ ಹಕ್ಕನ್ನು ಪಡೆಯಲು ಅಮೆಜಾನ್ ಪ್ರೈಮ್ ಎಷ್ಟು ಬೆಲೆ ತೆತ್ತಿದೆ ಎನ್ನುವುದು ಇನ್ನೂ ಬಹಿರಂಗವಾಗಿಲ್ಲ. ಇನ್ನು ಎಲ್ಲಿ ಯಾವಾಗ ಬೇಕಿದ್ದರೂ ಕಾಂತಾರ ಚಲನಚಿತ್ರವನ್ನು ಕುಳಿತಲ್ಲಿಂದಲೇ ನೋಡಬಹುದು.
ಕಾಂತಾರ ದೈವನರ್ತಕ ನವೀನ್ ಬೊಂದೆಲ್ ಗೆ ಸಲಾರ್ ಚಿತ್ರದಲ್ಲಿ ನಟಿಸುವ ಅವಕಾಶ
ಕಾಂತಾರ ಸಿನಿಮಾದಲ್ಲಿ ದೈವನರ್ತಕನಾಗಿ ನಟಿಸಿದ್ದ ನವೀನ್ ಬೊಂದೆಲ್ ಅವರಿಗೆ ಸಲಾರ್ ಸಿನಿಮಾದಲ್ಲಿ ನಟಿಸಲು ಅವಕಾಶ ದೊರಕಿದೆ ಎಂದು ವರದಿಯಾಗಿದೆ. ಪ್ರಶಾಂತ್ ನೀಲ್ ನಿರ್ದೇಶನದ, ಪ್ರಭಾಸ್ ನಟನೆಯ ಹೊಂಬಾಳೆ ಫಿಲಂಸ್ ನ ಸಲಾರ್ ಚಿತ್ರದ ಒಂದು ಪಾತ್ರದಲ್ಲಿ ನಟಿಸಲು ನವೀನ್ ಅವರಿಗೆ ಅವಕಾಶ ದೊರೆತಿದೆ. ನವೀನ್ ಬೊಂದೆಲ್ ಒಬ್ಬ ನಟ ಮತ್ತು ನಿರ್ದೇಶಕ. ಕಾಂತಾರ ಚಿತ್ರದಲ್ಲಿ ಕಾಣಿಸಿಳ್ಳುವುದಕ್ಕೂ ಮುನ್ನ ಅವರು ಹಲವಾರು ನಾಟಕಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವರು ಬಸ್ ಕಂಡಕ್ಟರ್ ಆಗಿಯೂ ಕೆಲಸ ಮಾಡಿದ್ದಾರೆ. ಮಂಗಳೂರಿನ ಕೆನರಾ ಹೈಸ್ಕೂಲ್ ಮತ್ತು […]