ಕನ್ನರ್ಪಾಡಿ: ದ್ವಿತೀಯ ವರ್ಷದ ಶಾರದಾ ಮಹೋತ್ಸವ ಆಚರಣೆ

ಉಡುಪಿ: ಉಡುಪಿ ಕಿನ್ನಿಮೂಲ್ಕಿ ಕನ್ನರ್ಪಾಡಿಯ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿಯ ಆಶ್ರಯದಲ್ಲಿ ದ್ವಿತೀಯ ವರ್ಷದ ಶಾರದಾ ಮಹೋತ್ಸವ ಆಚರಣೆಯು ಅ. 5ರಿಂದ 8ರ‌ ವರೆಗೆ ನಾಲ್ಕು ದಿನಗಳ ಕಾಲ ಕಿನ್ನಿಮೂಲ್ಕಿ ಸ್ವಾಗತ ಗೋಪುರದ ಬಳಿಯ ಮೈದಾನದಲ್ಲಿ ವಿಜೃಂಭಣೆಯಿಂದ ನಡೆಯಲಿದೆ ಎಂದು ಶ್ರೀ ಶಾರದೋತ್ಸವ ಸಮಿತಿಯ ಅಧ್ಯಕ್ಷರಾದ ಜಯಪ್ರಕಾಶ್ ಕೆದ್ಲಾಯ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಅ.5ರಂದು ಬೆಳಿಗ್ಗೆ 7.30ಕ್ಕೆ ಶಾರದಾ ದೇವಿಯ ವಿಗ್ರಹ ಪ್ರತಿಷ್ಠಾಪನೆ, ಗಣ ಹೋಮ ನಡೆಯಲಿದ್ದು 8 ಗಂಟೆಗೆ ಚಂಡಿಕಾ ಯಾಗ,  ತದನಂತರ ವಿವಿಧ […]