ಕನ್ನಂಗಾರ್ ಜುಮಾ ಮಸೀದಿಯ ಆಡಳಿತ ಕಮಿಟಿಯಿಂದ ಸಮುದಾಯ ಭವನ ದುರುಪಯೋಗ: ಕೆ.ಅಬ್ದುಲ್ ರೆಹಮಾನ್

ಉಡುಪಿ: ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತ ಇಲಾಖೆಯ ಮೂಲಕ 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಸಮುದಾಯ ಭವನವನ್ನು ಕನ್ನಂಗಾರ್ ಜುಮಾ ಮಸೀದಿಯ ಆಡಳಿತ ಕಮಿಟಿ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಜಿಲ್ಲಾ ವಕ್ಪ್ ಸಲಹಾ ಸಮಿತಿಯ ಸದಸ್ಯ ಕೆ.ಅಬ್ದುಲ್ ರೆಹಮಾನ್ ಆರೋಪಿಸಿದ್ದಾರೆ. ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮಸೀದಿಯ ಮುಂಭಾಗ ನಿರ್ಮಿಸಲಾಗಿರುವ ಸಮುದಾಯ ಭವನವನ್ನು ಆಡಿಟೋರಿಯಂ ಎಂದು ಮಾಡಿ ಸಮಾರಂಭಗಳಿಗೆ ತಲಾ ರೂ. 30,000 ರಿಂದ 50,000 ಪಡೆಯಲಾಗುತ್ತಿದೆ. ಹಣ ಪಡೆದಿದ್ದಕ್ಕೆ ಅನಧಿಕೃತ ರಶೀದಿ ನೀಡಲಾಗುತ್ತಿದೆ ಎಂದು […]