ಕನ್ನಡಿಗರೆಲ್ಲಾ ನೋಡಲೇಬೇಕಾದ ಕಾಡೋ ಕಿರುಚಿತ್ರ “ಕನ್ನಡ ಮೀಡಿಯಂ”
ಕನ್ನಡದ ಕಾಳಜಿ, ಪ್ರೀತಿಯ ಕುರಿತು ಕನ್ನಡದಲ್ಲಿ ಕೆಲವೊಂದು ಸಿನಿಮಾಗಳು ಕಿರುಚಿತ್ರಗಳು ಬಂದಿದೆ.ಅವುಗಳಲ್ಲಿ ಕೆಲವೊಂದು ಕಿರುಚಿತ್ರಗಳು ವಿಭಿನ್ನ ನಿರೂಪಣೆ ಮತ್ತು ಹೊಸ ಪ್ರಯತ್ನಗಳಿಂದ ಕಾಡುತ್ತದೆ. ಅಂತಹ ವಿಭಿನ್ನ ಮತ್ತು ಕಾಡುವ ಕಿರುಚಿತ್ರವೊಂದು ರಿಲೀಸ್ ಆಗಿದೆ. ಸಿನಿಮಾದ ಹೆಸರು “ಕನ್ನಡ medium” ಕನ್ನಡ ಭಾಷೆಯ ರಕ್ಷಣೆ ಹಾಗೂ ಸರಕಾರಿ ಶಾಲೆಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಈ ಕಿರು ಚಿತ್ರವನ್ನು ಬೆಳಕು ಚೆಲ್ಲುತ್ತದೆ. ಸುಂದರವಾದ ಈ ಚಿತ್ರವನ್ನು ದಶಮಾನೋತ್ಸವ ಆಚರಿಸಿ ವಿದ್ಯಾರ್ಥಿಗಳಿಲ್ಲದೆ ಮುಚ್ಚಲ್ಪಟ್ಟ ಶಿರಾಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚಿತ್ರಿಕರಿಸಿದ್ದು, ಅಡ್ಡಹೊಳೆ ಪ್ರಾಥಮಿಕ […]