ಕನ್ನಡಿಗರೆಲ್ಲಾ ನೋಡಲೇಬೇಕಾದ ಕಾಡೋ ಕಿರುಚಿತ್ರ “ಕನ್ನಡ ಮೀಡಿಯಂ”

ಕನ್ನಡದ ಕಾಳಜಿ, ಪ್ರೀತಿಯ ಕುರಿತು ಕನ್ನಡದಲ್ಲಿ ಕೆಲವೊಂದು ಸಿನಿಮಾಗಳು ಕಿರುಚಿತ್ರಗಳು ಬಂದಿದೆ.ಅವುಗಳಲ್ಲಿ ಕೆಲವೊಂದು ಕಿರುಚಿತ್ರಗಳು ವಿಭಿನ್ನ ನಿರೂಪಣೆ ಮತ್ತು ಹೊಸ ಪ್ರಯತ್ನಗಳಿಂದ ಕಾಡುತ್ತದೆ. ಅಂತಹ ವಿಭಿನ್ನ ಮತ್ತು ಕಾಡುವ ಕಿರುಚಿತ್ರವೊಂದು ರಿಲೀಸ್ ಆಗಿದೆ. ಸಿನಿಮಾದ ಹೆಸರು “ಕನ್ನಡ medium”

ಕನ್ನಡ ಭಾಷೆಯ ರಕ್ಷಣೆ ಹಾಗೂ ಸರಕಾರಿ ಶಾಲೆಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಈ ಕಿರು ಚಿತ್ರವನ್ನು ಬೆಳಕು ಚೆಲ್ಲುತ್ತದೆ.

ಸುಂದರವಾದ ಈ ಚಿತ್ರವನ್ನು ದಶಮಾನೋತ್ಸವ ಆಚರಿಸಿ ವಿದ್ಯಾರ್ಥಿಗಳಿಲ್ಲದೆ ಮುಚ್ಚಲ್ಪಟ್ಟ ಶಿರಾಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚಿತ್ರಿಕರಿಸಿದ್ದು, ಅಡ್ಡಹೊಳೆ ಪ್ರಾಥಮಿಕ ಶಾಲಾ ಮಕ್ಕಳು ನಟಿಸಿದ್ದು, ಚಿತ್ರದ ಪ್ರಧಾನ ಭೂಮಿಕೆಯಲ್ಲಿ ತುಳು ಚಿತ್ರರಂಗದ ಕಲಾವಿದರಾದ ಶನಿಲ್ ಗುರು ಹಾಗು ಲಕ್ಷಣ ಮಾಲ್ಲುರು ನಟಿಸಿದ್ದಾರೆ.

ಈ ಚಿತ್ರವನ್ನು JRM STUDIO (ಅಮೃತಂಜನ್ ವೆಬ್ ಸೀರೀಸ್) ಎಂಬ ಯೂಟ್ಯೂಬ್ ಚಾನ್ನೆಲ್ನಲ್ಲಿ ವಿತರಿಸಿದ್ದೇವೆ. ಚಿತ್ರ ಆನಂದಿಸುವ ಪ್ರೇಕ್ಷಕರಿಗೆ ತಾವು ಓದಿ ಬೆಳೆದ ಶಾಲೆಗಳ ಇಂದಿನ ನೈಜ ಸ್ಥಿತಿ ಗತಿಗಳನ್ನು ತಿಳಿಸಿ ಅದರ ಸಂರಕ್ಷಣೆಯ ಜವಾಬ್ದಾರಿ ಬಗ್ಗೆ ತಿಳುವಳಿಕೆ ನೀಡೋದು ನಮ್ಮ ಉದ್ದೇಶ ಎನ್ನುವುದು ಚಿತ್ರತಂಡದ ಆಶಯ.

https://youtu.be/vUiVda4jHDc

ಅಂದ ಹಾಗೆ ಈ ಚಿತ್ರವನ್ನು  ಅಭಿಷೇಕ್ ಕಿಲ್ಲೂರು ರಚಿಸಿ ನಿರ್ದೇಶನ ಮಾಡಿದ್ದು, ಅಕಿಲ್ ಥಾಮಸ್ ಛಾಯಾಗ್ರಹಣ, ಲಿಯೋನೆಲ್ ಮಾರ್ಟಿಸ್ ಸಂಕಲನ ಮಾಡಿದ್ದು, ಸಹಾಯಕ ನಿರ್ದೇಶಕರಾಗಿ ಪ್ರವೀರ ಪಿ ಕೆ, ಸಿನಿಲ್ ಅಗಸ್ಟೀನ್ ಹಾಗೂ ಸ್ಟೀಫನ್ ಕುಡ್ಲ ಕಾರ್ಯ ನಿರ್ವಹಿಸಿರುತ್ತಾರೆ.

ಕನ್ನಡ ಭಾಷೆಯ ಮೇಲಿರುವ ಪ್ರೀತಿ,ಕಾಳಜಿ,ಕನ್ನಡ ಮಾಧ್ಯಮದ ಸ್ಥಿತಿಗತಿ ಎಲ್ಲವನ್ನೂ ಮರೆಯಿಂದ ತೆರೆಗೆ ತಂದಿರುವ ಚಿತ್ರ ತಂಡದ ಪ್ರಯತ್ನಕ್ಕೆ ನಮ್ಮದ್ದೊಂದು ಪ್ರೋತ್ಸಾಹವಿರಲಿ. ಕನ್ನಡಿಗರೆಲ್ಲಾ ನೋಡಲೇಬೇಕಾದ ಕನ್ನಡ ಮೀಡಿಯಮ್ ಸಿನಿಮಾ ಕಣ್ತುಂಬಿಕೊಳ್ಳಿ