ಆಗಸ್ಟ್ 25 ರಂದು ತೆರೆಗೆ ಬರಲಿದ್ದಾನೆ ‘ಟೋಬಿ’: ಮಾರಿಗೆ ದಾರಿ ಮಾಡಿಕೊಡಿ ಎಂದ ರಾಜ್ ಬಿ ಶೆಟ್ಟಿ
ಒಂದು ಮೊಟ್ಟೆಯ ಕಥೆ ಮತ್ತು ಗರುಡ ಗಮನ ವೃಷಭ ವಾಹನದಂತಹ ಆಫ್ ಬೀಟ್ ಸಿನಿಮಾಗಳನ್ನು ನೀಡಿ ಜನಮನ ಗೆದ್ದಂತಹ ರಾಜ್ ಬಿ ಶೆಟ್ಟಿ ಅವರ ಮುಂದಿನ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಸೇಡಿನ ಕಥಾಹಂದರ ಹೊಂದಿರುವ ‘ಟೋಬಿ’ ಶೀರ್ಷಿಕೆಯ ಈ ಚಿತ್ರವನ್ನು ಬಾಸಿಲ್ ಅಲ್ಚಕ್ಕಲ್ ನಿರ್ದೇಶಿಸಲಿದ್ದಾರೆ. ಚಿತ್ರದ ಕಥೆಯನ್ನು ರಾಜ್ ಬಿ ಶೆಟ್ಟಿ ಬರೆದಿದ್ದು, ಮುಖ್ಯಭೂಮಿಕೆಯಲ್ಲಿ ಖುದ್ದು ಅಭಿನಯಿಸಲಿದ್ದಾರೆ. ಪ್ರವೀಣ್ ಶ್ರೀಯಾನ್ ಅವರ ಛಾಯಾಗ್ರಹಣವಿರುವ ಟೋಬಿಗೆ ಮಿಧುನ್ ಮುಕುಂದನ್ ಸಂಗೀತ ನೀಡಿದ್ದಾರೆ. ಒಂದು ಕುರಿಯ ಮೇಲೆ ತುಂಬಾ ಒತ್ತಡ […]
ಚಿತ್ರನಟ ಜೈ ಜಗದೀಶ್ ಕುಟುಂಬದಿಂದ ಶ್ರೀಕೃಷ್ಣ ಮಠಕ್ಕೆ ಭೇಟಿ
ಉಡುಪಿ: ಚಲನಚಿತ್ರರಂಗದ ಹಿರಿಯ ನಟ ಜೈ ಜಗದೀಶ್ ಮತ್ತು ವಿಜಯಲಕ್ಷ್ಮಿಸಿಂಗ್ ಅವರು ಕುಟುಂಬ ಸಮೇತರಾಗಿ ಶ್ರೀಕೃಷ್ಣಮಠಕ್ಕಾಗಮಿಸಿ ಶ್ರೀಕೃಷ್ಣದೇವರ ದರ್ಶನ ಮಾಡಿ ಪ್ರಸಾದ ಸ್ವೀಕರಿಸಿದರು. ಪರ್ಯಾಯ ಮಠದ ದಿವಾನರಾದ ವರದರಾಜ ಭಟ್ ಮತ್ತು ನಾರಾಯಣ ಸರಳಾಯ ಉಪಸ್ಥಿತರಿದ್ದರು.
ರೈತರ ಬದುಕು ಬವಣೆಯ ಅನಾವರಣೆಯ “ಶ್ರೀಮಂತ”: ಮೊದಲ ಬಾರಿಗೆ ನಾಯಕನಟನಾಗಿ ಅಭಿನಯಿಸಿದ ಸೋನು ಸೂದ್
ಹಾಸನ್ ರಮೇಶ್ ಎಂಬ ಕಾವ್ಯನಾಮದಿಂದ ಹತ್ತು ವರ್ಷಗಳಿಂದ ಕನ್ನಡ ಚಿತ್ರರಂಗದ ಹತ್ತು ಹಲವು ವಿಭಾಗಗಳಲ್ಲಿ ತೊಡಗಿಸಿಕೊಂಡಿರುವ ಟಿ.ಕೆ ರಮೇಶ್ ಇದೀಗ ತನ್ನದೇ ಆದ ಗೋಲ್ಡನ್ ರೈನ್ ಮೂವೀಸ್ ಸಂಸ್ಥೆಯಡಿಯಲ್ಲಿ ಪ್ರಥಮ ಬಾರಿಗೆ ಸ್ವತಂತ್ರವಾಗಿ “ಶ್ರೀಮಂತ” ಎಂಬ ಚಲನಚಿತ್ರವನ್ನು ನಿರ್ಮಿಸಿ ನಿರ್ದೇಶಿಸಿದ್ದು, ಜಿ.ನಾರಾಯಣಪ್ಪ ಮತ್ತು ವಿ.ಸಂಜಯ್ ಬಾಬು ಸಹನಿರ್ಮಾಪಕರಾಗಿ ಸಾಥ್ ನೀಡಿದ್ದಾರೆ. “ಶ್ರೀಮಂತ” ಚಲನಚಿತ್ರವು ರೈತರ ದೈನಂದಿನ ಬದುಕು ಬವಣೆಯ ಅನಾವರಣವಾಗಿದ್ದು ಆತನೇ ಜಗತ್ತಿನ ದೊಡ್ಡ ಶ್ರೀಮಂತ ಎಂದು ಸಾಕ್ಷೀಕರಿಸುವ, ಮರೆಯಾಗುತ್ತಿರುವ ಹಳ್ಳಿಯ ಸುಗ್ಗಿ, ಜಾತ್ರೆ, ಹಬ್ಬ, ಹಾಡು […]
ಕಿರಿಕ್ ಹುಡುಗ ರಕ್ಷಿತ್ ಶೆಟ್ಟಿ ನಟನೆಯ ಸಪ್ತ ಸಾಗರದಾಚೆ ಎಲ್ಲೋ ಮೇಕಿಂಗ್ ಫೋಟೋ ಬಿಡುಗಡೆ
ಹೇಮಂತ್ ಎಂ ರಾವ್ ಕಥೆ ಮತ್ತು ನಿರ್ದೇಶನ ಹಾಗೂ ಕಿರಿಕ್ ಹುಡುಗ ರಕ್ಷಿತ್ ಶೆಟ್ಟಿ ನಟನೆ ಮತ್ತು ನಿರ್ಮಾಣದ ‘ಸಪ್ತ ಸಾಗರದಾಚೆ ಎಲ್ಲೋ’ ಚಲನಚಿತ್ರವು ಸೆಟ್ಟೇರಿದ್ದು, ಸಿನಿಮಾದ ಶೂಟಿಂಗ್ ಬಹುತೇಕ ಮುಕ್ತಾಯವಾಗಿದೆ. ಸಿನಿಮಾದ ಮೇಕಿಂಗ್ ಫೋಟೋಗಳನ್ನು ರಕ್ಷಿತ್ ಶೆಟ್ಟಿ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ‘ಮನು’ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದಾ ಹೊಸತನದೊಂದಿಗೆ ಬರುವ ರಕ್ಷಿತ್ ಈ ಬಾರಿ ಹೊಸತೇನನ್ನು ನೀಡಲಿದ್ದಾರೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ರಕ್ಷಿತ್‌ಗೆ ನಾಯಕಿಯಾಗಿ ರುಕ್ಮಿಣಿ ವಸಂತ್ […]
ಹೆಡ್ ಬುಷ್ ಚಿತ್ರದಲ್ಲಿ ವೀರಗಾಸೆಗೆ ಅಪಮಾನ: ಸ್ಪಷ್ಟೀಕರಣ ನೀಡಿದ ಚಿತ್ರತಂಡ
ಬೆಂಗಳೂರು: ಹೆಡ್ ಬುಷ್ ಚಿತ್ರದಲ್ಲಿ ವೀರಗಾಸೆ ಕುಣಿತಕ್ಕೆ ಅಪಮಾನವಾಗಿದೆ ಎಂಬ ಚರ್ಚೆ ಮಾಧ್ಯಮ ಹಾಗೂ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ವೀರಗಾಸೆ ಕನ್ನಡದ ಹೆಮ್ಮೆಯ ಜಾನಪದ ಪರಂಪರೆ. ಚಲನಚಿತ್ರವೂ ಸೇರಿದಂತೆ ಯಾವುದೇ ಮನೋರಂಜನಾ ಮಾಧ್ಯಮದಿಂದ ಜಾನಪದ ಸಂಸ್ಕ್ರತಿಗೆ ಅವಮಾನವಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ. ಒಂದೊಮ್ಮೆ ಹೆಡ್ ಬುಷ್ ಚಿತ್ರದಲ್ಲಿ ವೀರಗಾಸೆಗೆ ಅಪಮಾನವಾದರೆ ನಿರ್ಮಾಪಕರು ಹಾಗೂ ನಿರ್ದೇಶಕರು ಮರು ಚಿಂತನೆ ನಡೆಸುವುದು ಸೂಕ್ತ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಟ್ವೀಟ್ ಮಾಡಿದ್ದಾರೆ. ಹೆಡ್ ಬುಷ್ ಚಿತ್ರದ ನಟ […]