ಕನ್ನಡ ಚಿತ್ರಗಳ ಪೋಷಕ ನಟ ಲಕ್ಷ್ಮಣ್ ಹೃದಯಾಘಾತದಿಂದ ನಿಧನ

ಬೆಂಗಳೂರು: ಕನ್ನಡ ಚಲನಚಿತ್ರಗಳಲ್ಲಿ ಪೋಷಕ ಪಾತ್ರದಿಂದ ಗಮನ ಸೆಳೆದಿದ್ದ ನಟ ಲಕ್ಷ್ಮಣ್ ಅವರು ಇಂದು (ಜನವರಿ 23) ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು. ಭಾನುವಾರ (ಜನವರಿ 22ರಂದು) ರಾತ್ರಿ ಲಕ್ಷ್ಮಣ್ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಇಂದು ಮುಂಜಾನೆ 3.30 ಸುಮಾರಿಗೆ ಅವರನ್ನು ನಾಗರಬಾವಿಯಲ್ಲಿರುವ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೂ ದುರದೃಷ್ಟವಶಾತ್ ಅವರನ್ನು ಉಳಿಸಿಕೊಳ್ಳಲಾಗಲಿಲ್ಲ. ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಅವರ ಸ್ವಗೃಹದಲ್ಲಿಡಲಾಗಿದೆ. ಲಕ್ಷ್ಮಣ್ ವಿಷ್ಣುದಾದ ಜೊತೆ ಯಜಮಾನ, ಸೂರ್ಯವಂಶ ಸೇರಿದಂತೆ ಅಂಬರೀಷ್, ಶಂಕರ್ […]

ಬುಕ್ ಮೈ ಶೋ ವಿರುದ್ದ ನಿರ್ದೇಶಕಿ ಶೀತಲ್ ಶೆಟ್ಟಿ ಅಸಮಾಧಾನ: ಕನ್ನಡ ಚಿತ್ರಗಳಿಗೆ ಅನ್ಯಾಯದ ಗಂಭೀರ ಆರೋಪ

ಬೆಂಗಳೂರು: ಚಲನಚಿತ್ರಗಳನ್ನು ವೀಕ್ಷಿಸಲು ಥಿಯೇಟರ್ ನಲ್ಲಿ ಮುಂಗಡವಾಗಿ ಟಿಕೇತು ಖರೀದಿಸಿಡುವ ಆನ್ ಲೈನ್ ವೇದಿಕೆ ಬುಕ್ ಮೈ ಶೋ ಮೇಲೆ ನಿರ್ದೇಶಕಿ ಶೀತಲ್ ಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವೇದಿಕೆಯಲ್ಲಿ ಪ್ರೇಕ್ಷಕರ ವಿಮರ್ಶೆ ಮತ್ತು ಚಿತ್ರದ ರೇಟಿಂಗ್ ಗಳನ್ನು ತೋರಿಸಲು ಷರತ್ತುಗಳನ್ನು ವಿಧಿಸಿ ಕನ್ನಡ ಚಿತ್ರರಂಗಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಹೊರಿಸಿದ್ದಾರೆ. ವೀಕ್ಷಕರು ವಿಮರ್ಶೆಗಳನ್ನು ನೋಡಿ ಚಿತ್ರ ನೋಡಲು ಮುಂದಾಗುತ್ತಾರೆ. ಆದರೆ ಇಲ್ಲಿ ವಿಮರ್ಶೆಗಳನ್ನು ಕಾಣದಂತೆ ಮಾಡಿರುವುದು ವಿಂಡೋ ಸೀಟ್ ನಿರ್ದೇಶಕಿಯ ಸಿಟ್ಟಿಗೆ ಕಾರಣವಾಗಿದೆ. […]