ಕಣಂಜಾರು ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

ಉಡುಪಿ: ಕಣಂಜಾರು ಬ್ರಹ್ಮಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಮುಂಬರುವ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಗುರುವಾರದಂದು ಊರ ಹಿರಿಯರಾದ ಡಾ.ಎಂ.ಬಿ.ಆಚಾರ್, ನಿವೃತ್ತ ಶಿಕ್ಷಕ ಬಿ.ಕೃಷ್ಣ ಪ್ರಭು, ನವೀನಚಂದ್ರ ಹೆಗ್ಡೆ ಪಟೇಲರ ಮನೆ ಇವರ ಉಪಸ್ಥಿತಿಯಲ್ಲಿ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭ ತಂತ್ರಿಗಳಾದಂತಹ ಬ್ರಹ್ಮಶ್ರೀ ಷಡಂಗ ಬಿ.ಲಕ್ಷ್ಮೀನಾರಾಯಣ ತಂತ್ರಿ, ಅರ್ಚಕ ಗುರುರಾಜ ಮಂಜಿತ್ತಾಯ, ದೇವಸ್ಥಾನದ ಆಡಳಿತ ಮೊಕ್ತೇಸರ ಸುಧೀರ್ ಹೆಗ್ಡೆ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ವಿಕ್ರಮ್ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಕೆ.ಶಿವಪ್ರಸಾದ್ ಹೆಗ್ಡೆ, ಕೋಶಾಧಿಕಾರಿ ಮೀನಾ ಲಕ್ಷಣಿ ಅಡ್ಯಂತಾಯ,ಗ್ರಾ.ಪಂ. ಅಧ್ಯಕ್ಷ ಸಚ್ಚಿದಾನಂದ ಪ್ರಭು, […]