ಕಣಂಜಾರು ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

ಉಡುಪಿ: ಕಣಂಜಾರು ಬ್ರಹ್ಮಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಮುಂಬರುವ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಗುರುವಾರದಂದು ಊರ ಹಿರಿಯರಾದ ಡಾ.ಎಂ.ಬಿ.ಆಚಾರ್, ನಿವೃತ್ತ ಶಿಕ್ಷಕ ಬಿ.ಕೃಷ್ಣ ಪ್ರಭು, ನವೀನಚಂದ್ರ ಹೆಗ್ಡೆ ಪಟೇಲರ ಮನೆ ಇವರ ಉಪಸ್ಥಿತಿಯಲ್ಲಿ ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭ ತಂತ್ರಿಗಳಾದಂತಹ ಬ್ರಹ್ಮಶ್ರೀ ಷಡಂಗ ಬಿ.ಲಕ್ಷ್ಮೀನಾರಾಯಣ ತಂತ್ರಿ, ಅರ್ಚಕ ಗುರುರಾಜ ಮಂಜಿತ್ತಾಯ, ದೇವಸ್ಥಾನದ ಆಡಳಿತ ಮೊಕ್ತೇಸರ ಸುಧೀರ್ ಹೆಗ್ಡೆ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ವಿಕ್ರಮ್ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಕೆ.ಶಿವಪ್ರಸಾದ್ ಹೆಗ್ಡೆ, ಕೋಶಾಧಿಕಾರಿ ಮೀನಾ ಲಕ್ಷಣಿ ಅಡ್ಯಂತಾಯ,ಗ್ರಾ.ಪಂ. ಅಧ್ಯಕ್ಷ ಸಚ್ಚಿದಾನಂದ ಪ್ರಭು, ಉಪಾಧ್ಯಕ್ಷ ವಿದ್ಯಾ ಶೆಟ್ಟಿ, ಸದಸ್ಯರಾದ ಸತೀಶ್ ದೇವಾಡಿಗ, ಶಿವಪ್ರಸಾದ್ ರಾವ್, ಗ್ರಾ.ಪಂ.ಮಾಜಿ ಅಧ್ಯಕ್ಷ ರಮೇಶ್ ಕಲ್ಲೊಟ್ಟೆ, ಜೀರ್ಣೋದ್ಧಾರ ಸಮಿತಿಯ ಪ್ರಮುಖರಾದ ಮಹೇಶ್ ಶೆಟ್ಟಿ ದೇವಶ್ಯ, ಚಂದನ್ ಹೆಗ್ಡೆ, ಹರಿದಾಸ ಹೆಗ್ಡೆ, ಸತೀಶ್ ಪೂಜಾರಿ ನ್ಯಾಯವಾದಿಗಳು ,ಊರ ಹಿರಿಯರಾದ ಶೇಖರ್ ಶೆಟ್ಟಿ ದೊಡ್ಡಮನೆ, ಸುಂದರ್ ಶೆಟ್ಟಿ ಸಾಬ್ಲೋಟ್ಟು, ರಘು ಪುಜಾರಿ ಮಾಪುಂಜ, ಬಾಲಕೃಷ್ಣ ಹೆಗ್ಡೆ ತೆಂಕುಮನೆ, ವಿಠಲ್ ಶೆಟ್ಟಿ ಹೊನಿಯಾಲು, ಶೇಖರ್ ಶೆಟ್ಟಿ ಹೊಸಮನೆ ಸೇರಿದಂತೆ ಜೀರ್ಣೋದ್ದಾರ ಸಮಿತಿಯ ಪದಾಧಿಕಾರಿಗಳು ಹಾಗೂ ಊರ ಗ್ರಾಮಸ್ಥರು ಉಪಸ್ಥಿತರಿದ್ದರು.