ವಾಮಂಜೂರು: ತಿರುವೈಲುಗುತ್ತು ಸಂಕುಪೂಂಜ-ದೇವಪೂಂಜ ಜೋಡುಕೆರೆ ಕಂಬಳದಲ್ಲಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಭಾಗಿ

ವಾಮಂಜೂರು: 12ನೇ ವರ್ಷದ ತಿರುವೈಲೋತ್ಸವದ ಅಂಗವಾಗಿ ವಾಮಂಜೂರಿನ ತಿರುವೈಲುಗುತ್ತು ಸಂಕುಪೂಂಜ-ದೇವಪೂಂಜ ಜೋಡುಕೆರೆ ಕಂಬಳ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಶನಿವಾರ ಪಾಲ್ಗೊಂಡರು. ಕಂಬಳ ಕೂಟದಲ್ಲಿ ಭಾಗವಹಿಸಿ ಮಾತನಾಡಿದ ಅವರು ನಮ್ಮ ಸಂಸ್ಕೃತಿ ನಮ್ಮ ದೇಶದ ಆಸ್ತಿ. ಈ ಆಸ್ತಿಯನ್ನು ಕಾಪಾಡಿಕೊಂಡು ಬಂದಿರುವ ನಿಮಗೆ ಈಶ್ವರ ಇನ್ನಷ್ಟು ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಇದು ತುಳುನಾಡಿನ ಪವಿತ್ರವಾದ ಭೂಮಿ. ಸರ್ವಜನಾಂಗದ ಶಾಂತಿಯ ತೋಟವಾಗಿ ಈ ಭೂಮಿಗೆ ವಿಶೇಷ ಶಕ್ತಿ ಇದೆ. ಇದು ವಿದ್ಯಾ ಕ್ಷೇತ್ರ, ಆರ್ಥಿಕ ಕ್ಷೇತ್ರ, […]

ತುಳುನಾಡ ಕಂಬಳಕ್ಕೆ ಸ್ವಯಂಚಾಲಿತ ಟೈಮ್ ಗೇಟ್ ಮತ್ತು ಫೋಟೋ ಫಿನಿಶ್ ತಂತ್ರಜ್ಞಾನದ ಪಾದಾರ್ಪಣೆ: ಅದಾನಿ ಫೌಂಡೇಶನ್ ನಿಂದ 10 ಲಕ್ಷ ರೂ ದೇಣಿಗೆ

ಮಂಗಳೂರು: ತುಳುನಾಡಿನ ಸಾಂಪ್ರದಾಯಿಕ ಕ್ರೀಡೆ ಕಂಬಳದಲ್ಲಿ ಸಮರ್ಥ ಸಮಯ ನಿರ್ವಹಣೆಗಾಗಿ ಸ್ವಯಂಚಾಲಿತ ಟೈಮ್ ಗೇಟ್ ಮತ್ತು ಫೋಟೋ ಫಿನಿಶ್ ಫಲಿತಾಂಶ ವ್ಯವಸ್ಥೆಯನ್ನು ಪರಿಚಯಿಸಲಾಗುತ್ತಿದೆ ಎಂದು ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಬೆಳಪು ಹೇಳಿದ್ದಾರೆ. ಹೊಸ ವ್ಯವಸ್ಥೆಯನ್ನು ಪರಿಚಯಿಸಲು ಅದಾನಿ ಫೌಂಡೇಶನ್ 10 ಲಕ್ಷ ರೂ ದೇಣಿಗೆ ನೀಡಿದ್ದು, ಬುಧವಾರ ನಡೆದ ಸಮಾರಂಭದಲ್ಲಿ ಅದಾನಿ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಸಮಿತಿ ಅಧ್ಯಕ್ಷರಿಗೆ ಚೆಕ್ ಹಸ್ತಾಂತರಿಸಿದ ಸಂದರ್ಭದಲ್ಲಿ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. […]