ಬಟರ್ ಫ್ಲೈ ಗೆಸ್ಟ್ ಹೌಸ್ ಮತ್ತು ಪಾರ್ಟಿ ಹಾಲ್ ಮಾಹಿತಿ ಕರಪತ್ರ ಬಿಡುಗಡೆ
ಉಡುಪಿ: ನೂತನವಾಗಿ ಪ್ರಾರಂಭಗೊಂಡ ಕಳತ್ತೂರು ಚಂದ್ರನಗರದಲ್ಲಿರುವ ಬಟರ್ ಫ್ಲೈ ಗೆಸ್ಟ್ ಹೌಸ್ ಮತ್ತು ಪಾರ್ಟಿ ಹಾಲ್ ನ ಮಾಹಿತಿ ಕರಪತ್ರವನ್ನು ಮಲ್ಲಾರು-ಮಜೂರು ಬದ್ರಿಯಾ ಜುಮ್ಮಾ ಮಸ್ಜಿದ್ ಧರ್ಮಗುರುಗಳಾದ ಅಬ್ದುರ್ರಶೀದ್ ಸಖಾಫಿ ಅಲ್-ಖಾಮಿಲ್ ರವರು ಕಾಪುವಿನ ಖ್ಯಾತ ಸಮಾಜ ಸೇವಕ ಲೀಲಾದರ.ಕೆ.ಶೆಟ್ಟಿ ಇವರ ನಿವಾಸದಲ್ಲಿ ಬಿಡುಗಡೆಗೊಳಿಸಿ ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಲೀಲಾದರ ಶೆಟ್ಟಿ ಇವರು ಮಾತನಾಡಿ, ಫಾರೂಕ್ ಚಂದ್ರನಗರ ಇವರು ಉತ್ತಮ ಸಮಾಜ ಸೇವಕರಾಗಿದ್ದು, ಪ್ರತಿಯೊಬ್ಬ ವ್ಯಕ್ತಿಯನ್ನು ಗೌರವದಿಂದ ಕಾಣುವ ಹಸನ್ಮುಖಿ ವ್ಯಕ್ತಿ. ಗ್ರಾಮೀಣ ಪ್ರದೇಶದಲ್ಲಿ ಬಟರ್ ಫ್ಲೈ […]
ಕಳತ್ತೂರು: ಅಪರಾಧ ಮಾಸ ತಡೆ ಮಾಸಚರಣೆ ಕಾರ್ಯಕ್ರಮ
ಕಳತ್ತೂರು: ಕಳತ್ತೂರು ಚಂದ್ರನಗರದ ಬಟರ್ ಫ್ಲೈ ಗೆಸ್ಟ್ ಹೌಸ್ ಸಭಾಂಗಣದಲ್ಲಿ ಶಿರ್ವ ಪೊಲೀಸ್ ಠಾಣಾ ವತಿಯಿಂದ ಗುರುವಾರದಂದು ನಡೆದ ಅಪರಾಧ ಮಾಸ ತಡೆ ಮಾಸಚರಣೆ ಸಭೆ ನಡೆಯಿತು. ಸಭೆಯಲ್ಲಿ ಭಾಗವಹಿಸಿದ್ದ ಶಿರ್ವ ಠಾಣಾಧಿಕಾರಿ ರಾಘವೇಂದ್ರ ಮಾತನಾಡಿ, ಹೆತ್ತವರು ತಮ್ಮ ಅಪ್ರಾಪ್ತ ಮಕ್ಕಳಿಗೆ ದ್ವಿಚಕ್ರ ವಾಹನ ಹಾಗೂ ಇತರ ವಾಹನಗಳನ್ನು ನೀಡದೆ ವಾಹನ ಚಾಲನೆ ಪರವಾನಿಗೆ ಪಡೆದ ನಂತರವಷ್ಟೆ ವಾಹನವನ್ನು ನೀಡಿ, ಹೆತ್ತವರು ಜಾಗ್ರತೆ ವಹಿಸಿ ಮಕ್ಕಳನ್ನು ಅಪಾಯದಿಂದ ರಕ್ಷಿಸಿಕೊಳ್ಳಬೇಕು. ಮಾದಕ ದ್ರವ್ಯಗಳ ಕುರಿತು ಎಚ್ಚರಿಕೆಯಿಂದಿರಬೇಕು. ಎಲ್ಲಾ ವಾಹನ […]
ಕಳತ್ತೂರು: ಉಚಿತ ನೇತ್ರ ತಪಾಸಣಾ ಮತ್ತು ಪೊರೆ ಚಿಕಿತ್ಸೆ ಶಿಬಿರ ಸಂಪನ್ನ
ಕಳತ್ತೂರು: ಕುಶಲ ಶೇಖರ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಇದರ ಅಧ್ಯಕ್ಷ ಕಳತ್ತೂರು ಶೇಖರ ಬಿ. ಶೆಟ್ಟಿ ನೇತೃತ್ವದಲ್ಲಿ ಪ್ರಸಾದ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ, ನೇತ್ರಜೋತಿ ಚಾರಿಟೇಬಲ್ ಟ್ರಸ್ಟ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ, ಅಂಧತ್ವ ನಿವಾರಣಾ ವಿಭಾಗ ಉಡುಪಿ ಇವರ ಸಹಯೋಗದೊಂದಿಗೆ ಉಚಿತ ನೇತ್ರ ತಪಾಸಣಾ ಹಾಗೂ ಪೊರೆ ಶಸ್ತ್ರ ಚಿಕಿತ್ಸೆ ಶಿಬಿರವನ್ನು ಆದಿತ್ಯವಾರ ಕಳತ್ತೂರಿನ ಕುಶಲ ಶೇಖರ ಶೆಟ್ಟಿ ಇಂಟರ್ ನ್ಯಾಷನಲ್ ಸಭಾಂಗಣದಲ್ಲಿ ನಡೆಸಲಾಯಿತು. ಕಾರ್ಯಕ್ರಮವನ್ನು ಪ್ರಸಾದ ನೇತ್ರಾಲಯ […]
ಕುಶಲ ಶೇಖರ ಶೆಟ್ಟಿ ಆಡಿಟೋರಿಯಂ ವತಿಯಿಂದ 75 ನೇ ಸ್ವಾತಂತ್ರ್ಯ ದಿನಾಚರಣೆ
ಕಳತ್ತೂರು: ಕುಶಲ ಶೇಖರ ಶೆಟ್ಟಿ ಆಡಿಟೋರಿಯಂ ಕಳತ್ತೂರು ವತಿಯಿಂದ 75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸಲಾಯಿತು. ಹಿರಿಯರಾದ ವಾಸು ಶೆಟ್ಟಿ ಧ್ವಜಾರೋಹಣ ಮಾಡಿದರು. ಆಡಿಟೋರಿಯಂನ ಮಾಲಕ ಶೇಖರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಆಡಿಟೋರಿಯಂನ ನಿರ್ದೇಶಕಿ ಕುಶಲ ಶೇಖರ ಶೆಟ್ಟಿ, ಆನಂದಿ ಶೆಟ್ಟಿ, ದಿವಾಕರ ಶೆಟ್ಟಿ, ದಿನೇಶ್ ಶೆಟ್ಟಿ ಕೊತ್ತಲಂಗಡಿ ಮತ್ತು ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕರಂದಾಡಿ ಶಿಕ್ಷಕ ನಿರ್ಮಲ್ ಕುಮಾರ್ ಹೆಗ್ಡೆ ನಿರೂಪಿಸಿದರು. ಕಾರ್ಯಕ್ರಮದ ಭಾಗವಾಗಿ ಗ್ರಾಮಸ್ಥರಿಗೆ ಸತ್ಕಾರ ಕೂಟ […]