ಮಾರ್ಚ್ 3: ಅಲೆವೂರು ಅಮ್ಮನೆಡೆಯಿಂದ ಕಡಿಯಾಳಿ ಅಮ್ಮನಡೆಗೆ ಬೃಹತ್ ಪಾದಯಾತ್ರೆ
ಉಡುಪಿ: ಮಾರ್ಚ್ 3 ಭಾನುವಾರದಂದು ಬೆಳ್ಳಿಗ್ಗೆ 6 ಗಂಟೆಗೆ ಅಲೆವೂರು ಮಹಿಳಾ ಸಂಘ ಹಾಗೂ ಯುವಕ ಸಂಘದ ನೇತೃತ್ವದಲ್ಲಿಅಲೆವೂರು ಅಮ್ಮನಡೆಯಿಂದ ಕಡಿಯಾಳಿ ಅಮ್ಮನಡೆಗೆ ಬೃಹತ್ಪಾದಯಾತ್ರೆ ನಡೆಯಲಿರುವುದು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡು ಶ್ರೀ ದೇವರ ಕ್ರಪಾಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ಪ್ರಕಟಣೆ ತಿಳಿಸಿದೆ. ಪಾದಯಾತ್ರೆಯು ಅಲೆವೂರಮ್ಮ ನಡೆಯಿಂದ ಹೊರಟು ರಾಮಪುರ, ಡಯಾನ ವೃತ್ತ, ಬೀಡಿನಗುಡ್ಡೆ ಮಾರ್ಗವಾಗಿ ವಿದ್ಯೋದಯ ಕಾಲೇಜಿನ ಎದುರು, ಪಾರ್ಕಿಂಗ್ ಪ್ರದೇಶದಿಂದ ಕಲ್ಸಂಕ ಮಾರ್ಗವಾಗಿ ಕಡಿಯಾಳಿ ಅಮ್ಮನಡೆಗೆ ಸಾಗಲಿರುವುದು.
ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ಪೂಜೆ
ಉಡುಪಿ: ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನ ಹಾಗೂ ಮಾತೃಮಂಡಳಿ ಕಡಿಯಾಳಿ ಉಡುಪಿ ಇದರ ಜಂಟಿ ಆಶ್ರಯದಲ್ಲಿ ಕಡಿಯಾಳಿ ಕಾತ್ಯಾಯನಿ ಮಂಟಪದಲ್ಲಿ 39 ನೇ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆಯ ಧಾರ್ಮಿಕ ಪೂಜಾ ವಿಧಿ ವಿಧಾನಗಳು ಪಾಡಿಗಾರು ಶ್ರೀನಿವಾಸ ತಂತ್ರಿಗಳ ನೇತೃತ್ವದಲ್ಲಿ ಶುಕ್ರವಾರದಂದು ಸಂಜೆ ಸಂಪನ್ನಗೊಂಡಿತು. ಮಾತೃಮಂಡಳಿಯ ವತಿಯಿಂದ ಸಾಮೂಹಿಕ ಕುಂಕುಮಾರ್ಚನೆ ನಡೆಯಿತು. ಶ್ರೀದೇವಿಗೆ ವಿಶೇಷ ಅಲಂಕಾರ, ಬೃಹತ್ ಮಂಡಲದಲ್ಲಿ ವರಮಹಾಲಕ್ಷ್ಮೀ ಪೂಜೆ ಬಳಿಕ ಪ್ರಸಾದ ವಿತರಣೆ ನಡೆಯಿತು. ಮುಖ್ಯ ಅತಿಥಿಗಳಾಗಿ ದೇವಳದ ಅಧ್ಯಕ್ಷ ರವಿರಾಜ್ ಆಚಾರ್ಯ, ಶಾಸಕ ಯಶ್ ಪಾಲ್ […]
ಮೇ 11ರಂದು ಕಡಿಯಾಳಿ ದೇವಸ್ಥಾನದಲ್ಲಿ ಉಚಿತ ಸಾಮೂಹಿಕ ಉಪನಯನ
ಉಡುಪಿ: ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಮತ್ತು ಕಡಿಯಾಳಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ. ರಾಘವೇಂದ್ರ ಕಿಣಿ ಇವರ ನೇತೃತ್ವದಲ್ಲಿ ಮೇ 11ರಂದು ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇಗುಲದ ಆವರಣದಲ್ಲಿ ಸಾಮೂಹಿಕ ಉಪನಯ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಉಚಿತ ಉಪನಯನ ಸಂಸ್ಕಾರ ಬಯಸುವ ವಟುಗಳ ಪೋಷಕರು 9008190489 ಈ ಸಂಖ್ಯೆಗೆ ಸಂಪರ್ಕಿಸಬಹುದು. ಈ ಬ್ರಹ್ಮೋಪದೇಶಕ್ಕೆ ತಗಲುವ ಎಲ್ಲಾ ವೆಚ್ಚವು ಸಂಪೂರ್ಣ ಉಚಿತವಾಗಿರುತ್ತದೆ. ಈ ಕಾರ್ಯಕ್ರಮದಲ್ಲಿ ರಾಘವೇಂದ್ರ ಕಿಣಿಯವರ ದ್ವಿತೀಯ ಮಗನಾದ ರಚಿತ್ ಕಿಣಿಗೂ […]