ಮಾರ್ಚ್ 3: ಅಲೆವೂರು ಅಮ್ಮನೆಡೆಯಿಂದ ಕಡಿಯಾಳಿ ಅಮ್ಮನಡೆಗೆ ಬೃಹತ್ ಪಾದಯಾತ್ರೆ

ಉಡುಪಿ: ಮಾರ್ಚ್ 3 ಭಾನುವಾರದಂದು ಬೆಳ್ಳಿಗ್ಗೆ 6 ಗಂಟೆಗೆ ಅಲೆವೂರು ಮಹಿಳಾ ಸಂಘ ಹಾಗೂ ಯುವಕ ಸಂಘದ ನೇತೃತ್ವದಲ್ಲಿಅಲೆವೂರು ಅಮ್ಮನಡೆಯಿಂದ ಕಡಿಯಾಳಿ ಅಮ್ಮನಡೆಗೆ ಬೃಹತ್
ಪಾದಯಾತ್ರೆ ನಡೆಯಲಿರುವುದು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡು ಶ್ರೀ ದೇವರ ಕ್ರಪಾಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ಪ್ರಕಟಣೆ ತಿಳಿಸಿದೆ.

ಪಾದಯಾತ್ರೆಯು ಅಲೆವೂರಮ್ಮ ನಡೆಯಿಂದ ಹೊರಟು ರಾಮಪುರ, ಡಯಾನ ವೃತ್ತ, ಬೀಡಿನಗುಡ್ಡೆ ಮಾರ್ಗವಾಗಿ ವಿದ್ಯೋದಯ ಕಾಲೇಜಿನ ಎದುರು, ಪಾರ್ಕಿಂಗ್ ಪ್ರದೇಶದಿಂದ ಕಲ್ಸಂಕ ಮಾರ್ಗವಾಗಿ ಕಡಿಯಾಳಿ ಅಮ್ಮನಡೆಗೆ ಸಾಗಲಿರುವುದು.