ಬೈಂದೂರು: ಕದಿಕೆ ಟ್ರಸ್ಟ್ ನಿಂದ ಕೈಮಗ್ಗ ನೇಕಾರಿಕೆ ತರಬೇತಿ ಕಾರ್ಯಕ್ರಮ

ಬೈಂದೂರು: ಅಳಿವಿನಂಚಿನಲ್ಲಿದ್ದ ಉಡುಪಿ ಸೀರೆ ನೇಯ್ಗೆ ಪುನಶ್ಚೇತನಗೊಳಿಸಿದ ಕದಿಕೆ ಟ್ರಸ್ಟ್ ನಿಂದ ಬೈಂದೂರು ತಾಲೂಕಿನ ಏಳಜಿತ್ ನ ಸರೋಜ ಅಣ್ಣಪ್ಪ ಅವರ ಮಗ್ಗದ ಮನೆಯಲ್ಲಿ ಅಕ್ಟೋಬರ್ 2, ಗಾಂಧಿ ಜಯಂತಿಯಂದು ಹೊಸ ಕೈಮಗ್ಗ ನೇಕಾರಿಕೆ ತರಬೇತಿ ಆರಂಭಿಸಲಾಗಿದೆ. ಸರಿಯಾದ ಸಂಪರ್ಕ ವ್ಯವಸ್ಥೆ ಇಲ್ಲದ, ಬೇರೆ ಉದ್ಯೋಗ ಅವಕಾಶವೂ ಇಲ್ಲದ ಒಳ ಪ್ರದೇಶ ವಾದ ಹೊಸೆರಿಯ ಏಳು ಯುವಜನರು ಈ ಯೋಜನೆಯಲ್ಲಿ ತರಬೇತಿ ಪಡೆಯಲಿದ್ದಾರೆ. ಆರು ತಿಂಗಳ ತರಬೇತಿಯಲ್ಲಿ ಶಿಬಿರಾರ್ಥಿಗಳಿಗೆ ಕದಿಕೆ ಟ್ರಸ್ಟ್ ವತಿಯಿಂದ ಸ್ಟೈಪೆಂಡ್ ಜೊತೆಗೆ ತಿರುವಂನಂತಪುರದ ಪ್ರಖ್ಯಾತ […]

ನೇಕಾರ ಸಂಜೀವ ಶೆಟ್ಟಿಗಾರ್ ಅವರಿಗೆ ರಾಜ್ಯ ಮಟ್ಟದ ಬಹುಮಾನ

ಕಿನ್ನಿಗೋಳಿ:  ಸುಪ್ರಸಿದ್ದ ‘ಉಡುಪಿ ಸೀರೆ’ಯ ನೇಕಾರರಾಗಿರುವ ಸಂಜೀವ ಶೆಟ್ಟಿಗಾರ್ ಹತ್ತಿ ಬಟ್ಟೆ ಸೀರೆ ನೇಯ್ಗೆಗಾಗಿ ರಾಜ್ಯ ಮಟ್ಟದಲ್ಲಿ ದ್ವಿತೀಯ ಬಹುಮಾನ ಲಭಿಸಿದೆ. ಇವರು ತಾಳಿಪಾಡಿ ನೇಕಾರರ ಸಂಘದ ಸದಸ್ಯರು. ಆ. 07 ರಂದು ಸೋಮವಾರ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯಂದು ಬೆಂಗಳೂರಿನಲ್ಲಿ ಅವರು ರಾಜ್ಯ ಪ್ರಶಸ್ತಿ ಸ್ವೀಕರಿಸಲಿದ್ದಾರೆ. 74 ವಯಸ್ಸಿನ ಸಂಜೀವ ಶೆಟ್ಟಿಗಾರ್ ಈಗ ಇರುವ ಕೇವಲ ಹತ್ತು 80 ಕೌಂಟ್ ನೇಕಾರರಲ್ಲಿ ಒಬ್ಬರು. ಕೈಯಿಂದ ಚಂದದ ಬುಟ್ಟಾ ನೇಯುವಲ್ಲಿ ಪರಿಣಿತರು. 80 ಕೌಂಟ್ ನ ಸಹಜ ಸೀರೆ […]

ಉಡುಪಿ ಸೀರೆಗಳ ಪುನರುಜ್ಜೀವನಕ್ಕೆ ಅಡಿಕೆಯ ಸ್ಪರ್ಶ: ಅಡಿಕೆಯ ನೈಸರ್ಗಿಕ ಬಣ್ಣದಿಂದ ತಯಾರಿಸಿದ ಉಡುಪಿ ಸೀರೆ ಬಿಡುಗಡೆ

ಕಿನ್ನಿಗೋಳಿ: ಕದಿಕೆ ಟ್ರಸ್ಟ್ ನ ಮಾರ್ಗದರ್ಶನದಲ್ಲಿ ತಯಾರಾದ ಅಡಿಕೆ ಮತ್ತು ಇತರ ನೈಸರ್ಗಿಕ ಬಣ್ಣ ಉಪಯೋಗಿಸಿ ತಯಾರಿಸಿದ ಉಡುಪಿ ಸೀರೆಗಳನ್ನು ಸೋಮವಾರದಂದು ತಾಳಿಪಾಡಿ ನೇಕಾರರ ಸೊಸೈಟಿ ಆವರಣದಲ್ಲಿ ಬಿಡುಗಡೆ ಮಾಡಲಾಯಿತು. 2018ರಲ್ಲಿ ಉಡುಪಿ ಸೀರೆ ಪುನರುಜ್ಜೀವನವನ್ನು ಪ್ರಾರಂಭಿಸಿದ ಕದಿಕೆ ಟ್ರಸ್ಟ್, ಎನ್‌ಜಿಒ ಸಾಮಾಜಿಕ ಮಾಧ್ಯಮ ಪ್ರಚಾರ, ನಬಾರ್ಡ್ ಬೆಂಬಲದೊಂದಿಗೆ ತರಬೇತಿ ಮತ್ತು ಇತರ ಕ್ರಮಗಳಂತಹ ಬಹುಮುಖಿ ವಿಧಾನಗಳೊಂದಿಗೆ ಎರಡು ಜಿಲ್ಲೆಗಳಲ್ಲಿ ನೇಯ್ಗೆಯನ್ನು ಅಳಿವಿನಿಂದ ಮರಳಿ ತಂದಿದೆ. ಉಡುಪಿ ಸೀರೆಯನ್ನು ಹೆಚ್ಚು ಪರಿಸರ ಸ್ನೇಹಿ ಮತ್ತು ಆಕರ್ಷಕವಾಗಿಸುವ ಉಪಕ್ರಮವಾಗಿ […]

ಕಿನ್ನಿಗೋಳಿ: ಉಭಯ ಜಿಲ್ಲೆಗಳ ನೇಕಾರರಿಗೆ ಸರ್ಕಾರಿ ಯೋಜನೆಗಳ ಮಾಹಿತಿ ಕಾರ್ಯಕ್ರಮ

ಕಿನ್ನಿಗೋಳಿ: ದ.ಕ. ಮತ್ತು ಉಡುಪಿ ಜಿಲ್ಲೆಗಳ ನೇಕಾರರಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ವಿಶೇಷ ಕಾರ್ಯಕ್ರಮವು ಜ.5 ರಂದು ಕಿನ್ನಿಗೋಳಿಯ ತಾಳಿಪಾಡಿ ನೇಕಾರರ ಸಹಕಾರಿ ಸಂಘದಲ್ಲಿ ನಡೆಯಿತು. ಉಡುಪಿ ಸೀರೆ ಪುನಶ್ಚೇತನಕ್ಕಾಗಿ ಶ್ರಮಿಸುತ್ತಿರುವ ಕದಿಕೆ ಟ್ರಸ್ಟ್ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ವೀವರ್ಸ್ ಸರ್ವಿಸ್ ಸೆಂಟರ್ ನ ಉಪ ನಿರ್ದೇಶಕ ಮಾರಿಮುತ್ತು ಮತ್ತು ತಾಂತ್ರಿಕ ವಿಭಾಗದ ಅಧಿಕಾರಿ ಮೋಹನ್ ಕುಮಾರ್, ಕೈ ಮಗ್ಗ ಮತ್ತು ಜವಳಿ ಇಲಾಖೆಯ ಉಭಯ ಜಿಲ್ಲೆಗಳ ಉಪ […]

ಕಾವಿ ಕಲೆಯನ್ನು ಪುನರುಜ್ಜೀವಿಸಲು ಉಡುಪಿ ಸೀರೆ ಜೊತೆ ಕೈಜೋಡಿಸಿದ ವಿಶ್ವ ಕೊಂಕಣಿ ಕೇಂದ್ರ

ಮಂಗಳೂರು: ವಿಶ್ವ ಕೊಂಕಣಿ ಕೇಂದ್ರವು ಉಡುಪಿ ಸೀರೆಗಳ ಮೇಲೆ ಕಾವಿ ಕಲೆ ವಿನ್ಯಾಸಗಳನ್ನು ರೂಪಿಸಲು ಕದಿಕೆ ಟ್ರಸ್ಟ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಕಾವಿ ಕಲೆ ಕಲಾ ಪ್ರಕಾರವನ್ನು ಭಾರತದ ಪಶ್ಚಿಮ ಕರಾವಳಿಯಾದ್ಯಂತ ಕೊಂಕಣಿ ದೇವಾಲಯಗಳಲ್ಲಿ ಸಂರಕ್ಷಿಸಲಾಗಿದೆ ಮತ್ತು ಪ್ರಚಾರ ಮಾಡಲಾಗಿದೆ. ಆದರೆ ದೇವಾಲಯದ ರಚನೆಗಳ ಆಧುನೀಕರಣದ ಕಾರಣದಿಂದಾಗಿ ಇದೀಗ ಈ ಕಲೆಯು ಅಪಾಯದಲ್ಲಿದೆ. ಉಡುಪಿ ಸೀರೆಗಳು ಸಾಂಪ್ರದಾಯಿಕ ಕೈಮಗ್ಗದ ಸೀರೆಗಳಾಗಿದ್ದು ಅಳಿವಿನ ಅಂಚಿನಲ್ಲಿರುವ ಈ ಸನಾತನ ಸಂಪ್ರದಾಯವನ್ನು ಪುನರುಜ್ಜೀವನಗೊಳಿಸಲು ಕದಿಕೆ ಟ್ರಸ್ಟ್ ನಿರಂತರವಾಗಿ ಶ್ರಮಿಸುತ್ತಿದೆ. ಇದೀಗ ಕಾವಿ ಕಲೆಯನ್ನು […]