ಕಾಬೂಲ್​​ ಏರ್​​ಪೋರ್ಟ್​​​ನಲ್ಲಿ ನೂಕುನುಗ್ಗಲು: ಗುಂಡೇಟಿಗೆ ಐವರು ಬಲಿ

ಕಾಬೂಲ್: ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್ ತಾಲಿಬಾನಿ ಉಗ್ರರ ವಶವಾಗುತ್ತಿದಂತೆ ದೇಶಬಿಟ್ಟು ಹೋಗುವವರ ಸಂಖ್ಯೆ ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ಫ್ಲೈಟ್​ ಹತ್ತಲು ಬಂದವರ ನಡುವೆ ನೂಕುನುಗ್ಗಲು ಸಂಭವಿಸಿದೆ. ಈ ನಡುವೆ ಕಾಬೂಲ್ ವಿಮಾನ ನಿಲ್ದಾಣವನ್ನು 6 ಸಾವಿರ ಅಮೆರಿಕನ್​ ಟ್ರೂಪ್​ ಸೈನಿಕರು ವಶಕ್ಕೆ ಪಡೆದುಕೊಂಡಿದ್ದು, ಬೇರೆ ಬೇರೆ ದೇಶಗಳ ನಿವಾಸಿಗಳನ್ನು ಅಫ್ಘಾನಿಸ್ತಾನದಿಂದ ಏರ್ ಲಿಫ್ಟ್​ ಮಾಡಲು ನೆರವು ನೀಡುತ್ತಿದ್ದಾರೆ. ವಿಮಾನ ನಿಲ್ದಾಣದಲ್ಲಿ ಜನರು ಗುಂಪು ಗುಂಪುಗಾಗಿ ವಿಮಾನ ಹತ್ತಲು ಹರಸಾಹಸ ಮಾಡುತ್ತಿರುವ ದೃಶ್ಯಗಳು ಕಂಡು ಬಂದಿದೆ. […]