ಕಾಬೂಲ್​​ ಏರ್​​ಪೋರ್ಟ್​​​ನಲ್ಲಿ ನೂಕುನುಗ್ಗಲು: ಗುಂಡೇಟಿಗೆ ಐವರು ಬಲಿ

ಕಾಬೂಲ್: ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್ ತಾಲಿಬಾನಿ ಉಗ್ರರ ವಶವಾಗುತ್ತಿದಂತೆ ದೇಶಬಿಟ್ಟು ಹೋಗುವವರ ಸಂಖ್ಯೆ ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ಫ್ಲೈಟ್​ ಹತ್ತಲು ಬಂದವರ ನಡುವೆ ನೂಕುನುಗ್ಗಲು ಸಂಭವಿಸಿದೆ.

ಈ ನಡುವೆ ಕಾಬೂಲ್ ವಿಮಾನ ನಿಲ್ದಾಣವನ್ನು 6 ಸಾವಿರ ಅಮೆರಿಕನ್​ ಟ್ರೂಪ್​ ಸೈನಿಕರು ವಶಕ್ಕೆ ಪಡೆದುಕೊಂಡಿದ್ದು, ಬೇರೆ ಬೇರೆ ದೇಶಗಳ ನಿವಾಸಿಗಳನ್ನು ಅಫ್ಘಾನಿಸ್ತಾನದಿಂದ ಏರ್ ಲಿಫ್ಟ್​ ಮಾಡಲು ನೆರವು ನೀಡುತ್ತಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಜನರು ಗುಂಪು ಗುಂಪುಗಾಗಿ ವಿಮಾನ ಹತ್ತಲು ಹರಸಾಹಸ ಮಾಡುತ್ತಿರುವ ದೃಶ್ಯಗಳು ಕಂಡು ಬಂದಿದೆ. ಜನರನ್ನು ನಿಯಂತ್ರಣ ಮಾಡಲಾಗದೆ ಅಮೆರಿಕ ಪಡೆಗಳು ಗುಂಡು ಹಾರಿಸಿ ಜನರನ್ನು ಚದುರಿಸಲು ಮುಂದಾಗಿದೆ. ಸದ್ಯದ ಮಾಹಿತಿ ಪ್ರಕಾರ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಐವರು ಗುಂಡೇಟಿಗೆ ಬಲಿಯಾಗಿದ್ದಾರೆ‌ ಎಂದು ತಿಳಿದುಬಂದಿದೆ.

ಎಲ್ಲಾ ಅಮೆರಿಕರನ್ನು ಅಫ್ಘಾನ್​​​ನಿಂದ ಮುಂದಿನ ಮೂರರಿಂದ ನಾಲ್ಕು ದಿನಗಳಿಂದ ಕರೆತರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದು, ಭದ್ರತೆಗಾಗಿ 6 ಸಾವಿರ ಸೈನಿಕರನ್ನು ನಿಯೋಜನೆ ಮಾಡಿದ್ದೇವೆ. ಅಮೆರಿಕ ಮಾತ್ರವಲ್ಲದೇ ಭಾರತ ಸೇರಿದಂತೆ ನ್ಯಾಟೋ ದೇಶಗಳು ಕೂಡ ತಮ್ಮ ದೇಶದ ಪ್ರಜೆಗಳನ್ನು ಅಫ್ಘಾನ್​​ನಿಂದ ಕರೆತರಲು ಟ್ರುಪ್​​ಗಳನ್ನು ಕಳುಹಿಸಿಕೊಡುತ್ತಿವೆ.