“Justice For Madhu” ಅಭಿಯಾನ ಶುರು: ನೀವೂ ಅಭಿಯಾನದಲ್ಲಿ ಪಾಲ್ಗೊಳ್ಳಲು ಏನ್ ಮಾಡ್ಬೇಕು? ಇಲ್ಲಿದೆ ವಿವರ
ರಾಯಚೂರಿನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದ ಮಧು(23) ಎನ್ನುವ ವಿದ್ಯಾರ್ಥಿಯನ್ನು ಕಾಮುಕರು ಎ.16 ರಂದು ಕೊಲೆಗೈದು ಗುಡ್ಡದಲ್ಲಿ ಎಸೆದಿದ್ದಾರೆ ಎನ್ನಲಾದ ಪ್ರಕರಣ ಇದೀಗ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಆಕ್ರೋಶಕ್ಕೆ ಕಾರಣವಾಗುತ್ತದೆ. ಮಧು, ಗುಡ್ಡದಲ್ಲಿ ನೇಣುಬಿಗಿದ ರೀತಿಯಲ್ಲಿ ಪತ್ತೆಯಾದರೂ, ಇದು ಆತ್ಯಹತ್ಯೆಯಲ್ಲ ಇದೊಂದು ಕೊಲೆ ಪ್ರಕರಣ ಎಂದು ವಿದ್ಯಾರ್ಥಿಗಳು ಈಗಾಗಲೇ ರಾಯಚೂರಿನಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ರಾಜಕಾರಣಿಗಳು ಹಾಗೂ ಮಾಧ್ಯಮದ ವಿರುದ್ದ ಜಾಲತಾಣದಲ್ಲಿ ಗರಂ: ರಾಜಕಾರಣಿಗಳು ಚುನಾವಣಾ ಗುಂಗಿನಲ್ಲಿ ಕಳೆದುಹೋಗಿದ್ದಾರೆ , ಸ್ವಾರ್ಥ ರಾಜಕಾರಣದಲ್ಲಿಯೇ, ಆರೋಪ, ಪ್ರತ್ಯಾರೋಪದಲ್ಲಿ ಮುಳಗಿದ್ದಾರೆ ಬಿಟ್ಟರೆ ಮಧುವಿನ […]