“Justice For Madhu” ಅಭಿಯಾನ ಶುರು: ನೀವೂ ಅಭಿಯಾನದಲ್ಲಿ ಪಾಲ್ಗೊಳ್ಳಲು ಏನ್ ಮಾಡ್ಬೇಕು? ಇಲ್ಲಿದೆ ವಿವರ

ರಾಯಚೂರಿನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದ   ಮಧು(23) ಎನ್ನುವ ವಿದ್ಯಾರ್ಥಿಯನ್ನು  ಕಾಮುಕರು  ಎ.16 ರಂದು ಕೊಲೆಗೈದು  ಗುಡ್ಡದಲ್ಲಿ ಎಸೆದಿದ್ದಾರೆ ಎನ್ನಲಾದ ಪ್ರಕರಣ ಇದೀಗ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಆಕ್ರೋಶಕ್ಕೆ ಕಾರಣವಾಗುತ್ತದೆ. ಮಧು, ಗುಡ್ಡದಲ್ಲಿ ನೇಣುಬಿಗಿದ ರೀತಿಯಲ್ಲಿ  ಪತ್ತೆಯಾದರೂ, ಇದು ಆತ್ಯಹತ್ಯೆಯಲ್ಲ ಇದೊಂದು ಕೊಲೆ ಪ್ರಕರಣ  ಎಂದು ವಿದ್ಯಾರ್ಥಿಗಳು ಈಗಾಗಲೇ ರಾಯಚೂರಿನಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.

ರಾಜಕಾರಣಿಗಳು ಹಾಗೂ ಮಾಧ್ಯಮದ ವಿರುದ್ದ ಜಾಲತಾಣದಲ್ಲಿ ಗರಂ:

ರಾಜಕಾರಣಿಗಳು ಚುನಾವಣಾ ಗುಂಗಿನಲ್ಲಿ ಕಳೆದುಹೋಗಿದ್ದಾರೆ , ಸ್ವಾರ್ಥ ರಾಜಕಾರಣದಲ್ಲಿಯೇ, ಆರೋಪ, ಪ್ರತ್ಯಾರೋಪದಲ್ಲಿ ಮುಳಗಿದ್ದಾರೆ ಬಿಟ್ಟರೆ  ಮಧುವಿನ ಕುಟುಂಬಕ್ಕೆ ನ್ಯಾಯ ಕೊಡುತ್ತಿಲ್ಲ. ಆರೋಪಿಗಳನ್ನು ಹಿಡಿಯುವಲ್ಲಿ ಯಾವುದೇ ಆಸಕ್ತಿ ತೋರಿಸುತ್ತಿಲ್ಲ. ಮಾಧ್ಯಮಗಳೂ ಕೂಡ ಟಿ ಆರ್ ಪಿ ಗಳ ಹಿಂದೆ ಬಿದ್ದುಬಿಟ್ಟಿದೆ. ಅಮಾಯಕ ಹೆಣ್ಣು ಮಗಳ ಜೀವಕ್ಕೂ, ತಮಗೂ ಯಾವುದೇ ಸಂಬಂಧವಿಲ್ಲ ಎನ್ನುವಂತೆ ವರ್ತಿಸುತ್ತಿದೆ, ಇದು ಅಕ್ಷಮ್ಯ, ಈ ಹೆಣ್ಣು ಮಗಳಿಗಾಗಿ ನಾವು ತುಡಿಯುತ್ತೇವೆ. ಅವಳನ್ನು ಸಾಯಿಸಿದ ಕಾಮುಕ ಶಕ್ತಿ ಕೂಡಲೇ ಬಂಧಿಸಬೇಕು ಎನ್ನುವ ಆಕ್ರೋಶ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿದೆ.

ಈ ಪಿಟಿಷನ್ ಗೆ ಸೈನ್ ಮಾಡಿ:

ರಾಯಚೂರಿನ ಇಂಜಿನಿಯರಿಂಗ್ ವಿದ್ಯಾರ್ಥಿನಿ , ಮಧು ಪತ್ತಾರ ಅತ್ಯಾಚಾರ ಮತ್ತು ಕೊಲೆಗೈದ ರಾಕ್ಷಸ ಪ್ರವೃತ್ತಿಯ ಕ್ರೂರಿಗಳಿಗೆ ಖಂಡಿತವಾಗಿಯೂ ಗಲ್ಲು ಶಿಕ್ಷೆಯಾಗಬೇಕು ..
#ನಮ್ಮ_ಸಹೋದರಿ_ಮಧು_ಸಾವಿಗೆ_ನ್ಯಾಯ_ಕೊಡಿ  

ಎನ್ನುವ ಅಭಿಯಾನಗಳು ಶುರುವಾಗಿದೆ.ನೀವೂ ಈ ಅಭಿಯಾನದಲ್ಲಿ ಪಾಲ್ಗೊಳ್ಳಲು ಈ ಕೆಳಗೆ ನಾವು ಕೊಟ್ಟ ಪಿಟಿಷನ್ ನ ಲಿಂಕ್ ಕ್ಲಿಕ್ ಮಾಡಿ, ಸೈನ್ ಮಾಡಿ.

ಈ ಲಿಂಕ್ ಮೂಲಕ ಹೋಗಿ ಪಿಟಿಷನ್ ಗೆ ಸಹಿ ಮಾಡಿ

https://www.change.org/p/youth-justice-for-madhu?signed=true