ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಸತಿ ಕಾಲೇಜಿನಲ್ಲಿ ಉಪನ್ಯಾಸಕ ಹುದ್ದೆ ಖಾಲಿ
ಉಡುಪಿ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ , ಕಾರ್ಕಳ ತಾಲೂಕಿನ ಮಿಯ್ಯಾರಿನಲ್ಲಿರುವ ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಸತಿ ವಿಜ್ಞಾನ ಕಾಲೇಜಿಗೆ ರಸಾಯನಶಾಸ್ತ್ರ ವಿಷಯಕ್ಕೆ M.sc ಹಾಗೂ B.Ed ವಿದ್ಯಾರ್ಹತೆ ಹೊಂದಿದ ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿಗಳನ್ನು ಸದ್ರಿ ಕಾಲೇಜಿನ ಪ್ರಾಂಶುಪಾಲರಿಗೆ ಸಲ್ಲಿಸಲು ಜೂನ್ 8 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ಹಿಂದುಳಿದ ವರ್ಗಗಳ ಇಲಾಖೆ ಉಡುಪಿ, ಅನ್ನು ಸಂಪರ್ಕಿಸಬಹುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರಕಟಣೆ ತಿಳಿಸಿದೆ.
ಪೋಲ್ಯಾಂಡ್-ಹಂಗೇರಿ ದೇಶಗಳಲ್ಲಿ ಭಾರೀ ಟ್ರಕ್ ಚಾಲಕರ ನೇಮಕಾತಿಗಾಗಿ ಅರ್ಜಿ ಆಹ್ವಾನ
ಉಡುಪಿ: ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಯುರೋಪ್‌ನ ಪೋಲ್ಯಾಂಡ್ ಮತ್ತು ಹಂಗೇರಿ ದೇಶಗಳಲ್ಲಿ ಭಾರೀ ಟ್ರಕ್ ಮತ್ತು ಟ್ರೇಲರ್ ಪುರುಷ ಮತ್ತು ಮಹಿಳಾ ಚಾಲಕರ ಹುದ್ದೆಗಳಿಗೆ ಬೇಡಿಕೆ ಬಂದಿದ್ದು, ಅಂತಾರಾಷ್ಟ್ರೀಯ ವಲಸೆ ಮಾಹಿತಿ ಕೇಂದ್ರ ಕರ್ನಾಟಕದಿಂದ ನೇರ ನೇಮಕಾತಿ ನಡೆಯಲಿದೆ. ಆಸಕ್ತ ಅಭ್ಯರ್ಥಿಗಳು ಜೂನ್ 11 ರೊಳಗಾಗಿ ನೊಂದಣಿ ಮಾಡಿಕೊಳ್ಳಬಹುದು. 2009ರ ಸೆಪ್ಟಂಬರ್ 9 ಕ್ಕಿಂತ ಮೊದಲು ಕೊಡಲಾದ ಭಾರಿ ಟ್ರಕ್ ಟ್ರೇಲರ್ ಚಾಲಕ ಪರವಾನಿಗೆ ಹೊಂದಿರಬೇಕು ಮತ್ತು ಇಂಗ್ಲೀಷ್ ಭಾಷಾಜ್ಞಾನ ಕಡ್ಡಾಯವಾಗಿದೆ. ಹೆಚ್ಚಿನ […]
ಪ್ರಾಥಮಿಕ ಮತ್ತು ಪ್ರೌಢ ಶಾಲಾ ಹಂತದ ಬಿ.ಐ.ಇ.ಆರ್.ಟಿ ಹುದ್ದೆಗಾಗಿ ಅರ್ಜಿ ಆಹ್ವಾನ
ಉಡುಪಿ: ಪ್ರಸಕ್ತ ಸಾಲಿನ ಸಮಗ್ರ ಶಿಕ್ಷಣ ಯೋಜನೆಯ ಅಡಿಯಲ್ಲಿ ಜಿಲ್ಲೆಯಲ್ಲಿನ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಹಂತದಲ್ಲಿ ಖಾಲಿ ಇರುವ ಬಿ.ಐ.ಇ.ಆರ್.ಟಿ ಹುದ್ದೆಗಳನ್ನು ನೇರಗುತ್ತಿಗೆ ಆಧಾರದ ಮೇಲೆ ನಿಗದಿತ ವಿದ್ಯಾರ್ಹತೆ ಇರುವ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜೂನ್ 9 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಉಪಯೋಜನಾ ಸಮನ್ವಯಾಧಿಕಾರಿ, ಉಪನಿರ್ದೇಶಕರ ಕಚೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ ರಜತಾದ್ರಿ, ಅವರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಮಂಗಳೂರು ಬಾಲಭವನದಲ್ಲಿ ಸಂಯೋಜಕ ಹಾಗೂ ಕಚೇರಿ ಸಹಾಯಕ ಹುದ್ದೆ ಖಾಲಿ
ಮಂಗಳೂರು: ಜಿಲ್ಲೆಯ ಬಾಲಭವನದ ಚಟುವಟಿಕೆ ಮತ್ತು ಕಾರ್ಯಕ್ರಮ ನಡೆಸಲು ಕಂಪ್ಯೂಟರ್ ಜ್ಞಾನ ಹೊಂದಿರುವ ಅರ್ಹ ಅಭ್ಯರ್ಥಿಗಳಿಂದ ಕಾರ್ಯಕ್ರಮ ಸಂಯೋಜಕರು ಹಾಗೂ ಕಚೇರಿ ಸಹಾಯಕರ ಹುದ್ದೆಗೆ ಮಾಸಿಕ ಗೌರವಧನ 10,000 ರೂ.ಗಳ ಆಧಾರದಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಪಿ.ಯು.ಸಿ ಮತ್ತು ಮೇಲ್ಪಟ್ಟ ವಿದ್ಯಾರ್ಹತೆಯೊಂದಿಗೆ ಕಂಪ್ಯೂಟರ್ ಜ್ಞಾನ ಹೊಂದಿರುವ ಅರ್ಹ ಅಭ್ಯರ್ಥಿಗಳು ಕಾರ್ಯಕ್ರಮ ಸಂಯೋಜಕರು ಹಾಗೂ ಕಚೇರಿ ಸಹಾಯಕರ ಹುದ್ದೆಗೆ 2023ರ ಜೂನ್ 6ರೊಳಗೆ ಅರ್ಜಿ ಭರ್ತಿ ಮಾಡಿ ನಗರದ ಬಿಜೈ ನಲ್ಲಿರುವ ಮೆಸ್ಕಾಂ ಹತ್ತಿರದ ಜಿಲ್ಲಾ ಸ್ರೀಶಕ್ತಿ ಭವನ 2ನೇ […]
ಸ್ವಿಗ್ಗಿ ಸಂಸ್ಥೆಗೆ ಡೆಲಿವರಿ ಹುಡುಗರು ಬೇಕಾಗಿದ್ದಾರೆ
ಉಡುಪಿ/ ಮಂಗಳೂರು: ಮಂಗಳೂರು, ಪುತ್ತೂರು, ಬಂಟ್ವಾಳ, ಮೂಡಬಿದ್ರೆ, ಉಡುಪಿ, ಮಣಿಪಾಲ ಪರಿಸರದಲ್ಲಿ ಸ್ವಿಗ್ಗಿ ಸಂಸ್ಥೆಗೆ ಡೆಲಿವರಿ ಹುಡುಗರು ಬೇಕಾಗಿದ್ದಾರೆ. ಆಸಕ್ತರು 8951620203 ಅನ್ನು ಸಂಪರ್ಕಿಸಿ