ಜೆ.ಸಿ.ಐ ಮಣಿಪಾಲ ಹಿಲ್ ಸಿಟಿ ವತಿಯಿಂದ ಯುವ ಸಬಲೀಕರಣ ತರಬೇತಿ ಕಾರ್ಯಕ್ರಮ

ಮಣಿಪಾಲ: ಮಣಿಪಾಲದ ಡಾ. ಟಿ.ಎಂ.ಎ. ಪೈ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಜೆ.ಸಿ.ಐ ಮಣಿಪಾಲ ಹಿಲ್ ಸಿಟಿ ವತಿಯಿಂದ ‘ಯುವ ಸಬಲೀಕರಣ’ ತರಬೇತಿ ಕಾರ್ಯಕ್ರಮವನ್ನು ಆ.5 ರಂದು ಹಮ್ಮಿಕೊಳ್ಳಲಾಗಿತ್ತು. ಸಭೆಯ ಅಧ್ಯಕ್ಷತೆ ಜೇಸಿಐ ಮಣಿಪಾಲ ಹಿಲ್ ಸಿಟಿ ಅಧ್ಯಕ್ಷ ಜೇಸಿ ಜಯಂತ ತಲವಾರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಾಲೇಜಿನ ಪ್ರಾಂಶುಪಾಲ ಕಾಂತರಾಜ್ ಎ.ಎನ್., ಸಂಪನ್ಮೂಲ ವ್ಯಕ್ತಿಯಾಗಿ ಜೇ.ಸಿ.ಐ. ಸೆನೆಟರ್ ಸುಭಾಷ್ ಬಂಗೇರ, ಐಕಾನಿಕ್ ತರಬೇತುದಾರರು, ಜೇಸಿಐ ಭಾರತ, ಹಾಗೂ ಜೊತೆಗೆ ಕಾಲೇಜಿನ ಪ್ರಾಧ್ಯಾಪಕ ವೃಂದದವರು ಹಾಗೂ ಜೇ.ಸಿ.ಐ. ನ […]

ಜಗದೀಶ್ ಕೆಮ್ಮಣ್ಣು ಅವರಿಗೆ ಉದ್ಯೋಗ ರತ್ನ ಪ್ರಶಸ್ತಿ

ಕುಂದಾಪುರ: ಜೆಸಿಐ ಇಂಡಿಯಾ ವಲಯ 15 ರ ಬೆಳವಣಿಗೆ, ಅಭಿವೃದ್ದಿ ಮತ್ತು ವ್ಯವಹಾರ ಸಮ್ಮೇಳನ ‘ವೃದ್ದಿ’ ಕಾರ್ಯಕ್ರಮವು ಜೆಸಿಐ ಶಂಕರನಾರಾಯಣದ ಆತಿಥ್ಯದಲ್ಲಿ ಹಾಲಾಡಿಯ ಶಾಲಿನಿ ಜಿ. ಶಂಕರ್ ಕನ್ ವೆನ್ಶನ್ ಸೆಂಟರ್ ನಲ್ಲಿ ಜು.23 ರಂದು ಜರುಗಿತು. ಜೆಸಿಐ ಆಂದೋಲನದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಗಣನೀಯ ಸೇವೆ ಸಲ್ಲಿಸಿದ ಹಾಗೂ ಬ್ಯಾಂಕಿಂಗ್ ಸೇವೆಯಲ್ಲಿ ಕೋಟ ಮೂರ್ತೆದಾರರ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿಯಾಗಿ ಹಿಂದುಳಿದ ವರ್ಗದ ಸಹಕಾರಿ ಸಂಸ್ಥೆಯನ್ನು ತನ್ನ ಕಾರ್ಯವೈಖರಿಯ ಮೂಲಕ ರಾಜ್ಯದ ಅತ್ಯುತ್ತಮ ಸಹಕಾರಿ ಸಂಘವೆಂಬ ಹೆಗ್ಗಳಿಕೆಗೆ […]

ಸುಣ್ಣಾರಿ: ಎಕ್ಸಲೆಂಟ್ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತಾ ಕಾರ್ಯಾಗಾರ

ಕುಂದಾಪುರ: ಜೆ.ಸಿ.ಐ ಸಹಭಾಗಿತ್ವದಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತಾ ಕಾರ್ಯಾಗಾರವು ಸುಣ್ಣಾರಿಯ ಎಕ್ಸಲೆಂಟ್ ಪ್ರೌಢಶಾಲೆಯಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಡಾ. ಜಗದೀಶ್ ಜೋಗಿ ಇವರು ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿ ವಿದ್ಯಾರ್ಥಿಗಳ ಪರೀಕ್ಷಾ ಆತಂಕವನ್ನು ದೂರಮಾಡುತ್ತಾ ಸಮಯವು ಅತ್ಯಂತ ಮಹತ್ವಪೂರ್ಣವಾಗಿದ್ದು, ಕಳೆದು ಹೋದ ಸಮಯ ಮರಳಿಬಾರದು, ಎನ್ನುವ ಕಟುಸತ್ಯವನ್ನು ಅರಿತು ಶಿಸ್ತುಬದ್ಧವಾದ ಅಧ್ಯಯನ ನಡೆಸಬೇಕೆಂದರು. ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಅಧ್ಯಯನ ವೇಳಾಪಟ್ಟಿ ಹಾಕಿಕೊಂಡು ನಿರಂತರ ಓದುವುದು ಮತ್ತು ಓದಿದ ವಿಚಾರ ಹೆಚ್ಚು ಮನನ ಮಾಡಿಕೊಳ್ಳುವುದರಿಂದ ನೆನಪಿನಲ್ಲಿ ಇಟ್ಟುಕೊಳ್ಳಲು ಸಾಧ್ಯವೆಂದು […]

ಜೆಸಿಐ ಪರ್ಕಳ ಅಧ್ಯಕ್ಷರಾಗಿ ಸ್ವರಾಜ್ ಶೆಟ್ಟಿ ಪರ್ಕಳ ಆಯ್ಕೆ

ಪರ್ಕಳ: ಭಾರತದ ಪ್ರತಿಷ್ಠಿತ ಘಟಕವಾದ ಜೆಸಿಐ ಪರ್ಕಳ ಇದರ 2023ನೇ ಸಾಲಿನ ಅಧ್ಯಕ್ಷರಾಗಿ ಜೆಸಿ ಸ್ವರಾಜ್ ಶೆಟ್ಟಿ ಪರ್ಕಳ ಆಯ್ಕೆಯಾಗಿದ್ದಾರೆ ಹಾಗೂ ಕಾರ್ಯದರ್ಶಿಯಾಗಿ ಜೆಸಿ ಸಂಯುಕ್ತ ಬಿ ಹಾಗೂ ಜೂನಿಯರ್ ಜೇಸಿ ಅಧ್ಯಕ್ಷರಾಗಿ ಜೆಜೆಸಿ ಸ್ಮರಣ್ ದೇವಾಡಿಗ ಆಯ್ಕೆಗೊಂಡಿದ್ದಾರೆ. 2023ನೇ ಘಟಕಾಡಳಿತ ಮಂಡಳಿಯ ನಿಕಟಪೂರ್ವ ಅಧ್ಯಕ್ಷರಾಗಿ ಜೆಸಿ ಉಷಾ ಕಲ್ಮಾಡಿ, ಉಪಾಧ್ಯಕ್ಷರಾಗಿ ಭರತ್ ಕುಲಾಲ್ , ಜಯಂತ್ ಜೋಗಿ ,ಜಶ್ವಂತ್ ಜೋಗಿ,ರಮ್ಯ ನಾಯಕ್, ಸಾಕ್ಷಿ, ಕೋಶಾಧಿಕಾರಿಯಾಗಿ ಶಾಂತಿ ಪ್ರಸಾದ್ ಶೆಟ್ಟಿ , ಜೊತೆ ಕಾರ್ಯದರ್ಶಿಯಾಗಿ ಬಾಬು, ಮಹಿಳಾ […]