ಭಯೋತ್ಪಾದಕತೆಯ ವಿರುದ್ದ ಗುಡುಗಿದ ಬೆಂಜಮಿನ್ ನೆತನ್ಯಾಹು: ಇಸ್ರೇಲ್-ಹಮಾಸ್ ಯುದ್ದ ಉಲ್ಬಣ; 1600 ರ ಗಡಿ ದಾಟಿದ ಸಾವಿನ ಸಂಖ್ಯೆ

ಟೆಲ್ ಅವೀವ್: ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಯುದ್ಧದ ಮಧ್ಯೆ, ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮಂಗಳವಾರ ತಮ್ಮ ದೇಶವು “ಯುದ್ಧವನ್ನು ಪ್ರಾರಂಭಿಸಲಿಲ್ಲ, ಆದರೆ ಅದನ್ನು ಮುಗಿಸುತ್ತದೆ” ಎಂದು ಹೇಳಿದ್ದಾರೆ. “ನಮಗೆ ಈ ಯುದ್ಧ ಬೇಕಾಗಿಲ್ಲ. ಇದು ಅತ್ಯಂತ ಕ್ರೂರ ಮತ್ತು ಅನಾಗರಿಕ ರೀತಿಯಲ್ಲಿ ನಮ್ಮ ಮೇಲೆ ಬಲವಂತವಾಗಿ ಹೇರಲಾಯಿತು. ಇಸ್ರೇಲ್ ಈ ಯುದ್ಧವನ್ನು ಪ್ರಾರಂಭಿಸದಿದ್ದರೂ, ಇಸ್ರೇಲ್ ಅದನ್ನು ಮುಗಿಸುತ್ತದೆ ”ಎಂದು ಪ್ರಧಾನಿ ಹೇಳಿದ್ದಾರೆ. ಶನಿವಾರ ಪ್ರಾರಂಭವಾದ ಇಸ್ರೇಲ್-ಹಮಾಸ್ ಯುದ್ಧವು ಮಂಗಳವಾರವೂ ಮುಂದುವರೆದಿದ್ದು ಸಾವಿನ ಸಂಖ್ಯೆ […]

ಇಸ್ರೇಲ್ ದೇಶದಲ್ಲಿರುವ ನಾಗರಿಕರ ಮಾಹಿತಿಗಾಗಿ ಕಂಟ್ರೋಲ್ ರೂಂ ಸಂಪರ್ಕಿಸಿ

ಉಡುಪಿ: ಪ್ರಸ್ತುತ ಪರಿಸ್ಥಿತಿಗೆ ಸಂಬಂಧಿಸಿದಂತೆ, ಇಸ್ರೇಲ್ ದೇಶಗಳಲ್ಲಿ ವ್ಯಾಪಾರ, ಶಿಕ್ಷಣ, ಉದ್ಯೋಗ ಹಾಗೂ ಇತರೆ ಉದ್ದೇಶಗಳಿಗೆ ಹೋಗಿರುವ ಮತ್ತು ವಾಸವಾಗಿರುವ ಉಡುಪಿ ಜಿಲ್ಲೆಗೆ ಸಂಬಂಧಪಟ್ಟ ನಾಗರಿಕರಿದ್ದಲ್ಲಿ ಅವರ ಬಗ್ಗೆ ಮಾಹಿತಿಯನ್ನು ಜಿಲ್ಲಾಧಿಕಾರಿಗಳ ಕಚೇರಿ, ಮಣಿಪಾಲ, ಉಡುಪಿಯಲ್ಲಿ ತೆರೆದಿರುವ ಕಂಟ್ರೋಲ್ ರೂಂ ಸಂಖ್ಯೆ: 1077 ಹಾಗೂ 0820- 2574802 ಅಥವಾ ರಾಜ್ಯ ಸರ್ಕಾರದ ತುರ್ತು ಸಂಖ್ಯೆ: 080-22340676, 080-22253707 ಗೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಮಾಸ್ ಮೇಲೆ ದಾಳಿ ತೀವ್ರಗೊಳಿಸಿದ ಇಸ್ರೇಲ್: ಕಚ್ಚಾ ತೈಲ ಬೆಲೆ ಗಗನಕ್ಕೇರಿಕೆ

ಟೆಲ್ ಅವೀವ್: ಹಮಾಸ್ ಭಯೋತ್ಪಾದಕರು ಇಸ್ರೇಲ್ ಮೇಲ್ ದಾಳಿ ನಡೆಸಿ 600ಕ್ಕೂ ಹೆಚ್ಚು ನಾಗರಿಕರು ಮೃತಪಟ್ಟ ದಾರುಣ ಘಟನೆಯ ಬಳಿಕ ಇಸ್ರೇಲ್‌ನ ಸೇನೆಯು ಭಾನುವಾರದಂದು ಗಾಜಾದ ಪ್ಯಾಲೇಸ್ಟಿನಿಯನ್ ಎನ್‌ಕ್ಲೇವ್ ಅನ್ನು ಹೊಡೆದುರುಳಿಸಿದೆ. ಇಸ್ರೇಲಿನ ಇತಿಹಾಸದಲ್ಲಿ ಅತ್ಯಂತ ಕೆಟ್ಟ ದಿನಗಳಲ್ಲಿ ಒಂದಾಗಿರುವ ಈ ಸನ್ನಿವೇಶವನ್ನು ದೇಶವು ಸಮರ್ಥವಾಗಿ ಎದುರಿಸುತ್ತಿದ್ದು, ಭಾರತ ಸಹಿತ ವಿಶ್ವದಾದ್ಯಂತದ ದೇಶಗಳು ಇಸ್ರೇಲಿಗೆ ಬೆಂಬಲ ನೀಡುತ್ತಿವೆ. For the past 15 hours, Israel has been at war with Hamas terrorists who […]

ಇತಿಹಾಸದಲ್ಲಿ ಮೊದಲ ಬಾರಿ ಇಸ್ರೇಲಿಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ: ಎಸ್ ಜೈಶಂಕರ್

ನವದೆಹಲಿ: ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವಿನ ಸಂಘರ್ಷವು ಯುಗಗಳಿಂದಲೂ ನಡೆಯುತ್ತಿದೆ. ನಮಗೆ ಕೆಲವು ರಾಜಕೀಯ ಕಾರಣಗಳಿವೆ, ಇದರಿಂದಾಗಿ ನಾವು ಇಸ್ರೇಲ್ ಜೊತೆಗಿನ ನಮ್ಮ ಸಂಬಂಧವನ್ನು ಮುಂದುವರಿಸಲಿಲ್ಲ. ನಾವು ನಮ್ಮನ್ನು ನಿರ್ಬಂಧಿಸಿದ್ದೇವೆ. ಭಾರತದ ಇತಿಹಾಸದಲ್ಲಿ ಇಸ್ರೇಲ್‌ಗೆ ಭೇಟಿ ನೀಡಿದ ಮೊದಲ ಪ್ರಧಾನಿ ಮೋದಿ. ನಾವು ಬಾಂಧವ್ಯದಿಂದ ಪ್ರಯೋಜನ ಪಡೆಯಬಹುದೆಂದು ಇಡೀ ದೇಶಕ್ಕೆ ತಿಳಿದಿದೆ. ಒಮ್ಮೆ ನೀವು ವೋಟ್ ಬ್ಯಾಂಕ್ ರಾಜಕೀಯದಿಂದ ಹೊರಬಂದರೆ, ಅದು ನಿಮ್ಮ ವಿದೇಶಾಂಗ ನೀತಿಗಳ ಮೇಲೆ ಸಹ ಪರಿಣಾಮ ಬೀರುತ್ತದೆ. ವೋಟ್ ಬ್ಯಾಂಕ್ ರಾಜಕೀಯವು ರಾಷ್ಟ್ರೀಯ […]

ಗಾಜಾ ಉಗ್ರಗಾಮಿಗಳು ರಾಕೆಟ್ ಗಳ ಸುರಿಮಳೆಗೈದರೂ ಇಸ್ರೇಲಿಗರ ಕೂದಲೂ ಕೊಂಕಲು ಬಿಡದ ಐರನ್ ಡೋಮ್!! ಇಸ್ರೇಲಿನ ಅಬೇಧ್ಯ ಕೋಟೆಯ ರಕ್ಷಕ ಈ ಡೋಮ್

ಟೆಲ್ ಅವೀವ್: ಪ್ರಪಂಚದಲ್ಲಿ ಪ್ರತಿನಿತ್ಯವೂ ಯುದ್ದ ಸನ್ನದ್ಧ ಸ್ಥಿತಿಯಲ್ಲಿರುವ ದೇಶ ಇಸ್ರೇಲ್. ಇಲ್ಲಿಯ ಪ್ರತಿ ನಾಗರಿಕನೂ ಒಬ್ಬ ಸೈನಿಕ. ಅತ್ಯಂತ ಮುಂದುವರಿದ ದೇಶವಾಗಿರುವ ಅಂಗೈ ಅಷ್ಟಗಲದ ಇಸ್ರೇಲ್ ಬಳಿ ಅತ್ಯಾಧುನಿಕ ಅಸ್ತ್ರ ಶಸ್ತ್ರಗಳಿವೆ. ಅವೆಲ್ಲವುಗಳಲ್ಲಿ ಅತಿ ವಿನೂತನ ಮತ್ತು ಅತ್ಯಂತ ಮಹತ್ವಪೂರ್ಣವಾಗಿರುವುದು ಐರನ್ ಡೋಮ್. ಇಸ್ರೇಲಿನ ಶತ್ರು ದೇಶವಾದ ಪ್ಯಾಲೆಸ್ಟೀನ್ ನಲ್ಲಿ ನೆಲೆಸಿರುವ ಉಗ್ರಗಾಮಿಗಳು ನಿತ್ಯವೂ ಇಸ್ರೇಲ್ ಮೇಲೆ ರಾಕೆಟ್ ದಾಳಿ ನಡೆಸುತ್ತಿರುತ್ತಾರೆ. ಇಂತಹ ಸಂದರ್ಭಗಳಲ್ಲಿ ತನ್ನ ದೇಶದ ನಾಗರಿಕರನ್ನು ರಕ್ಷಿಸಲು ಇಸ್ರೇಲಿನ ರಕ್ಷಣಾ ಸಚಿವಾಲಯವು ಐರನ್ […]