ಸ್ಪೋಟಕಗಳನ್ನಿಟ್ಟು ಉದಯಪುರ-ಅಹಮದಾಬಾದ್ ರೈಲ್ವೆ ಹಳಿ ಘಾಸಿ ಪ್ರಕರಣ: ಭಯೋತ್ಪಾದಕ ಕೃತ್ಯದ ಅನುಮಾನ

ಉದಯಪುರ: ಅಕ್ಟೋಬರ್ 31 ರಂದು ಅಸರ್ವ ರೈಲು ನಿಲ್ದಾಣದಿಂದ ಉದಯಪುರ-ಅಹಮದಾಬಾದ್ ರೈಲ್ವೆ ಹಳಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದು, ಈ ಹಳಿಯಲ್ಲಿ ಸ್ಪೋಟಕಗಳನ್ನಿರಿಸಿ ರೈಲ್ವೆ ಹಳಿಯನ್ನು ಘಾಸಿಗೊಳಿಸಿ ರೈಲು ಅಪಘಾತ ನಡೆಸಿ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಪ್ರಾಣಾಪಾಯ ಮಾಡುವ ಸಂಚು ನಡೆಸಿದ್ದು, ಸ್ಥಳೀಯರ ಸಮಯೋಚಿತ ಕಾರ್ಯಾಚರಣೆಯಿಂದ ದೊಡ್ಡ ಅನಾಹುತವೊಂದು ತಪ್ಪಿದೆ. ಉದಯಪುರ ಮತ್ತು ಅಹಮದಾಬಾದ್ ನಡುವೆ ಹೊಸದಾಗಿ ತೆರೆಯಲಾದ ರೈಲು ಮಾರ್ಗದಲ್ಲಿ “ಡಿಟೋನೇಟರ್” ಬಳಸಿ ಸ್ಫೋಟ ನಡೆಸಿದ್ದರಿಂದ ರೈಲ್ವೆ ಟ್ರ್ಯಾಕ್‌ನಲ್ಲಿ ಬಿರುಕುಗಳು ಕಂಡುಬಂದಿದ್ದವು. ಇದು ಉದ್ದೇಶಪೂರ್ವಕವಾಗಿ […]

ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಮಾಹಿತಿ ನೀಡಿದವರಿಗೆ 25 ಲಕ್ಷ ಬಹುಮಾನ ಘೋಷಿಸಿದ ಎನ್‌ಐಎ

ನವದೆಹಲಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮಾಹಿತಿ ನೀಡಿದವರಿಗೆ 25 ಲಕ್ಷ ರೂಪಾಯಿ ಮತ್ತು ಆತನ ಸಹಚರರ ಮಾಹಿತಿ ನೀಡಿದವರಿಗೆ ನಗದು ಬಹುಮಾನ ನೀಡುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಘೋಷಿಸಿದ್ದು, ಡಿ ಕಂಪನಿಯು ಭಾರತದಲ್ಲಿ ಶಸ್ತ್ರಾಸ್ತ್ರ, ಡ್ರಗ್ಸ್, ನಕಲಿ ಭಾರತೀಯ ಕರೆನ್ಸಿ ಕಳ್ಳಸಾಗಣೆ ಮಾಡುವ ಘಟಕವನ್ನು ಸ್ಥಾಪಿಸಿರುವ ಬಗ್ಗೆ ಹಾಗೂ ಪಾಕಿಸ್ತಾನಿ ಏಜೆನ್ಸಿಗಳು ಮತ್ತು ಭಯೋತ್ಪಾದಕ ಸಂಘಟನೆಗಳ ಸಹಾಯದಿಂದ ಭಯೋತ್ಪಾದಕ ದಾಳಿಗಳನ್ನು ನಡೆಸಲು ಯೋಚಿಸಿರುವ ಬಗ್ಗೆ ಸಂಸ್ಥೆಯು ತನಿಖೆ ನಡೆಸಿದೆ. ಎನ್‌ಐಎ ಆತನ ಫೋಟೋ ಬಿಡುಗಡೆ […]

ಹಮೀದ್ ಅನ್ಸಾರಿ ಉಪರಾಷ್ಟ್ರಪತಿಯಾಗಿದ್ದಾಗ ಭಾರತಕ್ಕೆ ಭೇಟಿ ನೀಡಿದ್ದೆ: ಪಾಕ್ ಪತ್ರಕರ್ತನ ಹೇಳಿಕೆಯಿಂದ ದೇಶದಲ್ಲಿ ಸಂಚಲನ

ನವದೆಹಲಿ: ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ತನ್ನನ್ನು ಭಾರತಕ್ಕೆ ಆಹ್ವಾನಿಸುತ್ತಿದ್ದರು ಎಂಬ ಪಾಕ್ ಪತ್ರಕರ್ತನ ಹೇಳಿಕೆ ದೇಶದಲ್ಲಿ ಸಂಚಲನ ಸೃಷ್ಟಿಸಿದೆ. ಈ ಹೇಳಿಕೆಯಿಂದ ದೇಶದ ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದಾರೆ. ಹಮೀದ್ ಅನ್ಸಾರಿ ಉಪರಾಷ್ಟ್ರಪತಿಯಾಗಿದ್ದಾಗ ಭಾರತಕ್ಕೆ ಭೇಟಿ ನೀಡಿದ್ದೆ ಮತ್ತು ಆ ಸಮಯದಲ್ಲಿ ಪಾಕಿಸ್ತಾನದ ಐಎಸ್‌ಐ ಜೊತೆ ಭಾರತಕ್ಕೆ ಸಂಬಂಧಿಸಿದ ಹಲವು ಗೌಪ್ಯ ಮಾಹಿತಿಗಳನ್ನು ಹಂಚಿಕೊಂಡಿದ್ದಾಗಿ ಪಾಕಿಸ್ತಾನಿ ಪತ್ರಕರ್ತರೊಬ್ಬರ ಸಂದರ್ಶನದಿಂದ ಈ ವಿವಾದ ಹುಟ್ಟಿಕೊಂಡಿದೆ. “ಭಾರತದ ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು […]