ಮೂಗಿನ ಕೋವಿಡ್ ಲಸಿಕೆ: ಖಾಸಗಿ ಆಸ್ಪತ್ರೆಗಳಲ್ಲಿ 800 ರೂ, ಸರ್ಕಾರಿ ಆಸ್ಪತ್ರೆಗಳಲ್ಲಿ 325 ರೂಗೆ ಲಭ್ಯ

ನವದೆಹಲಿ: ಭಾರತ್ ಬಯೋಟೆಕ್ ನ ಮೂಗಿನ ಕೋವಿಡ್ ಲಸಿಕೆ ಇಂಕೋವಾಕ್ ಬೆಲೆಗಳನ್ನು ಕೇಂದ್ರ ಸರಕಾರವು ಮಂಗಳವಾರ ನಿಗದಿಪಡಿಸಿದೆ. ಮೂಗಿನ ಲಸಿಕೆಯನ್ನು ಬೂಸ್ಟರ್ ಡೋಸ್ ಆಗಿ ಉಪಯೋಗಿಸಬಹುದಾಗಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ 800 ರೂ. ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ 325 ರೂಗಳಿಗೆ ಲಭ್ಯವಿರಲಿದೆ ಎಂದು ಸುದ್ದಿ ಸಂಸ್ಥೆ ಎ.ಎನ್.ಐ ವರದಿ ಮಾಡಿದೆ. ಜನವರಿ ನಾಲ್ಕನೇ ವಾರದಿಂದ ದೇಶಾದ್ಯಂತ ಇಂಕೋವಾಕ್ ಲಭ್ಯವಿರಲಿದೆ. 18 ವರ್ಷ ಮೇಲ್ಪಟ್ಟವರು, ಈಗಾಗಲೇ ಕೋವ್ಯಾಕ್ಸೀನ್ ಮತ್ತು ಕೋವಿಶೀಲ್ಡ್ ತೆಗೆದುಕೊಂಡಿರುವವರು ಬೂಸ್ಟರ್ ಡೋಸ್ ನ ಬಹು ಆಯ್ಕೆಯಾಗಿ ಇಂಕೋವಾಕ್ […]

ಮುಚ್ಚಿದ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯ; ಕೋವಿನ್ ನಲ್ಲಿ ಮೂಗಿನ ಲಸಿಕೆ ಇಂಕೋವಾಕ್ ಲಭ್ಯ

ಬೆಂಗಳೂರು: ಚೀನಾ ಸೇರಿದಂತೆ ವಿಶ್ವದ ಕೆಲವು ಭಾಗಗಳಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಫ್ಲ್ಯೂ ಮಾದರಿ ಮತ್ತು ತೀವ್ರ ಉಸಿರಾಟದ ಕಾಯಿಲೆಗೆ ಕಡ್ಡಾಯ ಕೋವಿಡ್ ಪರೀಕ್ಷೆಯನ್ನು ನಡೆಸಲು ಕರ್ನಾಟಕ ಸರ್ಕಾರ ಗುರುವಾರ ನಿರ್ಧರಿಸಿದೆ. ರಾಜ್ಯಕ್ಕೆ ಆಗಮಿಸುವ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಶೇಕಡಾ ಎರಡರಷ್ಟು ಯಾದೃಚ್ಛಿಕ ಪರೀಕ್ಷೆಯು ಕೇಂದ್ರದಿಂದ ಪರಿಷ್ಕೃತ ನಿರ್ದೇಶನಗಳವರೆಗೆ ಮುಂದುವರಿಯುತ್ತದೆ ಎಂದು ರಾಜ್ಯ ಆರೋಗ್ಯ ಸಚಿವ ಡಾ ಕೆ ಸುಧಾಕರ್ ತಿಳಿಸಿದ್ದಾರೆ. ಮುಚ್ಚಿದ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯ ಪಬ್‌ಗಳು, ಬಾರ್‌ಗಳು, ಕಚೇರಿಗಳು, ರೆಸ್ಟೋರೆಂಟ್‌ಗಳು, ಮಾಲ್‌ಗಳು, ಬಸ್‌ಗಳು, […]