ಹೆಣ್ಮಕ್ಕಳೇ ಸ್ಟ್ರಾಂಗು ಗುರೂ… ಚೊಚ್ಚಲ ಕಪ್ ಗೆದ್ದ RCB ಮಹಿಳಾ ತಂಡ!! ಪುರುಷರ ತಂಡದ ಮೇಲೆ ಹೆಚ್ಚಾದ ಒತ್ತಡ… Instagram ನಲ್ಲಿ ಎರಡನೇ ಸ್ಥಾನಕ್ಕೆ ಜಿಗಿದ RCB
ಆರ್‌ಸಿಬಿ (RCB) ಮಹಿಳಾ ತಂಡ ಡೆಲ್ಲಿ ಕ್ಯಾಪಟಿಲ್ಸ್ ವಿರುದ್ಧ ಮಹಿಳಾ ಪ್ರೀಮಿಯರ್ ಲೀಗ್ (WPL)ನಲ್ಲಿ ಮೊದಲ ಗೆಲುವು ಸಾಧಿಸಿ ಇತಿಹಾಸ ಬರೆದಿದೆ. 16 ವರ್ಷಗಳಿಂದ ಪುರುಷರ ತಂಡ ಗೆಲುವಿಗಾಗಿ ಹಪಹಪಿಸುತ್ತಿದೆ. ಆದರೆ ಈ ಬಾರಿ ಮಹಿಳಾ ತಂಡ ಫೈನಲ್ಸ್ ಗೆದ್ದಿದೆ. ರೋಚಕ ಪಂದ್ಯವನ್ನು ಕೋಟ್ಯಂತರ ಅಭಿಮಾನಿಗಳು ವೀಕ್ಷಿಸಿದ್ದು, ವಿರಾಟ್ ಕೊಹ್ಲಿ ಕೂಡ ಅಭಿಮಾನಿಯಂತೆ ಪಂದ್ಯ ವೀಕ್ಷಿಸಿದ್ದಾರೆ. ಗೆಲುವಿನ ಖುಷಿ ತಾಳಲಾರದೆ ಕೊಹ್ಲಿ ಕ್ಯಾಪ್ಟನ್ ಸ್ಮೃತಿ ಮಂಧಾನಗೆ ವಿಡಿಯೋ ಕಾಲ್ ಮಾಡಿದ್ದಾರೆ. ಕಪ್ ಗೆದ್ದಿದ್ದಕ್ಕಾಗಿ ಅಭಿನಂದನೆಗಳನ್ನು ತಿಳಿಸಿದ್ದಾರೆ. ಈ […]
ಇನ್ಸ್ಟಾಗ್ರಾಂನಲ್ಲಿ ಹಿಂದೂ ದೇವರ ಬಗ್ಗೆ ಅಶ್ಲೀಲ ಸಂದೇಶ: ವ್ಯಕ್ತಿ ಬಂಧನ
ಮಂಗಳೂರು: ಇನ್ಸ್ಟಾಗ್ರಾಂನಲ್ಲಿ ಹಿಂದೂ ದೇವರ ಬಗ್ಗೆ ಅಶ್ಲೀಲವಾದ ಸಂದೇಶವನ್ನು ಹಂಚಿಕೊಂಡ ಆರೋಪಿಯನ್ನು ನಗರದ ಸೆನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ನಗರದ ಬಿಕರ್ನಕಟ್ಟೆ ಮಸೀದಿ ರಸ್ತೆಯ ನಿವಾಸಿ ಮೊಹಮ್ಮದ್ ಸಲ್ಮಾನ್ (22) ಎಂದು ಗುರುತಿಸಲಾಗಿದೆ. ಆರೋಪಿಯು ಹಿಂದೂ ದೇವರ ಬಗ್ಗೆ ಇನ್‌ಸ್ಟಾಗ್ರಾಂ ಖಾತೆಯೊಂದರಲ್ಲಿ ಅಶ್ಲೀಲವಾಗಿ ಕಮೆಂಟ್ ಮಾಡಿದ್ದ ಬಗ್ಗೆ ಸೆನ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆರೋಪಿಯನ್ನು ನಗರದ 7ನೇ ಜೆ.ಎಂ.ಎಫ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮಂಗಳೂರು ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ […]
ಸ್ನ್ಯಾಪ್‌ಚಾಟ್ ಹಾಗೂ ಇನ್ಸ್ಟಾಗ್ರಾಂ ಗಳಲ್ಲಿ ಅಪ್ರಾಪ್ತ ಬಾಲಕಿ ಹಾಗೂ ಯುವತಿಯ ತೇಜೋವಧೆ: ಸೆನ್ ಠಾಣೆಯಲ್ಲಿ ದೂರು ದಾಖಲು
ಉಡುಪಿ: ಇಲ್ಲಿನ 14 ವರ್ಷದ ಬಾಲಕಿಯೊಬ್ಬಳ ಪೋಷಕರು ತಮ್ಮ ಮಗಳ ಫೋಟೋವನ್ನು ಅಸಭ್ಯ ರೀತಿಯಲ್ಲಿ ರೂಪಾಂತರಿಸಿ(ಮಾರ್ಫ್) ಸ್ನ್ಯಾಪ್‌ಚಾಟ್ ವೀಡಿಯೋನಲ್ಲಿ ಪ್ರಸಾರ ಮಾಡಲಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಉಡುಪಿ ಸೈಬರ್ ಎಕನಾಮಿಕ್ ಮತ್ತು ನಾರ್ಕೋಟಿಕ್ ಕ್ರೈಂ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಬಾಲಕಿಯ ತಾಯಿ, ತನ್ನ ಮಗಳ ಫೋಟೋವನ್ನು ಅಸಭ್ಯ ವೀಡಿಯೊದಲ್ಲಿ ಬಳಸಿದ್ದಾರೆ ಮತ್ತು ಜುಲೈ 30 ರಂದು ಸ್ನ್ಯಾಪ್‌ಚಾಟ್‌ನಲ್ಲಿ ತನ್ನ ಸಂಪರ್ಕಗಳಿಗೆ ಪ್ರಸಾರ ಮಾಡಿದ್ದಾರೆ ಎಂದು ಹೇಳಿದ್ದಾರೆ. ನಕಲಿ ಸ್ನ್ಯಾಪ್‌ಚಾಟ್ ಖಾತೆಯನ್ನು ಬಳಸಿಕೊಂಡು ವೀಡಿಯೊವನ್ನು ಪ್ರಸಾರ […]
ವಾಟ್ಸಾಪ್ (WhatsApp)ಬಳಕೆದಾರರು ಈಗ ನಾಲ್ಕು ಫೋನ್‌ಗಳಲ್ಲಿ ಒಂದು ಖಾತೆಯನ್ನು ಬಳಸಬಹುದು: ಹೇಗೆಂದು ತಿಳಿಯಿರಿ
ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನ ಸಿಇಒ ಮಾರ್ಕ್ ಜುಕರ್‌ಬರ್ಗ್, ವಾಟ್ಸಾಪ್ (WhatsApp) ಅಂತಿಮವಾಗಿ ಬಹು-ಸಾಧನ ಲಾಗಿನ್ ಬೆಂಬಲವನ್ನು ಪರಿಚಯಿಸುತ್ತಿದೆ ಎಂದು ಘೋಷಿಸಿದ್ದು, ಇದು ಬಳಕೆದಾರರಿಗೆ ಒಂದೇ ವಾಟ್ಸಾಪ್ ಖಾತೆಯನ್ನು ನಾಲ್ಕು ಬೇರೆ ಬೇರೆ ಫೋನ್‌ಗಳಲ್ಲಿ ಬಳಸಲು ಅನುವು ಮಾಡಿಕೊಡುತ್ತದೆ. ವಾಟ್ಸಾಪ್ ಪ್ರಕಾರ, ಈ ವೈಶಿಷ್ಟ್ಯವನ್ನು ಮುಂಬರುವ ವಾರಗಳಲ್ಲಿ ಎಲ್ಲಾ ಬಳಕೆದಾರರಿಗೆ ಬಿಡುಗಡೆ ಮಾಡಲಾಗುವುದು. ಈ ಹಿಂದೆ, ಬಳಕೆದಾರರು ಒಂದೇ ಫೋನ್ ಮತ್ತು ಬಹು ಕಂಪ್ಯಾನಿಯನ್ ಡೆಸ್ಕ್‌ಟಾಪ್ ಸಾಧನಗಳಲ್ಲಿ ಒಂದು ವಾಟ್ಸಾಪ್ ಖಾತೆ ಬಳಸಲು ಸೀಮಿತರಾಗಿದ್ದರು. ಈ ಹೊಸ ಬಹು-ಸಾಧನ […]
ಮೂರನೇ ಸುತ್ತಿನ ಉದ್ಯೋಗ ಕಡಿತಕ್ಕೆ ಮುಂದಾದ ಸಾಮಾಜಿಕ ದೈತ್ಯ ಸಂಸ್ಥೆ ಮೆಟಾ: 4 ಸಾವಿರ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್
ನವದೆಹಲಿ: ಫೇಸ್ ಬುಕ್, ವಾಟ್ಸ್ ಆಪ್, ಇನ್ಸ್ಟಾ ಗ್ರಾಮ್ ನ ಮಾತೃ ಸಂಸ್ಥೆಯಾದ ಮೆಟಾ ಉದ್ಯೋಗಿಗಳು ಏಪ್ರಿಲ್ 19 ರಂದು ವಜಾಗೊಳಿಸುವ ಪ್ರಕ್ರಿಯೆಗೆ ಸಾಕ್ಷಿಯಾಗುವ ಸಾಧ್ಯತೆಯಿದೆ ಎಂದು ಭಾರತದಲ್ಲಿನ ಸಾಮಾಜಿಕ ಮಾಧ್ಯಮ ದೈತ್ಯದ ಕನಿಷ್ಠ ಇಬ್ಬರು ಸಿಬ್ಬಂದಿಗಳು ಸೂಚಿಸಿದ್ದಾರೆ ಎಂದು ವಾಷಿಂಗ್ಟನ್ ಪೋಸ್ಟ್ ಮತ್ತು ವೋಕ್ಸ್ ಸೇರಿದಂತೆ ಅಂತರಾಷ್ಟ್ರೀಯ ವರದಿಗಳು ಸೂಚಿಸಿವೆ. ಮೆಟಾ ಸಂಸ್ಥೆಯು ಕನಿಷ್ಟ 4 ಸಾವಿರ ಉದ್ಯೋಗಗಳನ್ನು ಕಡಿತಗೊಳಿಸಲಿದ್ದು ಮುಂದಿನ ಸುತ್ತಿನ ಉದ್ಯೋಗ ಕಡಿತಗಳು ಇಂದು ಪ್ರಾರಂಭವಾಗುವ ನಿರೀಕ್ಷೆಯಿದೆ ಎನ್ನಲಾಗಿದೆ. ಇತ್ತೀಚೆಗೆ ಎರಡು ಹಂತಗಳಲ್ಲಿ […]