ಮೇ 22 ರಂದು ವಿಹಿಂಪ ವತಿಯಿಂದ ಐನಾಕ್ಸ್ ಚಿತ್ರಮಂದಿರದಲ್ಲಿ ಯುವತಿಯರಿಗಾಗಿ ‘ದಿ ಕೇರಳ ಸ್ಟೋರಿ’ ಉಚಿತ ಪ್ರದರ್ಶನ
ಮಣಿಪಾಲ: ವಿಶ್ವ ಹಿಂದೂ ಪರಿಷದ್ ಬಜರಂಗದಳ ಪೆರ್ಡೂರು ಇವರ ವತಿಯಿಂದ ದಿ ಕೇರಳ ಸ್ಟೋರಿ ಸಿನೆಮಾದ ಉಚಿತ ಪ್ರದರ್ಶನವನ್ನು 18 ವರ್ಷ ಮೇಲ್ಪಟ್ಟ ಹಿಂದೂ ಸಹೋದರಿಯರಿಗೆ, ಮೇ 22 ಸೋಮವಾರ ಬೆಳಿಗ್ಗೆ 10.15 ಕ್ಕೆ ಮಣಿಪಾಲ ಪಿ.ವಿ.ಆರ್.ಐನಾಕ್ಸ್ (PVR INOX) ಥಿಯೇಟರ್ ನಲ್ಲಿ ನಿಗದಿಪಡಿಸಲಾಗಿದೆ. ಆಸಕ್ತರು ಮೇ 21 ಭಾನುವಾರದ ಒಳಗೆ ತಮ್ಮ ಹೆಸರನ್ನು ನೋಂದಾಯಿಸಬೇಕಾಗಿ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:ವಿಶ್ವ ಹಿಂದೂ ಪರಿಷದ್ ಬಜರಂಗದಳ ಪೆರ್ಡೂರು 9916810202/ 9535057073/ 9972968651
ಪಾದಚಾರಿಗಳಿಗೆ ಕಾರು ಡಿಕ್ಕಿ: ಹಲವರಿಗೆ ಗಾಯ; ಓರ್ವ ಮೃತ್ಯುವಶ
ಮಣಿಪಾಲ: ಇಲ್ಲಿನ ಸೆಂಟ್ರಲ್ ಪಾರ್ಕ್ ಹೋಟೇಲ್ ಇಳಿಜಾರು ರಸ್ತೆಯಲ್ಲಿ ತಡರಾತ್ರಿ ಅತಿ ವೇಗದಿಂದ ಬಂದ ಕಾರೊಂದು ಪಾದಚಾರಿಗಳಿಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಹಲವರು ಗಾಯಗೊಂಡಿದ್ದು, ಓರ್ವ ಯುವಕ ಮೃತನಾಗಿದ್ದಾನೆ. ಇಲ್ಲಿನ ಐನಾಕ್ಸ್ ಚಿತ್ರಮಂದಿರದ ಹತ್ತಿರ ಹೋಟೇಲ್ ಒಂದರಲ್ಲಿ ಕೆಲಸ ಮುಗಿಸಿ ಬರುತ್ತಿದ್ದ ಪಶ್ಚಿಮ ಬಂಗಾಲದ ನಿವಾಸಿ ಸಾಹಿನ್ ಎಸ್.ಕೆ(18) ಮೃತಪಟ್ಟ ಯುವಕ. ಇನ್ನುಳಿದ ಇತರ ಪಾದಾಚಾರಿಗಳಾದ ಸುಮಿತ್ ಜಸ್ವಾಲ್, ಸಂಸುಲ್ ಆರೀಫ್ ಹೋಕ್ಯೂ, ಲತೀಫುಲ್ ಚೌಧರಿ, ಸುಕ್ದೇಬ್ ಕರ್ಮರ್ಕರ್ ಇವರಿಗೆ ಕಾರು ಡಿಕ್ಕಿ ಹೊಡೆದಿದೆ. ಈ ಎಲ್ಲರಿಗೂ […]