ತೇಜಸ್ವಿ ಸೂರ್ಯ ವಿಮಾನ ತುರ್ತು ನಿರ್ಗಮನ ಬಾಗಿಲು ತೆರೆದ ಪ್ರಕರಣ: ಸಹ ಪ್ರಯಾಣಿಕ ಅಣ್ಣಾಮಲೈ ಸ್ಪಷ್ಟನೆ

ಚೆನ್ನೈ: ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಚೆನ್ನೈ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನದ ತುರ್ತು ನಿರ್ಗಮನವನ್ನು ಅನಧಿಕೃತವಾಗಿ ತೆರೆದಿದ್ದಾರೆ ಎನ್ನುವ ಆರೋಪದ ನಂತರ, ಬಿಜೆಪಿ ತಮಿಳುನಾಡು ಘಟಕದ ಮುಖ್ಯಸ್ಥ ಕೆ ಅಣ್ಣಾಮಲೈ ಗುರುವಾರದಂದು ಮೌನ ಮುರಿದು ಘಟನೆಯ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ. ಡಿಸೆಂಬರ್ 10 ರಂದು ನಡೆದಿದೆ ಎನ್ನಲಾದ ಘಟನೆಯ ಸಮಯ ವಿಮಾನದಲ್ಲಿ ತೇಜಸ್ವಿ ಸೂರ್ಯ ಅವರ ಪಕ್ಕದಲ್ಲಿ ಕುಳಿತಿದ್ದ ಅಣ್ಣಾಮಲೈ ಅವರು ತಮ್ಮ ಪಕ್ಷದ ಸಹೋದ್ಯೋಗಿ ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದ್ದಾರೆ. TN […]

ಸಂಸದ ತೇಜಸ್ವಿ ಸೂರ್ಯ ಬೇಜವಾಬ್ದಾರಿಯುತ ವರ್ತನೆ ರಿಯಲ್ ಪಪ್ಪುವಿನಂತಾಗಿದೆ: ಪ್ರಖ್ಯಾತ್ ಶೆಟ್ಟಿ

ಉಡುಪಿ: ಚೆನ್ನೈ ವಿಮಾನ ನಿಲ್ದಾಣದಲ್ಲಿ ಯಾವುದೇ ಅನುಮತಿಯಿಲ್ಲದೆ ವಿಮಾನದ ತುರ್ತು ನಿರ್ಗಮನದ ಬಾಗಿಲನ್ನು ತೆರೆದಿರುವ ಆರೋಪ ಹೊಂದಿರುವ ಬೆಂಗಳೂರು ದಕ್ಷಿಣ ಲೋಕಸಭಾ ಸಂಸದ ತೇಜಸ್ವಿ ಸೂರ್ಯ ವರ್ತನೆ ರಿಯಲ್ ಪಪ್ಪುವಿನಂತಾಗಿದೆ. ಹಿಂದೆ ಒಬ್ಬ ಜವಾಬ್ದಾರಿಯುತ ನಾಯಕರಾದ ರಾಹುಲ್ ಗಾಂಧಿಯವರನ್ನು ಹೀಯಾಳಿಸಿಕೊಂಡು ಕಾಲ ಕಳೆಯುತ್ತಿದ್ದ ಬಿಜೆಪಿಗರಿಗೆ ತೇಜಸ್ವಿ ಸೂರ್ಯನ ವರ್ತನೆ ಯಾವ ರೀತಿ ಕಾಣುತ್ತದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ ಪ್ರಶ್ನಿಸಿದ್ದಾರೆ. ಒಬ್ಬ ಜವಾಬ್ದಾರಿಯುತ ಸಂಸದನಾಗಿ ತಾನು ಹೇಗೆ ವರ್ತಿಸಬೇಕು ಎನ್ನುವ ಕನಿಷ್ಠ ಪ್ರಜ್ಞೆ […]