ರೈಲ್ವೆ ಹಳಿ ವಿಸ್ತರಣೆ ಕಾರ್ಯ ಮುಗಿದ ನಂತರ ತಿರುವನಂತಪುರಂ-ಮಂಗಳೂರು ನಡುವೆ ವಂದೇ ಭಾರತ್ ವಿಸ್ತರಣೆ ಸಾಧ್ಯತೆ
ಕೊಚ್ಚಿ: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ತಿರುವನಂತಪುರಂನಿಂದ ಕಾಸರಗೋಡಿಗೆ ಚಾಲನೆ ನೀಡಿದ ಕೇರಳದ ಮೊದಲ ವಂದೇ ಭಾರತ್ ರೈಲನ್ನು ಮುಂದಿನ ದಿನಗಳಲ್ಲಿ ಮಂಗಳೂರಿನವರೆಗೆ ವಿಸ್ತರಿಸುವ ಸಾಧ್ಯತೆಯಿದೆ. ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಹಸಿರು ಬಾವುಟ ತೋರಿದ ನಂತರ ತಮ್ಮ ಭಾಷಣದಲ್ಲಿ, ತಿರುವನಂತಪುರಂ-ಶೋರನೂರು ವಿಭಾಗದಲ್ಲಿ ರೈಲ್ವೆ ಹಳಿ ವಿಸ್ತರಣೆ ಕಾರ್ಯ ಮುಗಿದ ನಂತರ ತಿರುವನಂತಪುರಂ ಮತ್ತು ಮಂಗಳೂರು ನಡುವೆ ಸೆಮಿ ಹೈಸ್ಪೀಡ್ ರೈಲುಗಳನ್ನು ಓಡಿಸಬಹುದು ಎಂದು ಪ್ರಧಾನಿ ಮೋದಿ ಹೇಳಿದರು. ಸಿಗ್ನಲಿಂಗ್ ವ್ಯವಸ್ಥೆಯನ್ನು ಸುಧಾರಿಸಿದ ನಂತರ […]
ಮುಂಬೈ-ರಾಯಚೂರು ರೈಲಿನಲ್ಲಿ ಸಹಪ್ರಯಾಣಿಕರೊಂದಿಗೆ ಸಂವಾದ ನಡೆಸಿದ ನಿರ್ಮಲಾ ಸೀತಾರಾಮನ್
ದೇಶದ ವಿತ್ತ ಸಚಿವೆಯಾಗಿರುವ ಶ್ರೀಮತಿ ನಿರ್ಮಲಾ ಸೀತಾರಾಮನ್ ಸಾಮಾನ್ಯರಂತೆಯೆ ರೈಲಿನಲ್ಲಿ ಪ್ರಯಾಣಿಸಿದ್ದು, ಮುಂಬೈನಿಂದ ರಾಯಚೂರಿಗೆ ತನ್ನ ರೈಲು ಪ್ರಯಾಣದ ಸಮಯದಲ್ಲಿ ಹಮ್ಮು-ಬಿಮ್ಮುಗಳಿಲ್ಲದೆ ಸಹ-ಪ್ರಯಾಣಿಕರೊಂದಿಗೆ ಸಂವಹನ ನಡೆಸುತ್ತಿರುವುದು ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಚಿತ್ರಗಳನ್ನು ನಿರ್ಮಲಾ ಸೀತಾರಾಮನ್ ಅವರ ಕಚೇರಿಯು ಟ್ವಿಟರ್ ನಲ್ಲಿ ಹಂಚಿಕೊಂಡಿದೆ.