ಭಾರತ ಸರ್ಕಾರದ ಪ್ರತಿನಿಧಿಯ ಹತ್ಯೆ ಸಂಚು ರೂಪಿಸಿದ್ದ ಐಸಿಸ್ ಆತ್ಮಹತ್ಯಾ ಬಾಂಬರ್ ರಷ್ಯಾದಲ್ಲಿ ಬಂಧನ
ಮಾಸ್ಕೋ: ರಷ್ಯಾದ ಫೆಡರಲ್ ಸೆಕ್ಯುರಿಟಿ ಸರ್ವಿಸ್ (ಎಫ್‌ಎಸ್‌ಬಿ) ಭಾರತ ಸರ್ಕಾರದ ಪ್ರತಿನಿಧಿಯ ವಿರುದ್ಧ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸುತ್ತಿದ್ದ ಐಸಿಸ್ ಆತ್ಮಹತ್ಯಾ ಬಾಂಬರ್ ಅನ್ನು ಬಂಧಿಸಿದೆ ಎಂದು ರಷ್ಯಾದ ಮಾಧ್ಯಮದಲ್ಲಿ ವರದಿಯಾಗಿದೆ. ರಷ್ಯಾದ ಸುದ್ದಿ ಸಂಸ್ಥೆ ಸ್ಪುಟ್ನಿಕ್ ಪ್ರಕಾರ, ದಾಯೆಶ್ ಭಯೋತ್ಪಾದಕ ಭಾರತದ ಗಣ್ಯ ನಾಯಕರೊಬ್ಬರ ಮೇಲೆ ದಾಳಿ ನಡೆಸಲು ಯೋಜಿಸುತ್ತಿದ್ದ ಎನ್ನಲಾಗಿದೆ. ಸದ್ಯ ಹೊರ ಬರುತ್ತಿರುವ ಮಾಹಿತಿಗಳ ಪ್ರಕಾರ ಬಂಧಿತ ಭಯೋತ್ಪಾದಕ ಟರ್ಕಿಯಲ್ಲಿ ಐಸಿಸ್ ಗೆ ದಾಖಲಾಗಿದ್ದ. ರಷ್ಯಾದಲ್ಲಿ ನಿಷೇಧಿತ ಇಸ್ಲಾಮಿಕ್ ಸ್ಟೇಟ್ ಅಂತರಾಷ್ಟ್ರೀಯ […]
ಯುರೋಪ್ ಅಮೇರಿಕಾಗಳಲ್ಲಿ ಹೆಚ್ಚುತ್ತಿರುವ ಮಂಕಿ ಪಾಕ್ಸ್ ಪ್ರಕರಣ: ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿ ಎಂದ ಕೇಂದ್ರ ಸರ್ಕಾರ
ಹೊಸದಿಲ್ಲಿ: ಬೆಲ್ಜಿಯಂ, ಫ್ರಾನ್ಸ್, ಜರ್ಮನಿ, ಇಟಲಿ, ನೆದರ್‌ಲ್ಯಾಂಡ್ಸ್, ಪೋರ್ಚುಗಲ್, ಸ್ಪೇನ್, ಸ್ವೀಡನ್, ಯುನೈಟೆಡ್ ಸ್ಟೇಟ್ಸ್, ಕೆನಡಾ, ಆಸ್ಟ್ರೇಲಿಯಾ ಮತ್ತು ಯುನೈಟೆಡ್ ಕಿಂಗ್‌ಡಮ್ ಸೇರಿದಂತೆ ಹಲವಾರು ದೇಶಗಳಲ್ಲಿ ಮಂಗನ ಸಿಡುಬು ಕಾಯಿಲೆಯ ಪ್ರಕರಣಗಳು ಹೆಚ್ಚು ವರದಿಯಾಗುತ್ತಿದೆ. ಕೋವಿಡ್-19 ರ ಸಂಕಟ ಇನ್ನೂ ಮುಗಿದಿಲ್ಲದಿರುವ ಈ ವೇಳೆಯಲ್ಲಿ ಜಗತ್ತು ಮತ್ತೊಂದು ಸಾಂಕ್ರಾಮಿಕಕ್ಕೆ ಬಲಿಯಾಗುತ್ತಿದೆಯೆ ಎನ್ನುವ ಅನುಮಾನ ಹಲವರನ್ನು ಕಾಡುತ್ತಿದೆ. ಈ ಮಧ್ಯೆ ಈ ಪ್ರಕರಣಗಳನ್ನು ಸೂಕ್ಷ್ಮವಾಗಿ ಗಮನಿಸಿ, ಮಂಕಿಪಾಕ್ಸ್ ಪೀಡಿತ ದೇಶಗಳಿಗೆ ಪ್ರಯಾಣದ ಇತಿಹಾಸ ಹೊಂದಿರುವ ಯಾವುದೇ ಅಸ್ವಸ್ಥ ಪ್ರಯಾಣಿಕರನ್ನು […]