ವಿಶ್ವಕಪ್ ನಿಂದ ಶಿಖರ್ ಧವನ್ ಔಟ್..! ಬೆರಳಿನ ಗಾಯದ ಸಮಸ್ಯೆ ಹಿನ್ನೆಲೆ
ನವದೆಹಲಿ: ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಭರ್ಜರಿ ಪ್ರದರ್ಶನ ತೋರುತ್ತಿರುವ ಸಮಯದಲ್ಲೇ ತಂಡಕ್ಕೆ ದೊಡ್ಡ ಆಘಾತ ಎದುರಾಗಿದ್ದು, ಆರಂಭಿಕ ಆಟಗಾರ ಶಿಖರ್ ಧವನ್ ಗಾಯದ ಸಮಸ್ಯೆಯಿಂದ ವಿಶ್ವಕಪ್ನಿಂದ ಹೊರಗುಳಿದಿದ್ದಾರೆ. ಕಳೆದ ಆಸ್ಟ್ರೇಲಿಯಾ ವಿರುದ್ದದ ಪಂದ್ಯದ ವೇಳೆ ಎಡಗೈ ಹೆಬ್ಬರಳಿಗೆ ಗಾಯವಾಗಿತ್ತು. ಹೀಗಾಗಿ ವೈದ್ಯಾಧಿಕಾರಿಗಳು ಪರೀಕ್ಷೆ ನಡೆಸಿದ್ದು, ಇನ್ನು ಮೂರು ವಾರಗಳ ಕಾಲ ವಿಶ್ರಾಂತಿ ಮಾಡುವಂತೆ ಸೂಚಿಸಿದ್ದಾರೆ. ಬೆರಳಿಗೆ ಆಗಿರುವ ಗಾಯದ ಪ್ರಮಾಣವನ್ನು ಪತ್ತೆ ಹಚ್ಚಲು ಸ್ಕಾನಿಂಗ್ ಮಾಡಲಾಗಿದ್ದು, ಅನಂತರ ವರದಿ ಪರಿಶೀಲಿಸಿದ ವೈದ್ಯರು, ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ. ಆಸ್ಟ್ರೇಲಿಯಾ […]
ವಿಶ್ವಕಪ್ ಗೆ ಟೀಂ ಇಂಡಿಯ ತಂಡ ಪ್ರಕಟ, ಕನ್ನಡಿಗ ಕೆಎಲ್ ರಾಹುಲ್ ಗೆ ಸ್ಥಾನ
ಮುಂಬೈ: 2019 ವಿಶ್ವಕಪ್ ಟೂರ್ನಿಗೆ 15 ಸದಸ್ಯರ ಟೀಂ ಇಂಡಿಯಾವನ್ನು ಸೋಮವಾರ ಬಿಸಿಸಿಐ ಪ್ರಕಟಿಸಿದೆ. ಕನ್ನಡಿಗ ಕೆ.ಎಲ್ ರಾಹುಲ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಋಷಬ್ ಪಂತ್ ಅವರನ್ನು ತಂಡದಿಂದ ಕೈ ಬಿಡಲಾಗಿದೆ. ನಾಯಕ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಬಲಿಷ್ಠ ತಂಡವನ್ನೇ ಆಯ್ಕೆ ಮಾಡಿದೆ. ವಿಶ್ವಕಪ್ ಆರಂಭಕ್ಕೆ ಇನ್ನು 50 ದಿನಗಳು ಮಾತ್ರ ಬಾಕಿ ಇದೆ. ಮುಂಬೈನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಎಂ.ಎಸ್.ಕೆ ಪ್ರಸಾದ್ ತಂಡವನ್ನು ಪ್ರಕಟಿಸಿದ್ದು, ಅದಕ್ಕೂ ಮುನ್ನ ಆಯ್ಕೆ ಸಮಿತಿ […]
ಭಾರತಕ್ಕೆ ಮರಳಿದ ವೀರಯೋಧ ಅಭಿನಂದನ್: ಧೀರನಿಗೆ ಉಘೇ ಉಘೇ ಎಂದರು ಭಾರತೀಯರು
ರಾಷ್ಟ್ರ: ಪಾಕ್ ವಶದಲ್ಲಿದ್ದ ವಿಗ್ ಕಮಾಂಡರ್ ಅಭಿನಂದನ್ ಅವರನ್ನು ಪಾಕಿಸ್ತಾನ ಅಧೀಕೃತವಾಗಿ ಹಸ್ತಾಂತರಿಸಿದೆ.ಇದೀಗ ವಾಘಾ ಗಡಿಯತ್ತ ಬಂದಿರುವ ಅಭಿನಂದನ್ ಅವರನ್ನು ಸೇನಾಧಿಕಾರಿಗಳು, ಸರಕಾರಿ ಮುಖ್ಯಸ್ಥರು, ಭರಮಾಡಿಕೊಂಡಿದ್ದಾರೆ.ಅಭಿನಂದನ್ ಅವರನ್ನು ಸದ್ಯ ಸಾರ್ವಜನಿಕರ ಎದುರು ಮುಖಾಮುಖಿಯಾಗಿಸದೇ, ವಿವಿಧ ಆರೋಗ್ಯ ತಪಾಸಣೆ ಸೇರಿದಂತೆ,ಇತರ ಪ್ರಕ್ರಿಯೆಗೊಳಪಡಿಸುತ್ತೇವೆ, ಇದಕ್ಕೋಸ್ಕರ ವಿಮಾನದಲ್ಲಿ ಅಭಿನಂದನ್ ಅವರನ್ನು ದೆಹಲಿಗೆ ಕರೆದೊಯ್ಯಲಾಗುವುದು ಎಂದು ಸೇನಾ ಮುಖ್ಯಸ್ಥರು ತಿಳಿಸಿದ್ದಾರೆ. ಮುಂದೆಯೂ ಅಭಿನಂದನ್ ಅವರು ವಿಗ್ ಕಮಾಂಡರ್ ಆಗಿ ಸೇವೆ ಸಲ್ಲಿಸಲಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.
ಪಾಕ್ ಗೆ ಬಿಗ್ ಶಾಕ್: ಉಗ್ರರ ಅಡ್ಡಾ ಚೆಲ್ಲಾಡಿದ ಭಾರತ, ಉಗ್ರರನ್ನು ಮಟಾಶ್ ಮಾಡಿತು ಸೇನೆ
ನವದೆಹಲಿ: ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಎಲ್‍ಓಸಿ (ಪಾಕ್ ಆಕ್ರಮಿತ ಕಾಶ್ಮೀರ) ಭಾಗದಲ್ಲಿ ಬೀಡುಬಿಟ್ಟಿದ್ದ ಉಗ್ರರ ನೆಲೆಯನ್ನು ಭಾರತೀಯ ವಾಯು ಸೇನೆ ಮಂಗಳವಾರ ಮುಂಜಾವಿನ ವೇಳೆ ಧ್ವಂಸಗೊಳಿಸಿದೆ. ಗಡಿ ಪ್ರದೇಶದಲ್ಲಿ ಬೀಡುಬಿಟ್ಟಿದ್ದ ಜೈಷ್-ಎ-ಮೊಹಮ್ಮದ್ ಸಂಘಟನೆಯ ಉಗ್ರರ ನೆಲೆಯ ಮೇಲೆ ಬರೋಬ್ಬರಿ ಸಾವಿರ ಕೆಜಿಯ ಬಾಂಬ್ ಹಾಕಲಾಗಿದೆ ಎನ್ನಲಾಗಿದೆ.ಅಲ್ಲಿದ್ದ ಉಗ್ರರ ಸಂಘಟನೆಯ ಕ್ಯಾಂಪ್ ಸಂಪೂರ್ಣ ಧ್ವಂಸವಾಗಿದ್ದು, ಪುಲ್ವಾಮಾ ದಾಳಿಗೆ ದಿಟ್ಟ ಪ್ರತೀಕಾರವನ್ನು ಭಾರತ ತೆಗೆದುಕೊಂಡಿದ್ದು, ಈ ಬಗ್ಗೆ ಅಧಿಕೃತ ಮಾಹಿತಿ ಹೊರಬರಬೇಕಿದೆ.